ಅತಿಹೆಚ್ಚು ಕೋವಿಡ್ ಪ್ರಕರಣ ದಾಖಲಾಗುವ ಟಾಪ್ 3 ಪಟ್ಟಿಯಲ್ಲಿ ಕರ್ನಾಟಕ!

ಭಾರತವೀಗ ಒಂದೇ ದಿನ ಸುಮಾರು 79,000 ಕೋವಿಡ್ -19 ಪ್ರಕರಣಗಳನ್ನು ದಾಖಲಿಸುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲೇ ಹೆಚ್ಚು ಕೋವಿಡ್ ಪ್ರಕರಣ ದಾಖಲಿಸುತ್ತಿರುವ ಮೂರು ರಾಜ್ಯಗಳ ಪೈಕಿ  ಕರ್ನಾಟಕವೂ ಒಂದೆಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಘೋಷಿಸಿದೆ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಇತರೆ ಎರಡು ರಾಜ್ಯಗಳಾಗಿದೆ. ಈ ಮೂರು ರಾಜ್ಯಗಳು ದೇಶದ ಕೋವಿಡ್ ಸೋಂಕು ಪ್ರಕರಣ
ಅತಿಹೆಚ್ಚು ಕೋವಿಡ್ ಪ್ರಕರಣ ದಾಖಲಾಗುವ ಟಾಪ್ 3 ಪಟ್ಟಿಯಲ್ಲಿ ಕರ್ನಾಟಕ!

ಬೆಂಗಳೂರು: ಭಾರತವೀಗ ಒಂದೇ ದಿನ ಸುಮಾರು 79,000 ಕೋವಿಡ್ -19 ಪ್ರಕರಣಗಳನ್ನು ದಾಖಲಿಸುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲೇ ಹೆಚ್ಚು ಕೋವಿಡ್ ಪ್ರಕರಣ ದಾಖಲಿಸುತ್ತಿರುವ ಮೂರು ರಾಜ್ಯಗಳ ಪೈಕಿ  ಕರ್ನಾಟಕವೂ ಒಂದೆಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಘೋಷಿಸಿದೆ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಇತರೆ ಎರಡು ರಾಜ್ಯಗಳಾಗಿದೆ. ಈ ಮೂರು ರಾಜ್ಯಗಳು ದೇಶದ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆಯ ಶೇ 43 ರಷ್ಟು ಪಾಲು ಹೊಂದಿವೆ.

ಭಾರತದ ಒಟ್ಟು ಕೋವಿಡ್ ಕರಣಗಳಲ್ಲಿ. ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕ ಮೂರು ರಾಜ್ಯಗಳಲ್ಲಿ ಸುಮಾರು 43 ಶೇಕಡಾ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಕಳೆದ 24 ಗಂಟೆಗಳಲ್ಲಿ ಏಳು ರಾಜ್ಯಗಳು ಹೊಸ ಕೋವಿಡ್  ಪ್ರಕರಣಗಳಲ್ಲಿ 70 ಪ್ರತಿಶತದಷ್ಟು ಪಾಲು ಹೊಂದಿದೆ. ಈ ಪೈಕಿ ಮಹಾರಾಷ್ಟ್ರವು ಗರಿಷ್ಠ  ಪಾಲು  ಸುಮಾರು 21 ಪ್ರತಿಶತದಷ್ಟು ಕೊಡುಗೆ ನೀಡಿದೆ, ಆಂಧ್ರಪ್ರದೇಶವು 13.5 ಪ್ರತಿಶತ, ಕರ್ನಾಟಕ 11.27 ಮತ್ತು ತಮಿಳುನಾಡು 8.27 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.

ಆದಾಗ್ಯೂ, ರಾಜ್ಯದ ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಪ್ರಕಾರ, ಕರ್ನಾಟಕದ ಕೊಡುಗೆ ಹೆಚ್ಚಾಗಿದೆ ಏಕೆಂದರೆ ಪರೀಕ್ಷೆ ಅಥವಾ ಟೆಸ್ಟಿಂಗ್ ಏರಿಕೆಯಾಗಿದೆ. ಆಂಧ್ರಪ್ರದೇಶದಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಯ ಟೆಸ್ಟಿಂಗ್ ಗೆ ಹೋಲಿಸಿದರೆ ರಾಜ್ಯದಲ್ಲಿ ಟೆಸ್ಟಿಂಗ್ ಪ್ರಮಾಣ ಹೆಚ್ಚಿದೆ. ಈ ಮೊದಲು ಉತ್ತುಂಗಕ್ಕೇರಿದ್ದ ಮಹಾರಾಷ್ಟ್ರ ಮತ್ತು ದೆಹಲಿಗೆ ಹೋಲಿಸಿದರೆ ಈ ಎರಡು ರಾಜ್ಯಗಳಲ್ಲಿ  ಸೋಂಕು ಉಲ್ಬಣಿಸಿದೆ.  "ಈ ಮೂರು ರಾಜ್ಯಗಳು ಭಾರತದ ಒಟ್ಟು ಜನಸಂಖ್ಯೆಯ ಕೇವಲ 18% ನಷ್ಟು ಜನಸಂಖ್ಯೆಯನ್ನು ಹೊಂದಿವೆ, ಆದರೆ ಒಟ್ಟು ಪರೀಕ್ಷೆಗಳು ದೇಶದಲ್ಲಿ ಮಾಡಿದ ನಾಲ್ಕನೇ ಒಂದು ಭಾಗದಷ್ಟು ಪರೀಕ್ಷೆಗಳಿಗೆ ಕಾರಣವಾಗಿವೆ. ಇದರರ್ಥ  ಕೋವಿಡ್ ಪರೀಕ್ಷೆ ನಡೆಸುವ  ರಾಜ್ಯಗಳು ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ವರದಿ ಮಾಡುತ್ತವೆ ಮತ್ತು ಚ್ರಾಸ್ ಲೈನ್ ಅನ್ನು ವೇಗವಾಗಿ  ಸರಿಪಡಿಸುವ ಅವಕಾಶವನ್ನು ಹೊಂದಿವೆ ”ಎಂದು ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಕೋವಿಡ್ -19 ತಾಂತ್ರಿಕ ಸಮಿತಿಯ ಸದಸ್ಯ ಡಾ.ಗಿರಿಧರ ಆರ್ ಬಾಬು ವಿವರಿಸಿದರು.

ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋವಾಸ್ಕುಲರ್ ಸೈನ್ಸಸ್ ಅಂಡ್ ರಿಸರ್ಚ್ ನಿರ್ದೇಶಕ ಮತ್ತು ರಾಜ್ಯ ಕೋವಿಡ್ ಟಾಸ್ಕ್ ಫೋರ್ಸ್ ಸದಸ್ಯ ಡಾ.ಎನ್.ಎನ್.ಮಂಜುನಾಥ್ ಮಾತನಾಡಿ , “ಅನೇಕ ಉತ್ತರದ ರಾಜ್ಯಗಳು ಟೆಸ್ಟಿಂಗ್ ಪ್ರಮಾಣ ಕಡಿಮೆ ಮಾಡಿದೆ, ಆದ್ದರಿಂದ ಅವರ ಸೋಂಕಿತರ ಸಂಖ್ಯೆಯು ನಿಜವಾದ ಸೋಂಕಿತರ ಪ್ರಮಾಣವಾಗಿರುವುದಿಲ್ಲ.  ಅವರು ಉತ್ತಮ ನಿಯಂತ್ರಣದಲ್ಲಿದ್ದಾರೆ ಎಂಬ ಅಭಿಪ್ರಾಯವನ್ನು ಇದು ನೀಡುತ್ತದೆ. ”ಅಷ್ಟರಲ್ಲಿ, ಕರ್ನಾಟಕವು ಕಳೆದ ಕೆಲವು ದಿನಗಳಿಂದ ದೈನಂದಿನ ಪರೀಕ್ಷೆಯನ್ನು ಹೆಚ್ಚಿಸುತ್ತಿದೆ. ಆಗಸ್ಟ್ 1 ರಂದು ರಾಜ್ಯದಲ್ಲಿ  ಪ್ರತಿ ಮಿಲಿಯನ್ ಜನಸಂಖ್ಯೆಗೆ 22,097 ಮಂದಿಗೆ ಟೆಸ್ಟಿಂಗ್ ಮಾಡಲಾಗಿದೆ.  ಅದೇ ವೇಳೆ  ಆಗಸ್ಟ್ 30 ರಂದು ಇದು ಪ್ರತಿ ಮಿಲಿಯನ್ ಜನಸಂಖ್ಯೆಗೆ 46,665 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ ಜನರು ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ಅವರನ್ನು  ಒತ್ತಾಯಿಸುವುದರ ಬಗ್ಗೆ ಮತ್ತು ಪ್ರಯೋಗಾಲಯಗಳಿಂದ ಹಲವಾರು ಸುಳ್ಳು  ಪಾಸಿಟಿವ್  ವರದಿಗಳ ಬಗ್ಗೆ ಹಲವಾರು ದೂರುಗಳು ಬಂದಿವೆ. "ನಾವು ಪರೀಕ್ಷಾ ಸಂಖ್ಯೆಯನ್ನು ಹೆಚ್ಚಿಸುತ್ತೇವೆ ಎಂದು ಖಚಿತಪಡಿಸಿಕೊಳ್ಳಲು, ಆಸ್ಪತ್ರೆಗಳು ಜನರನ್ನು ಪರೀಕ್ಷೆಗಳಿಗೆ ಒಳಪಡಿಸುವಂತೆ ಒತ್ತಾಯಿಸುತ್ತಿವೆ. ಅಲ್ಲದೆ, ಲ್ಯಾಬ್‌ಗಳು ಹೆಚ್ಚಿನ ಹೊರೆಯಾಗಿರುತ್ತವೆ. ಇದನ್ನು ಮಾಡಬಾರದು ”ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಮಧ್ಯೆ, ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶವು ಕಳೆದ 24 ಗಂಟೆಗಳಲ್ಲಿ ಕೋವಿಡ್ -19 ಸಾವುಗಳಲ್ಲಿ ಸುಮಾರು 50 ಪ್ರತಿಶತದಷ್ಟನ್ನು ದಾಖಲಿಸಿದೆ.

ಆದರೆ ಈ ಸಂಬಂಧ ಹೆಚ್ಚು ಚಿಂತೆಗೀಡಾಗುವ ಮುನ್ನ  ಆಂಧ್ರಪ್ರದೇಶ ಮತ್ತು ಕರ್ನಾಟಕದಂತಹ ರಾಜ್ಯಗಳನ್ನು ಉತ್ತಮ ಮಾದರಿಗಳಾಗಿ ತೋರಿಸಬೇಕು ಎಂದು  ಡಾ.ಬಾಬು ಹೇಳಿದರು. "ಆಂಧ್ರಪ್ರದೇಶವು ಮರಣ ಪ್ರಮಾಣವನ್ನು ಒಟ್ಟು ಪ್ರಕರಣಗಳಲ್ಲಿ 1% ಕ್ಕಿಂತ ಕಡಿಮೆದಾಖಲಿಸುತ್ತಿದೆ. ಹೆಚ್ಚಿನ ಜನಸಂಖ್ಯೆ ಹೊಂದಿಯೂ ಕಡಿಮೆ ಪರೀಕ್ಷೆ ಮತ್ತು ಕೆಲವು ಪ್ರಕರಣಗಳನ್ನು ವರದಿ ಮಾಡುವ ರಾಜ್ಯದ ಬಗೆಗೆ ನನಗೆ ಅನುಮಾನವಿದೆ, ಭಾರತದ ಜನಸಂಖ್ಯೆಯ 39% ರಷ್ಟಿರುವ ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಉತ್ತರಾಖಂಡ. ಎಲ್ಲವೂ ಇನ್ನೂ ಒಟ್ಟೂ ಜನಸಂಖ್ಯೆಯಲ್ಲಿ ಶೇ.  21ರಷ್ಟು ಮಂದಿಯನ್ನಷ್ಟೇ ಪರೀಕ್ಷಿಸಿದೆ.  ಇದು ಮೂರು ಅತಿಹೆಚ್ಚು ಸೋಂಕಿತ ರಾಜ್ಯಗಳಲ್ಲಿ ನಡೆದಿರುವ ಪರೀಕ್ಷೆಗಿಂತ ತೀರಾ ಕಡಿಮೆ." ಅವರು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com