ಡಾ.ಬ್ರೇವ್ ಹೆಸರಿನಿಂದ ಗುರುತಿಸಿಕೊಂಡಿದ್ದ ನೇತ್ರ ತಜ್ಞ ಅಬ್ದುಲ್ ರೆಹಮಾನ್- ಎನ್ ಐಎ

 ಐಎಸ್ ಐಎಸ್ ಉಗ್ರ ಸಂಘಟನೆಯೊಂದಿಗೆ ನಂಟಿನ ಆರೋಪದ ಹಿನ್ನೆಲೆಯಲ್ಲಿ  ಬೆಂಗಳೂರು ಮೂಲದ ನೇತ್ರ ತಜ್ಞ ಅಬ್ದುಲ್ ರೆಹಮಾನ್ ಸೇರಿದಂತೆ ಇತರ ನಾಲ್ವರ ವಿರುದ್ಧ ಎನ್ ಐಎ ಚಾರ್ಜ್ ಶೀಟ್ ದಾಖಲಿಸಿದ್ದು,ಅಬ್ದುಲ್ ರೆಹಮಾನ್  ಡಾ. ಬ್ರೇವ್ ಎನ್ನುವ ಹೆಸರಿನಿಂದ ಗುರುತಿಸಿಕೊಂಡಿದ್ದಾಗಿ  ತಿಳಿಸಿದೆ.
ಅಬ್ದುಲ್ ರೆಹಮಾನ್
ಅಬ್ದುಲ್ ರೆಹಮಾನ್

ಬೆಂಗಳೂರು: ಐಎಸ್ ಐಎಸ್ ಉಗ್ರ ಸಂಘಟನೆಯೊಂದಿಗೆ ನಂಟಿನ ಆರೋಪದ ಹಿನ್ನೆಲೆಯಲ್ಲಿ  ಬೆಂಗಳೂರು ಮೂಲದ ನೇತ್ರ ತಜ್ಞ ಅಬ್ದುಲ್ ರೆಹಮಾನ್ ಸೇರಿದಂತೆ ಇತರ ನಾಲ್ವರ ವಿರುದ್ಧ ಎನ್ ಐಎ ಚಾರ್ಜ್ ಶೀಟ್ ದಾಖಲಿಸಿದ್ದು,ಅಬ್ದುಲ್ ರೆಹಮಾನ್  ಡಾ. ಬ್ರೇವ್ ಎನ್ನುವ ಹೆಸರಿನಿಂದ ಗುರುತಿಸಿಕೊಂಡಿದ್ದಾಗಿ  ತಿಳಿಸಿದೆ.

ಇಸ್ಲಾಮಿಕ್‌ ಸ್ಟೇಟ್‌ ಖೋರಾಸಾನ್‌ ಪ್ರಾಂತ್ಯ (ಐಎಸ್‌ಕೆಪಿ) ಸಂಘಟನೆಯೊಂದಿಗೆ ನಂಟು ಆರೋಪದ ಹಿನ್ನೆಲೆಯಲ್ಲಿ ಆಗಸ್ಟ್ 18ರಂದು
ಎನ್ ಐಎ ಅಧಿಕಾರಿಗಳು ರೆಹಮಾನ್ ನನ್ನು ಬಂಧಿಸಿದ್ದರು. 

ಅಬ್ದುಲ್ ರೆಹಮಾನ್ ಆಲಿಯಾಸ್ ಡಾ. ಬ್ರೇವ್  ಐಎಸ್ ಐಎಸ್ ,ಐಎಸ್ ಕೆಪಿಯ ಸಂಚಿನ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ದೆಹಲಿಯ ಜಹಾನ್ ಝೈಬ್ ಸಮಿಯಸಂಪರ್ಕದಲ್ಲಿದ್ದ, ಅಲ್ಲದೇ, 2014ರಲ್ಲಿ ಸಿರಿಯಾದಲ್ಲಿನ ಐಎಸ್ ಐಎಸ್ ಮೆಡಿಕಲ್ ಕ್ಯಾಂಪ್ ಗೆ ಹೋಗಿ ಬಂದಿದ್ದ ಎಂದು ಎನ್ ಐಎ ಮಾಹಿತಿ ನೀಡಿದೆ.

ರೆಹಮಾನ್ ಮತ್ತಿತರ ಶಂಕಿತರು ನಡೆಸಿರುವ ಕೃತ್ಯಗಳ ಬಗ್ಗೆ ತನಿಖೆ ನಡೆಯುತ್ತಿದೆ. ರೆಹಮಾನ್ ತಂದೆ ಕೂಡಾ ನೇತ್ರ ತಜ್ಞರಾಗಿದ್ದು, ಅವರು ಕುಟುಂಬ ಆತಂಕದಲ್ಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮಧ್ಯೆ ಐಎಸ್ ಕೆಪಿಯೊಂದಿಗೆ ನಂಟು ಆರೋಪದ ಹಿನ್ನೆಲೆಯಲ್ಲಿ ಐದು ಮಂದಿಯ ವಿರುದ್ಧ ದೆಹಲಿಯ ವಿಶೇಷ ನ್ಯಾಯಾಲಯವೊಂದರಲ್ಲಿ ಚಾರ್ಚ್ ಶೀಟ್ ದಾಖಲಿಸಿದೆ.

ದೆಹಲಿಯ ಜಹಾನ್ ಝೈಬ್ ಸಮಿ, ಕಾಶ್ಮೀರದ ಹೀನಾ ಬಸೀರ್, ಹೈದ್ರಾಬಾದಿನ ಅಬ್ದುಲ್ಲಾ ಬಸಿತ್ ಮತ್ತು ಪುಣೆಯ ಸಾದಿಯಾ ಅನ್ವಾರ್ ಸೈಕ್ ಮತ್ತು ನಾಬೀಲ್ ಸಿದ್ದಿಕ್ ಖಾತ್ರಿ ವಿರುದ್ದ  ಎನ್ ಐಎ ಚಾರ್ಜ್ ಶೀಟ್ ದಾಖಲಿಸಿದ್ದು, ತನಿಖೆ ಮುಂದುವರೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com