ವೈದ್ಯಕೀಯ ಶಿಕ್ಷಣ ಸಚಿವರೇ, ಕೊರೋನಾ ಸಾವಿನ ಅಂಕಿ ಸಂಖ್ಯೆಗಳ ಬಗ್ಗೆ ಆತ್ಮಾವಲೋಕ ಮಾಡಿಕೊಳ್ಳಿ- ಎಚ್ ಕೆ ಪಾಟೀಲ್
ವೈದ್ಯಕೀಯ ಶಿಕ್ಷಣ ಸಚಿವರೇ, ಕೊರೋನಾ ಸಾವಿನ ಅಂಕಿ-ಸಂಖ್ಯೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಮಾಜಿ ಸಚಿವ, ಹಾಲಿ ಶಾಸಕ ಎಚ್.ಕೆ.ಪಾಟೀಲ್ ಹೇಳುವ ಮೂಲಕ ಸರ್ಕಾರವನ್ನು ಎಚ್ಚರಿಸಿದ್ದಾರೆ.
Published: 03rd September 2020 12:13 PM | Last Updated: 03rd September 2020 12:18 PM | A+A A-

ಎಚ್. ಕೆ. ಪಾಟೀಲ್, ಸುಧಾಕರ್
ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವರೇ, ಕೊರೋನಾ ಸಾವಿನ ಅಂಕಿ-ಸಂಖ್ಯೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಮಾಜಿ ಸಚಿವ, ಹಾಲಿ ಶಾಸಕ ಎಚ್.ಕೆ.ಪಾಟೀಲ್ ಹೇಳುವ ಮೂಲಕ ಸರ್ಕಾರವನ್ನು ಎಚ್ಚರಿಸಿದ್ದಾರೆ.
ದೇಶದಲ್ಲಿ ಸಾವಿನ ಸಂಖ್ಯೆ ದಶಲಕ್ಷಕ್ಕೆ 42. ಕರ್ನಾಟಕದಲ್ಲಿ ದಶಲಕ್ಷಕ್ಕೆ 83 ಇದೆ. ನೆನಪಿರಲಿ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ಜನವರಿಯಿಂದ ಜುಲೈವರೆಗೆ ಶೇಕಡಾ 32ರಷ್ಟು ಹೆಚ್ಚಳ ಕಂಡಿದೆ ಎಂದು ಅವರು ಹೇಳಿದ್ದಾರೆ.
ಸುಳ್ಳು ಮಾಹಿತಿಗಳನ್ನು ಜನರಿಗೆ ನೀಡಿ ಸಮರ್ಥನೆಗಳನ್ನು ಮಾಡಿಕೊಳ್ಳುವ ನಿಮ್ಮ ಪ್ರಯತ್ನ ಸಂಕಷ್ಟದ ಈ ಕಾಲದಲ್ಲಿ ಆಘಾತಕಾರಿ. ಸತ್ಯವಾದ ಮಾಹಿತಿ ಜನರ ಜೊತೆಗೆ ಹಂಚಿಕೊಳ್ಳಿ, ಕೊರತೆಗಳನ್ನು ನೀಗಿಸಲು ಯುದ್ದೋಪಾದಿಯಲ್ಲಿ ಕೆಲಸ ಮಾಡಲು ಆಡಳಿತ ಯಂತ್ರ ಚುರುಕುಗೊಳಿಸಿ ಎಂದು ಎಚ್.ಕೆ.ಪಾಟೀಲ್ ಟ್ವೀಟ್ ಮೂಲಕ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರಿಗೆ ತಿರುಗೇಟು ನೀಡಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವರೇ ಸಾವಿನ ಅಂಕಿ-ಸಂಖ್ಯೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ. ಭಾರತದಲ್ಲಿ ಸಾವಿನ ಸಂಖ್ಯೆ ದಶಲಕ್ಷಕ್ಕೆ 42. ಕರ್ನಾಟಕದಲ್ಲಿ ದಶಲಕ್ಷಕ್ಕೆ 83 ಇದೆ. ನೆನಪಿರಲಿ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ಜನೇವರಿಯಿಂದ ಜುಲೈವರೆಗೆ ಶೇ. 32ರಷ್ಟು ಹೆಚ್ಚಳ ಕಂಡಿದೆ. @BSYBJP @mla_sudhakar
— HK Patil (@HKPatil1953) September 3, 2020