ಮೈಸೂರು: ಹಿರಿಯ ನಾಗರಿಕರಿಗೆ ವಿಶೇಷ ಕೊವಿಡ್ ಆಸ್ಪತ್ರೆ

ಸಾಂಸ್ಕೃತಿಕ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಮೈಸೂರಿನಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ಪ್ರಮುಖವಾಗಿ ವಯಸ್ಸಾದ ಹಿರಿಯ ನಾಗರೀಕರನ್ನು ಸೋಂಕು ಇನ್ನಿಲ್ಲದಂತೆ ಕಾಡುತ್ತಿದೆ. ಇದೇ ಕಾರಣತ್ತೆ ಮೈಸೂರಿನಲ್ಲಿ ಹಿರಿಯ ನಾಗರಿಕರಿಗೆಂದೇ ವಿಶೇಷ ಕೋವಿಡ್ ಆಸ್ಪತ್ರೆ  ತೆರೆಯಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಸಾಂಸ್ಕೃತಿಕ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಮೈಸೂರಿನಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ಪ್ರಮುಖವಾಗಿ ವಯಸ್ಸಾದ ಹಿರಿಯ ನಾಗರೀಕರನ್ನು ಸೋಂಕು ಇನ್ನಿಲ್ಲದಂತೆ ಕಾಡುತ್ತಿದೆ. ಇದೇ ಕಾರಣತ್ತೆ ಮೈಸೂರಿನಲ್ಲಿ ಹಿರಿಯ ನಾಗರಿಕರಿಗೆಂದೇ ವಿಶೇಷ ಕೋವಿಡ್ ಆಸ್ಪತ್ರೆ  ತೆರೆಯಲಾಗಿದೆ.

ಮೈಸೂರಿನ ಹುಣಸೂರ ರಸ್ತೆಯಲ್ಲಿರುವ ಬಸಪ್ಪ ಮೆಮೋರಿಯಲ್ ಆಸ್ಪತ್ರೆ (ಬಿಎಂಹೆಚ್) ಕೋವಿಡ್ ಸೋಂಕು ಪೀಡಿತ ಹಿರಿಯ ನಾಗರಿಕರಿಗೆಂದೇ ಮೀಸಲಿಡಲಾಗಿದೆ. ಇದಕ್ಕಾಗಿ ಬಿಎಂಹೆಚ್ ಆಸ್ಪತ್ರೆಯಲ್ಲಿ 100 ವಿಶೇಷ ಬೆಡ್ ಗಳ ವ್ಯವಸ್ಥೆ ಮಾಡಲಾಗಿದ್ದು, ಆಕ್ಸಿಜನ್ ಸೇರಿದಂತೆ ಹಲವು ಅತ್ಯಾವಶ್ಯಕ ವ್ಯವಸ್ಥೆಯನ್ನು  ಕಲ್ಪಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಮೈಸೂರು ಸಿಟಿ ಕಾರ್ಪೋರೇಷನ್ ನ ಡಾ.ಜಯಂತ್ ಅವರು, ಜೆರಿಯಾಟ್ರಿಕ್ ಆಸ್ಪತ್ರೆಯನ್ನು ಸ್ಥಾಪಿಸಲು ಜಿಲ್ಲಾ ಕೋವಿಡ್ ಟಾಸ್ಕ್ ಫೋರ್ಸ್ ಸಭೆಯಲ್ಲಿ ನಿರ್ಣಯಿಸಲಾಯಿತು. ಮೈಸೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಪ್ರಮುಖವಾಗಿ ಹಿರಿಯ ನಾಗರಿಕರೂ ಕೂಡ ಹೆಚ್ಚಾಗಿ  ಸೋಂಕಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಪರಿಸ್ಥಿತಿಯನ್ನು ನಿಭಾಯಿಸಲು ನಾನು ಬಿಎಂ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಭೂಗತ ಒಳಚರಂಡಿ ಮತ್ತು ನೀರು ಸರಬರಾಜಿನಲ್ಲಿ ಸಮಸ್ಯೆ ಇದೆ, ಅದನ್ನು ಈಗ ಪರಿಹರಿಸಲಾಗಿದೆ. ಜಿಲ್ಲಾಧಿಕಾರಿ ಅನುಮೋದನೆ ನೀಡಿದ ಕೂಡಲೇ ಆಸ್ಪತ್ರೆಯಲ್ಲಿ ಇತರ ಸೌಲಭ್ಯಗಳನ್ನು  ನವೀಕರಿಸಲಾಗುವುದು ಎಂದು ಹೇಳಿದ್ದಾರೆ. 

ಇದೇ ವಿಚಾರವಾಗಿ ಮಾತನಾಡಿದ ಶಾಸಕ ರಾಮದಾಸ್ ಅವರು, ಜಿಲ್ಲೆಯಲ್ಲಿ ಸಂಭವಿಸಿದ ಕೋವಿಡ್-19 ಸಾವುಗಳಲ್ಲಿ ಹೆಚ್ಚಿನವು ಹಿರಿಯನಾಗರಿಕರದ್ದಾಗಿದೆ. ಹೀಗಾಗಿ ವೈದ್ಯರು ಬಿಎಂಹೆಚ್ ಅನ್ನು ಜೆರಿಯಾಟ್ರಿಕ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಸಲಹೆ ನೀಡಿದರು. ಹೀಗಾಗಿ ಆಮ್ಲಜನಕ ಹಾಸಿಗೆಗಳ ಬೇಡಿಕೆಯು  ಪ್ರಕರಣಗಳ ಹೆಚ್ಚಳದೊಂದಿಗೆ ಹೆಚ್ಚಾಗಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. 

ಇನ್ನು ಮೈಸೂರಿನಲ್ಲಿ ಪತ್ತೆಯಾಗಿರುವ ಒಟ್ಟಾರೆ ಸೋಂಕಿತರ ಪೈಕಿ 7 ಸಾವಿರಕ್ಕೂ ಅಧಿಕ ಮಂದಿ 50 ವರ್ಷ ದಾಟಿದವರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com