ಬಳ್ಳಾರಿ: ನವಜಾತ ಮಕ್ಕಳಿಗೆ ಕೋವಿಡ್ ವಾರಿಯರ್ಸ್, ವೈದ್ಯ, ದಾದಿಯರ ಹೆಸರಿಟ್ಟು ಗೌರವ ಸಲ್ಲಿಸಿದ ಪೋಷಕರು!

ಅಪರೂಪದ ಪ್ರಸಂಗವೊಂದರಲ್ಲಿ ಬಳ್ಳಾರಿಯ ಕೆಲ ಪೋಷಕರು ಕೋವಿಡ್ ಕಾಲಘಟ್ಟದಲ್ಲಿ ಹುಟ್ಟಿದ ತಮ್ಮ ಮಕ್ಕಳಿಗೆ ಕೋವಿಡ್ ವಾರಿಯರ್ಸ್, ವೈದ್ಯರ, ದಾದಿಯರ ಹೆಸರನ್ನಿಡಲು ನಿರ್ಧರಿಸಿರುವ ಘಟನೆ ಬಳ್ಳಾರಿಯಲ್ಲಿ ವರದಿಯಾಗಿದೆ.

Published: 25th September 2020 04:23 PM  |   Last Updated: 25th September 2020 05:15 PM   |  A+A-


Posted By : raghavendra
Source : The New Indian Express

ಬಳ್ಳಾರಿ: ಅಪರೂಪದ ಪ್ರಸಂಗವೊಂದರಲ್ಲಿ ಬಳ್ಳಾರಿಯ ಕೆಲ ಪೋಷಕರು ಕೋವಿಡ್ ಕಾಲಘಟ್ಟದಲ್ಲಿ ಹುಟ್ಟಿದ ತಮ್ಮ ಮಕ್ಕಳಿಗೆ ಕೋವಿಡ್ ವಾರಿಯರ್ಸ್, ವೈದ್ಯರ, ದಾದಿಯರ ಹೆಸರನ್ನಿಡಲು ನಿರ್ಧರಿಸಿರುವ ಘಟನೆ ಬಳ್ಳಾರಿಯಲ್ಲಿ ವರದಿಯಾಗಿದೆ.

ಕಳೆದ ಮೂರು ತಿಂಗಳಲ್ಲಿ ಬಳ್ಳಾರಿ  ಹೆಚ್ಚಿನ ಸಂಖ್ಯೆಯ ಹೆರಿಗೆಗೆ ಸಾಕ್ಷಿಯಾಗಿದೆ.  ಅದರಲ್ಲಿ ಸುಮಾರು 150 ಹೆರಿಗೆಗಳು ಕೋವಿಡ್ ಸೋಂಕಿತ ಮಹಿಳೆಯರಿಗೆ ಆಗಿತ್ತು. ಈ ವೇಳೆ ಅಂತಹಾ ಹೆರಿಗೆ ಆಗಿರುವ ಎಲ್ಲಾ ಮಕ್ಕಳೂ ಆರೋಗ್ಯವಾಗಿದ್ದಾರೆ ಎನ್ನುವುದು ವೈದ್ಯರ ತಂಡಕ್ಕೆ ದೊಡ್ಡ ಸಾಧನೆಯೇ ಸರಿ. . 150 ಹೆರಿಗೆಗಳಲ್ಲಿ, ಕೇವಲ ಎರಡು ಪ್ರಕರಣಗಳಲ್ಲಿ ಮಾತ್ರ ನವಜಾತ ಶಿಶುಗಳ್ಲಿಗೆ ನಿರ್ಣಾಯಕ ಆರೈಕೆಯ ಅಗತ್ಯವಿತ್ತು, ಮತ್ತು ಉಳಿದ ಪ್ರಕರಣಗಳಲ್ಲಿ ಯಾವುದೇ ಸೋಂಕಿಲ್ಲದೆ ಶಿಶುಗಳು ಜನಿಸಿದವು.

ವೈದ್ಯರು ಮತ್ತು ಆಡಳಿತ ಅಧಿಕಾರಿಗಳ ತಂಡಕ್ಕೆ ಕೃತಜ್ಞತೆ ಸಲ್ಲಿಸುತ್ತಾ ಬಳ್ಳಾರಿಯ ಕೆಲ ಕುಟುಂಬಗಳು  ಈಗ ತಮ್ಮ ಮಕ್ಕಳಿಗೆ ವೈದ್ಯರು ಮತ್ತು ದಾದಿಯರ ಹೆಸರನ್ನು ಇಡಲು ಯೋಜಿಸುತ್ತಿವೆ. ಬಳ್ಳಾರಿಯಲ್ಲಿ ಇಂತಹಾ ಗೌರವ ಪಡೆದ ಮೊದಲ ವ್ಯಕ್ತಿ ಬಳ್ಳಾರಿಯ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರಾಗಿದ್ದಾರೆ.

"ನನ್ನ ಹೆಂಡತಿ ಅವಳು ಗರ್ಭಿಣಿಯಾಗಿದ್ದಾಗ ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ಮಾಡಿದ್ದಳು. ನಾವು ಅವಳನ್ನು ಬಳ್ಳಾರಿ  ಜಿಲ್ಲಾ ಆಸ್ಪತ್ರೆಗೆ ಸೇರಿಸಿದೆವು. ವೈದ್ಯರು ಮತ್ತು ತಂಡವು ಅವಳನ್ನು ಚೆನ್ನಾಗಿ ನೋಡಿಕೊಂಡರು ಮತ್ತು ಅವಳು ಆರೋಗ್ಯವಂತ ಮಗುವನ್ನು ಹೊಂದಲು ಸಾಧ್ಯವಾಗಿದೆ. ನಮ್ಮ ಕುಟುಂಬದ ಆರೋಗ್ಯದ ಬಗ್ಗೆ ನಮ್ಮನ್ನು ವಿಚಾರಿಸಿದ್ದ ಜಿಲ್ಲಾಧಿಕಾರಿ ನಕುಲ್  ಮತ್ತು ಇತರ ಅಧಿಕಾರಿಗಳು. ಇದು ನನ್ನ ಹೆಂಡತಿ ಮತ್ತು ನನ್ನ ಮಗುವಿಗೆ ಎರಡನೆಯ ಜನ್ಮಕ್ಕಿಂತ ಕಡಿಮೆಯಾಗಿಲ್ಲ ಎಂದು ನಾನು ಭಾವಿಸಿದ್ದೆ. ಆದ್ದರಿಂದ ನಾವು ನಮ್ಮ ಮಗನಿಗೆ ನಕುಲ್ ಹೆಸರಿಡಲು ನಿರ್ಧರಿಸಿದ್ದೇವೆ "ಎಂದು ನವಜಾತ ಶಿಶುವಿನ ತಂದೆ ಹೇಳಿದರು.

ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಮಗು ಮತ್ತು ಕುಟುಂಬ ಸದಸ್ಯರಿಗೆ ಶುಭ ಹಾರೈಸಿದ್ದಾರೆ. "ಇದು ಒಂದು ಒಳ್ಳೆಯ ಗೌರವ.  ಆದರೆ ಇದು ನನ್ನೊಬ್ಬನ ಕೆಲಸಚಲ್ಲ ಬದಲಾಗಿ ಟೀಂ ವರ್ಕ್.  ನಾವು ಅದನ್ನು ಮುಂದುವರಿಸಬೇಕು. ಇಂತಹ ಘಟನೆಗಳು ಹೆಚ್ಚಿನ ಕೆಲಸವನ್ನು ತೆಗೆದುಕೊಳ್ಳಲು ನಮ್ಮನ್ನು ಪ್ರೇರೇಪಿಸುತ್ತವೆ" ಎಂದು ಅವರು ಹೇಳಿದರು.

ಕಳೆದ ನಾಲ್ಕು ತಿಂಗಳಲ್ಲಿ ನವಜಾತ ಶಿಶುಗಳಿಗೆ ಮತ್ತು ತಾಯಂದಿರಿಗೆ ಚಿಕಿತ್ಸೆ ನೀಡುವಾಗ ವೈದ್ಯರ ತಂಡವು ಶ್ಲಾಘನೀಯ ಕೆಲಸವನ್ನು ಮಾಡಿದೆ ಎಂದು ಬಳ್ಳಾರಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಜನಾರ್ಧನ್  ಎಚ್ ಎಲ್ ಹೇಳಿದರು. "ಬಳ್ಳಾರಿ  ಆಸ್ಪತ್ರೆಯ ಕೋವಿಡ್ 9 ವಾರ್ಡ್‌ಗಳಲ್ಲಿ ಕೆಲಸ ಮಾಡಿದ ದಾದಿಯರ ಹೆಸರನ್ನು ಅನೇಕ ಶಿಶುಗಳಿಗೆ ಇಡಲಾಗಿದೆ ಎಂಬುದು ಹೆಮ್ಮೆಯ ಭಾವನೆ ಮೂಡಿಸಿದೆ. ಇದು ಅವರ ಸ್ಥೈರ್ಯವನ್ನು ಹೆಚ್ಚಿಸುತ್ತದೆ ಮತ್ತು ಅವರ ಸಮರ್ಪಣೆ ಬಾವ ಸುಧಾರಣೆಗೆ ಸಹಾಯವಾಗಲಿದೆ. " ಎಂದು ಅವರು ಹೇಳಿದರು.


Stay up to date on all the latest ರಾಜ್ಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp