ಕೋವಿಡ್ ಇನ್ಸೂರೆನ್ಸ್  ಕ್ಲೇಮ್ ವಿಚಾರದಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ!

ಸಾಂಕ್ರಾಮಿಕ ರೋಗದ ಪ್ರಾರಂಭದಿಂದ 2021 ರ ಏಪ್ರಿಲ್ 1 ರವರೆಗೆ ಕೋವಿಡ್ -19 ಇನ್ಸೂರೆನ್ಸ್  ಕ್ಲೇಮ್ ವಿಚಾರದಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್ ನಂತರ ಕರ್ನಾಟಕ ಮೂರನೇ ಸ್ಥಾನದಲ್ಲಿದೆ .
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸಾಂಕ್ರಾಮಿಕ ರೋಗದ ಪ್ರಾರಂಭದಿಂದ 2021 ರ ಏಪ್ರಿಲ್ 1 ರವರೆಗೆ ಕೋವಿಡ್ -19 ಇನ್ಸೂರೆನ್ಸ್  ಕ್ಲೇಮ್ ವಿಚಾರದಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್ ನಂತರ ಕರ್ನಾಟಕ ಮೂರನೇ ಸ್ಥಾನದಲ್ಲಿದೆ .ರಾಜ್ಯದ ರೋಗಿಗಳು ಈವರೆಗೆ ಸಾರ್ವಜನಿಕ ಮತ್ತು ಖಾಸಗಿ ಮೂಲಕ 11,36,36,58,040 ಕೋಟಿ ರೂ. ಇನ್ಸೂರೆನ್ಸ್ ಕ್ಲೇಮ್  ಮಾಡಿದ್ದರೆ,  ಮಹಾರಾಷ್ಟ್ರ ಮತ್ತು ಗುಜರಾತ್‌  ರಾಜ್ಯಗಳ ವಿಮೆ ಕ್ಲೇಮ್  ಕ್ರಮವಾಗಿ 4,345 ಕೋಟಿ ಮತ್ತು 1,922 ಕೋಟಿ ರೂ. ಇದೆ.

ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ ಬೆಂಬಲಿತ ಪ್ರಾಕ್ಸಿಮಾದ ಜೀವನ್ ರಕ್ಷಾ ನಡೆಸಿದ ವಿಶ್ಲೇಷಣೆಯ ಪ್ರಕಾರ, ಕೆಲವು ಜಿಲ್ಲೆಗಳ ಸರಾಸರಿ ಕೋವಿಡ್ -19 ಕ್ಲೇಮ್ ಬೆಂಗಳೂರುಗಿಂತ ಹೆಚ್ಚಾಗಿದೆ ಆದರೂ ಮಹಾನಗರದಲ್ಲಿ ಆಸ್ಪತ್ರೆಯನ್ನು ನಡೆಸುವ ವೆಚ್ಚ ಗಮನಾರ್ಹವಾಗಿ ಹೆಚ್ಚಾಗಿದೆ. ಇದು ಜನರಲ್ ಇನ್ಶುರೆನ್ಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಹಿತಿಯಾಗಿದೆ.

ಯಾದಗಿರಿ, ವಿಜಯಪುರ, ಬೆಳಗಾವಿ, ಚಿತ್ರದುರ್ಗ, ಹಾಸನ,  ಕಲಬುರಗಿ, ತುಮಕುರು, ಬಾಗಲಕೋಟೆ, ಗದಗ್,  ಗಡಾಗ್ ಮತ್ತು ಶಿವಮೊಗ್ಗ ಮುಂತಾದ ನಗರಗಳಲ್ಲಿನ ರೋಗಿಗಳು ಬೆಂಗಳೂರಿನಲ್ಲಿರುವವರಿಗಿಂತ ಸರಾಸರಿ  ಹೆಚ್ಚಿನ ಕೋವಿಡ್ -19 ಕ್ಲೇಮ್ ಮೊತ್ತವನ್ನು ಪಡೆದುಕೊಂಡಿದ್ದಾರೆ.  ಗದಗ್,  ಶಿವಮೊಗ್ಗ ಮತ್ತು ಬೆಂಗಳೂರು ಹೊರತುಪಡಿಸಿ, ಪ್ರಸ್ತಾಪಿಸಲಾದ ಎಲ್ಲಾ ಜಿಲ್ಲೆಗಳು ಕರ್ನಾಟಕದ ಸರಾಸರಿ 1,50,000 ರೂ. ಮೊತ್ತಗಿಂತ  ಹೆಚ್ಚಿನ ಸರಾಸರಿ ಕ್ಲೇಮ್ ಹಣವನ್ನು ಹೊಂದಿವೆ.  ವಾಸ್ತವವಾಗಿ, ಬೆಂಗಳೂರು ಪ್ಯಾನ್-ಇಂಡಿಯಾ ಸರಾಸರಿ 1,47,000 ರೂ.ಗಳಿಗಿಂತ ಸರಾಸರಿ ಕಡಿಮೆ  ಕ್ಲೈಮ್ ಮೊತ್ತವನ್ನು ಹೊಂದಿದೆ.

ರಾಜ್ಯದ ಕೆಲವು ಆಸ್ಪತ್ರೆಗಳಲ್ಲಿ ಸಾರ್ವಜನಿಕರ ಅಸಹಾಯಕತೆ ಹೆಚ್ಚಳ ಮತ್ತು ಲಾಭದಾಯಕವಾಗಿ ತೊಡಗಿರುವುದನ್ನು  ಇದು ಸ್ಪಷ್ಟವಾಗಿ ಸೂಚಿಸುತ್ತದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಏಕರೂಪದ ದರಗಳ ಅವಶ್ಯಕತೆಯಿದೆ. ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್ (ಸರ್ಕಾರಿ ಆರೋಗ್ಯ ವಿಮಾ ರಕ್ಷಣೆ) ಅಡಿಯಲ್ಲಿ ಸೇರ್ಪಡೆಗೊಳ್ಳಲು ಅರ್ಹತಾ ಮಾನದಂಡಗಳನ್ನು ಸರ್ಕಾರ ಸಡಿಲಿಸಬೇಕು ಎಂದು ಜೀವ ರಕ್ಷಾ ಪ್ರಾಜೆಕ್ಟ್  ಸಂಚಾಲಕ  ಮೈಸೂರು ಸಂಜೀವ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com