30-40 ವರ್ಷ ವಯಸ್ಸಿನವರ ಮೇಲೆ ಕೊರೋನಾ 2ನೇ ಅಲೆ ಹೆಚ್ಚಿನ ಪರಿಣಾಮ: ಡಾ. ಶಾಲಿನಿ ಜೋಶಿ

ರಾಜ್ಯದಲ್ಲಿ ಮಹಾಮಾರಿ ಕೊರೋನಾ ವ್ಯಾಪಕವಾಗಿ ಹರಡುತ್ತಿದ್ದು, ಈ ಬಾರಿಯ ಕೊರೋನಾ ಅಲೆ 30-40 ವರ್ಷ ವಯಸ್ಸಿನವರ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಫೋರ್ಟಿಸ್ ಆಸ್ಪತ್ರೆಯ ವೈದ್ಯೆ ಶಾಲಿನಿ ಜೋಶಿಯವರು ಹೇಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ವ್ಯಾಪಕವಾಗಿ ಹರಡುತ್ತಿದ್ದು, ಈ ಬಾರಿಯ ಕೊರೋನಾ ಅಲೆ 30-40 ವರ್ಷ ವಯಸ್ಸಿನವರ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಫೋರ್ಟಿಸ್ ಆಸ್ಪತ್ರೆಯ ವೈದ್ಯೆ ಶಾಲಿನಿ ಜೋಶಿಯವರು ಹೇಳಿದ್ದಾರೆ. 

ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶದನಲ್ಲಿ ಮಾತನಾಡಿರುವ ಅವರು, ಈ ಬಾರಿಯ ಕೊರೋನಾ ಅಲೆ 30-40 ವರ್ಷ ವಯಸ್ಸಿನವರ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇತರೆ ಮಕ್ಕಳೊಂದಿಗೆ ಆಟವಾಡುವ ಮಕ್ಕಳು ವೈರಸ್'ಗಳನ್ನು ಮನೆಗೆ ತರುತ್ತಿದ್ದಾರೆ. ಇದರಿಂದ ಇಡೀ ಕುಟುಂಬಕ್ಕೆ ಸೋಂಕು ಹರಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

ಕೊರೋನಾ 2ನೇ ಅಲೆಯ ಲಕ್ಷಣಗಳೇನು? 
ಇತ್ತೀಚಿನ ದಿನಗಳಲ್ಲಿ ಸೋಂಕಿಗೊಳಗಾದ ಜನರಲ್ಲಿ ತೀವ್ರ ಆಯಾಸ, ದೇಹದ ನೋವು, ಗಂಟಲು ನೋವು, ಅತಿಸಾರ ಮತ್ತು ರುಚಿ ಗ್ರಹಣ ಶಕ್ತಿ, ವಾಂತಿ ಮತ್ತು ಶೀತ ಲಕ್ಷಣಗಳು ಕಂಡುಬರುತ್ತಿದೆ. ಇದಲ್ಲದೆ, ಒಣಕೆಮ್ಮು, ಉಸಿರಾಟ ಸಮಸ್ಯೆಗಳೂ ಕೂಡ ಕಂಡು ಬರುತ್ತಿವೆ. ಈ ಬಾರಿಯ ಕೊರೋನಾ ಅಲೆ 30-40 ವರ್ಷ ವಯಸ್ಸಿನವರ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇತರೆ ಮಕ್ಕಳೊಂದಿಗೆ ಆಟವಾಡುವ ಮಕ್ಕಳು ಮನೆಗೆ ವೈರಸ್ ತರುತ್ತಿದ್ದಾರೆ. ಇದರಿಂದ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತಿದೆ.

ತಪ್ಪಾದ ಕೊರೋನಾ ಪಾಸಿಟಿವ್, ನೆಗೆಟಿವ್ ವರದಿ ಬಂದರೆ ಏನು ಮಾಡುವುದು? 
ಆರ್'ಟಿ-ಪಿಸಿಆರ್ ಗೋಲ್ಡ್ ಸ್ಟಾಂಡರ್ಡ್ ಹೊಂದಿರುವ ಪರೀಕ್ಷಾ ವಿಧಾನವಾಗಿದೆ. ಇದರಲ್ಲಿ ತಪ್ಪು ವರದಿ ಸಾಧ್ಯವಿಲ್ಲ. ಆದರೆ, ಸಂಗ್ರಹಿಸಿದ ಸ್ಯಾಂಪಲ್ ಹಾಳಾದರೆ ಮಾತ್ರ ಈ ರೀತಿ ತಪ್ಪು ವರದಿ ಸಾಧ್ಯವಾಗುತ್ತದೆ. ಕಲುಷಿತಗೊಂಡಿರುವ ಗ್ಲೌಸ್ ಅಥವಾ ರೀಏಜೆಂಟ್ ಗಳು ಕಲುಶಿತಗೊಂಡರೆ ಈ ರೀತಿಯಾಗುತ್ತದೆ. ಅದಲ್ಲದೆ, ಸ್ಯಾಂಪಲ್'ನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸದೇ ಹೋದರೂ ತಪ್ಪು ವರದಿಗಳು ಬರುವ ಸಾಧ್ಯತೆಗಳಿವೆ. ವ್ಯಕ್ತಿಗೆ ಕೊರೋನಾ ಸೋಂಕು ಲಕ್ಷಣಗಳು ಬಲವಾಗಿ ಕಂಡು ಬಂದಿದ್ದರೆ, ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಯಲ್ಲಿ ವರದಿ ನೆಗೆಟಿವ್ ಬಂದಿದ್ದರೆ, ಅಂತಹವರಿಗೆ ಆರ್'ಟಿ-ಪಿಸಿಆರ್ ಪರೀಕ್ಷೆಗೊಳಪಡಿಸಲಾಗುತ್ತದೆ. 

ಭಾರತದಲ್ಲಿ  ಹರಡತ್ತಿರುವ ರೂಪಾಂತರ ವೈರಸ್ ಗಳು ಯಾವುವು? 
ಬ್ರಿಟನ್, ದಕ್ಷಿಣ ಆಫ್ರಿಕಾ, ಬ್ರೆಜಿಲ್ ರೂಪಾಂತರಿ ಕೊರೋನಾ ವೈರಸ್ ಈಗಾಗಲೇ ದೇಶದ 18 ರಾಜ್ಯಗಳಿಗೆ ಹಬ್ಬಿದೆ. ಇದೀಗ ಡಬಲ್‌ ಮ್ಯೂಟೆಂಟ್‌' ಎಂಬ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿದೆ. ಈ ವೈರಸ್ 2021ರ ಮಾರ್ಚ್ ನಲ್ಲಿ ಭಾರತದಲ್ಲಿ ಪತ್ತೆಯಾಗಿದೆ. 

ಈ ವೈರಸ್ ಎರಡು ರೂಪಾಂತರವನ್ನು ಹೊಂದಿದ್ದು, ಸಾಕಷ್ಟು ಅಪಾಯಕಾರಿಯಾಗಿದೆ ಹಾಗೂ ಅತೀ ಶೀಘ್ರದಲ್ಲಿ ಸೋಂಕು ಹರಡುತ್ತದೆ. ಸೋಂಕು ತಗುಲಿದ ವ್ಯಕ್ತಿ ಪತ್ತೆಯಾಗುತ್ತಿದ್ದಂತೆಯೇ ಈತನೊಂದಿಗೆ ಸಂಪರ್ಕದಲ್ಲಿದ್ದವರನ್ನೂ ಅತೀ ಶೀಘ್ರದಲ್ಲಿ ಪತ್ತೆ ಹಚ್ಚಿ, ಐಸೋಲೇಷನ್ ನಲ್ಲಿ ಇರಿಸಬೇಕು. ಇಲ್ಲದೇ ಹೋದರೆ ಸೋಂಕು ಹೆಚ್ಚೆಚ್ಚು ಜನರಿಗೆ ಹರಡುವ ಸಾಧ್ಯತೆಗಳಿರುತ್ತವೆ ಎಂದು ತಿಳಿಸಿದ್ದಾರೆ. 

ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಎನ್‌ಸಿಡಿಸಿ) ನಿರ್ದೇಶಕರ ಪ್ರಕಾರ, ಈ ವರೆಗೂ 10,000 ಸ್ಯಾಂಪಲ್ ಗಳನ್ನು ವಂಶವಾಹಿ ಪರೀಕ್ಷೆ ನಡೆಸಲಾಗಿದ್ದು, ಈ ವರೆಗೂ  771 ರೂಪಾಂತರಿ ಕೊರೋನಾ ವೈರಸ್ ಪತ್ತೆಯಾಗಿದ್ದು ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com