ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೋವಿಡ್-19: ರಾಜ್ಯದಲ್ಲಿ ಐಸಿಯು ಸಾವಿನ ಪ್ರಮಾಣ 15 ದಿನಗಳಲ್ಲಿ ಶೇ.8.72ಕ್ಕೆ ಏರಿಕೆ!

ರಾಜ್ಯದಲ್ಲಿ ಕೊರೋನಾ ಸೋಂಕು ಅಬ್ಬರಿಸುತ್ತಿದ್ದು, ಕೇವಲ 15 ದಿನಗಳಲ್ಲಿ ಐಸಿಯು ಸಾವಿನ ಪ್ರಮಾಣ ಶೇ.8.72ಕ್ಕೆ ತಲುಪಿದೆ ಎಂದು ತಿಳಿದುಬಂದಿದೆ. 

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಅಬ್ಬರಿಸುತ್ತಿದ್ದು, ಕೇವಲ 15 ದಿನಗಳಲ್ಲಿ ಐಸಿಯು ಸಾವಿನ ಪ್ರಮಾಣ ಶೇ.8.72ಕ್ಕೆ ತಲುಪಿದೆ ಎಂದು ತಿಳಿದುಬಂದಿದೆ. 

ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ 15 ದಿನಗಳಲ್ಲಿ ಆಸ್ಪತ್ರೆಗೆ ದಾಖಲಾದ 1,239 ರೋಗಿಗಳ ಪೈಕಿ ಐಸಿಯುವಿನಲ್ಲಿ 108 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. 1,239 ರೋಗಿಗಳ  ಶೇ. 39.95 (495) ಮಂದಿ ದೀರ್ಘಕಾಲಿಕ ರೋಗದಿಂದ ಬಳಲುತ್ತಿದ್ದು, ಶೇ.6.05 (744) ಮಂದಿ ಯಾವುದೇ ದೀರ್ಘಕಾಲಿಕ ರೋಗದಿಂದ ಬಳಲುತ್ತಿಲ್ಲ. ಸಾವನ್ನಪ್ಪಿರುವ 108 ಮಂದಿಯಲ್ಲಿ 61 ಮಂದಿ ದೀರ್ಘಕಾಲಿಕ ರೋಗದಿಂದ ಬಳಲುತ್ತಿದ್ದರು ಎಂದು ವರದಿಗಳು ತಿಳಿಸಿವೆ. 

ಬೀದರ್ ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಲ್ಲಿ ಐಸಿಯುವಿನಲ್ಲಿ 84 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ 21 ಮಂದಿ ದೀರ್ಘಕಾಲಿಕ ರೋಗದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.
 
ಇನ್ನು ಬೆಂಗಳೂರಿನಲ್ಲಿ ಕಳೆದ 15 ದಿನಗಳಲ್ಲಿ 261 ಮಂದಿ ಐಸಿಯುವಿಗೆ ದಾಖಲಾಗಿದ್ದು, ಇದರಲ್ಲಿ 22 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ 11 ಮಂದಿ ದೀರ್ಘಕಾಲಿಕ ರೋಗದಿಂದ ಬಳಲುತ್ತಿದ್ದವರು ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ. 

ಕೊಲಂಬಿಯಾ ಏಷ್ಯಾದ ತುರ್ತುನಿಗಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯ ಪ್ರದೀಪ್ ರಂಗಪ್ಪ ಅವರು ಮಾತನಾಡಿ, ಲಸಿಕೆ ಪಡೆದ ಹಿರಿಯ ನಾಗರೀಕರ ಮೇಲೆ ಕೊರೋನಾ ಪರಿಣಾಮ ಅಷ್ಟಾಗಿ ಬೀರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಐಸಿಯುವಿದೆ 40-50 ವರ್ಷದೊಳಗಿನ ಹೆಚ್ಚಾಗಿ ದಾಖಲಾಗುತ್ತಿದ್ದಾರೆಂದು ಹೇಳಿದ್ದಾರೆ. 

28-30 ವರ್ಷದವರೂ ಕೂಡ ಐಸಿಯುವಿಗೆ ದಾಖಲಾಗುತ್ತಿದ್ದಾರೆ. ಜ್ವರ ಬಂದ ಕೂಡಲೇ ಜನರು ಆಸ್ಪತ್ರೆಗೆ ದಾಖಲಾಗಬಾರದು. ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದು. ಅತೀವ್ರ ಕೆಮ್ಮು, ಉಸಿರಾಟ ಸಮಸ್ಯೆ ಎದುರಾದರೆ ಮಾತ್ರ ಆಸ್ಪತ್ರೆಗೆ ದಾಖಲಾಗಬೇಕು ಎಂದು ತಿಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com