
ಬೆಂಗಳೂರು: ಕುಡಿದ ಅಮಲಿನಲ್ಲಿ ಜಗಳದಲ್ಲಿ ಮಹಿಳಾ ಟೆಕ್ಕಿಯೊಬ್ಬರು ತನ್ನ 41 ವರ್ಷದ ಪತಿಯನ್ನು ಇರಿದು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಕಾಡುಗೋಡಿಯ ಮನೆಯಲ್ಲಿ ಶನಿವಾರ ಈ ಘಟನೆ ನಡೆದಿದ್ದು, ಕುಡಿದ ಅಮಲಿನಲ್ಲಿ ಜಗಳ ಪತಿ ಪತ್ನಿ ಇಬ್ಬರೂ ಜಗಳ ಆರಂಭಿಸಿದ್ದಾರೆ. ಈ ವೇಳೆ ತನ್ನ ಪತಿ ತನ್ನನ್ನು ಅವಮಾನಿಸುತ್ತಿದ್ದಾನೆ ಎಂದು ಆರೋಪಿಸಿ ಮಹಿಳಾ ಟೆಕ್ಕಿ ಚಾಕು ತೆಗೆದುಕೊಂಡು ಇರಿದಿದ್ದಾರೆ. ಬಳಿಕ ಆತನನ್ನು ಮನೆಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಆದರೆ ಸಂತ್ರಸ್ಥ ವ್ಯಕ್ತಿ ಪೊಲೀಸ್ ದೂರು ನಿರಾಕರಿಸಿದರೂ, ಇದು ಮೆಡಿಕೋ-ಲೀಗಲ್ ಪ್ರಕರಣವಾದ್ದರಿಂದ ಪೊಲೀಸರು ತನಿಖೆಗಾಗಿ ಪತಿಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇನ್ನು ಈ ದಂಪತಿಗೆ ಒಂದು ಮಗುವಿದ್ದು, ಇಬ್ಬರೂ ಸಾಫ್ಟ್ ವೇರ್ ಇಂಜಿನಿಯರ್ ಗಳಾಗಿ ಕೆಲಸ ಮಾಡುತ್ತಿದ್ದರು.
ಸಂತ್ರಸ್ಥ ವ್ಯಕ್ತಿಯ ದೂರಿನ ಆಧಾರದ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಂತೆಯೇ ಪರಾರಿಯಾಗಿರುವ ಆತನ ಹೆಂಡತಿಯನ್ನು ಹುಡುಕುತ್ತಿದ್ದಾರೆ. ಇನ್ನು ಗಾಯಗೊಂಡಿದ್ದ ಪತಿಗೆ ಆಸ್ಪತ್ರೆ ಚಿಕಿತ್ಸೆ ಕೊಡಿಸಲಾಗಿದ್ದು, ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಘಟನೆ ವೇಳೆ ಇಬ್ಬರೂ ಕುಡಿದಿದ್ದರು ಎಂದು ಸಂತ್ರಸ್ಥ ವ್ಯಕ್ತಿ ಹೇಳಿದ್ದಾರೆ.
Advertisement