9-12 ಭೌತಿಕ ತರಗತಿ ಪ್ರಾರಂಭ ವಿಳಂಬ ಸಾಧ್ಯತೆ: ಸುಳಿವು ನೀಡಿದ ಸಚಿವ ಬಿ.ಸಿ.ನಾಗೇಶ್

9,10,11,12ನೇ ಭೌತಿಕ ತರಗತಿಗಳ ಆರಂಭ ತಡವಾಗಬಹುದು ಎಂಬ ಸುಳಿವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ಸುರೇಶ್ ಅವರು ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತುಮಕೂರು: 9,10,11,12ನೇ ಭೌತಿಕ ತರಗತಿಗಳ ಆರಂಭ ತಡವಾಗಬಹುದು ಎಂಬ ಸುಳಿವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ಸುರೇಶ್ ಅವರು ನೀಡಿದ್ದಾರೆ. 

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆಗ ಮಾತನಾಡಿರುವ ಸಚಿವ ನಾಗೇಶ್ ಅವರು, ಆಗಸ್ಟ್ 23 ರಿಂದ 9-12ನೇ ತರಗತಿಗಳ ಭೌತಿಕ ಆರಂಭ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಇದು ತಾತ್ಕಾಲಿಕ ದಿನಾಂಕವಾಗಿದ್ದು, ಸಿದ್ಧತೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ನಿಖರವಾದ ವೇಳಾಪಟ್ಟಿಯನ್ನು ಸಿದ್ಧಪಡಿಸಿ ತಿಳಿಸಲಾಗುತ್ತದೆ ಎಂದು ಹೇಳಿದ್ದಾರೆ. 

ಕೋವಿಡ್ ಹಾಗೂ ಪ್ರವಾಹ ಪರಿಸ್ಥಿತಿ ನಿಭಾಯಿಸುವುದರಲ್ಲಿ ನಾನು ಕಾರ್ಯನಿರತನಾಗಿದ್ದೆ. ಶೀಘ್ರದಲ್ಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದೆಯೇ ಎಂಬುದನ್ನು ಮೊದಲು ಪರಿಶೀಲಿಸಬೇಕಿದೆ ಎಂದು ತಿಳಿಸಿದರು.

ಇದೇ ವೇಳೆ ತಮ್ಮ ಮುಂದಿರುವ ಸವಾಲುಗಳನ್ನೂ ಪಟ್ಟಿ ಮಾಡಿದ ಸಚಿವರು, ಮೊದಲಿಗೆ ಭೌತಿಕ ತರಗತಿಗಳಿಗೆ ತಜ್ಞರ ಅಭಿಪ್ರಾಯ ಸಂಗ್ರಹಿಸಬೇಕಿದೆ. ನಂತರ ಖಾಸಗಿ ಶಾಲೆಗಳಲ್ಲಿನ ಶುಲ್ಕ ನಿಯಂತ್ರಣ, ಶಿಕ್ಷಕರ ವರ್ಗಾವಣೆಯಂತಹ ಹಲವು ಸವಾಲುಗಳು ನನ್ನ ಮುಂದಿವೆ ಎಂದಿದ್ದಾರೆ. 

ಭೌತಿಕ ತರಗತಿಗಳ ಪುನರಾರಂಭದ ಅವಶ್ಯಕತೆ ಇದೆ. ಈ ಹಿಂದೆ ಕೆಲ ನಿರ್ಧಾರಗಳನ್ನು ಅವೈಜ್ಞಾನಿಕ ರೀತಿಯಲ್ಲಿ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರಗಳು ಶಿಕ್ಷಣದ ಪ್ರಾಥಮಿಕ ಹಕ್ಕನ್ನು ಮಾತ್ರವಲ್ಲ, ಪೌ    ಷ್ಟಿಕತೆ ಮತ್ತು ಯೋಗಕ್ಷೇಮವನ್ನೂ ಕಸಿದುಕೊಂಡಿದೆ. ಇದೀಗ ನೂತನ ಸಚಿವರ ಮುಂದಿರುವ ಮೊದಲ ಸವಾಲು ಶಾಲೆಗಳನ್ನು ಪುನರಾರಂಭಿಸುವುದಾಗಿದೆ. ಪ್ರಮುಖವಾಗಿ ಪ್ರಾಥಮಿಕ ತರಗತಿ ವಿದ್ಯಾರ್ಥಿಗಳಿಗೆ ಎಂದು ಶಿಕ್ಷಣ ತಜ್ಞ ನಿರಂಜನ್ ಆರಾಧ್ಯ ಅವರು ಹೇಳಿದ್ದಾರೆ. 

ಪ್ರಸ್ತುತ ನನಗೆ ನೀಡಿರುವ ಖಾತೆ ಜವಾಬ್ದಾರಿ ಬಹಳ ಸವಾಲಿನದ್ದಾಗಿದೆ. ಆದರೆ, ಸವಾಲುಗಳನ್ನು ಎದುರಿಸುವಾಗ ನಾನು ನನ್ನ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತೇನೆ ಎಂದು ನಾನು ನಂಬುತ್ತೇನೆ ಎಂದು ನಾಗೇಶ್ ಅವರು ಹೇಳಿದ್ದಾರೆ. 

ಇದೇ ವೇಳೆ ಶಿಕ್ಷಕರ ವರ್ಗಾವಣೆ ವಿಚಾರ ಸಂಬಂಧ ಮಾತನಾಡಿದ ಅವರು, ಇದಕ್ಕೆ ಹೆಚ್ಚಿನ ಸಮಯವನ್ನು ನೀಡುತ್ತೇನೆ. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಸರಳಗೊಳಿಸಲಾಗುತ್ತದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮುನ್ನ ಸಾಕಷ್ಟು ಮಾಹಿತಿ ಸಂಗ್ರಹಿಸುತ್ತೇನೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಲ್ಐಸಿ ಮತ್ತು ಭಾರತೀಯ ರೈಲ್ವೇಯಂತಹ ದೊಡ್ಡ ಸಂಸ್ಥೆಗಳು ಸುಲಭವಾಗಿ ವರ್ಗಾವಣೆಗಳನ್ನು ಮಾಡುತ್ತಿರುವಾಗ, ನಮಗೇಕೆ ಸಾಧ್ಯವಿಲ್ಲ? ನಾವು ಇದನ್ನು ದೊಡ್ಡ ಸಮಸ್ಯೆಯಾಗಿಸಿದ್ದೇವೆ ಮತ್ತು ಅದನ್ನು ಸರಳಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಅಭಾವಗಳಿವೆ. ಪ್ರಮುಖವಾಗಿ ಇಂಗ್ಲೀಷ್, ವಿಜ್ಞಾನ, ಗಣಿತ ಶಿಕ್ಷಕರ ಕೊರತೆಯಿದೆ ಹೀಗಾಗಿ ಇದಕ್ಕೆ ಹೆಚ್ಚಿನ ಆದ್ಯತೆ ನೀಡಿ, ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುತ್ತದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಆಗತ್ಯವಿದೆ ಎಂದು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com