ಕೋವಿಡ್-3ನೇ ಅಲೆ ಆತಂಕ: ನಗರದಲ್ಲಿ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಕಳೆದ ವರ್ಷದಷ್ಟೇ ಇದೆ- ಗೌರವ್ ಗುಪ್ತಾ

ನಗರದಲ್ಲಿ ಪತ್ತೆಯಾಗುತ್ತಿರುವ ಮಕ್ಕಳಲ್ಲಿನ ಕೋವಿಡ್ ಸೋಂಕಿನ ಪ್ರಮಾಣ ಕಳೆದ ವರ್ಷದಷ್ಟೇ ಇದೆ ಎಂದು ಬಿಬಿಎಂಬಿ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ. 
ಗೌರವ್ ಗುಪ್ತಾ
ಗೌರವ್ ಗುಪ್ತಾ
Updated on

ಬೆಂಗಳೂರು: ನಗರದಲ್ಲಿ ಪತ್ತೆಯಾಗುತ್ತಿರುವ ಮಕ್ಕಳಲ್ಲಿನ ಕೋವಿಡ್ ಸೋಂಕಿನ ಪ್ರಮಾಣ ಕಳೆದ ವರ್ಷದಷ್ಟೇ ಇದೆ ಎಂದು ಬಿಬಿಎಂಬಿ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ. 

ಈ ಕುರಿತಂತೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಗರದಲ್ಲಿ ಈವರೆಗೆ ವರದಿಯಾದ ಮಕ್ಕಳ ಪ್ರಕರಣಗಳನ್ನು ಕಳೆದ ವರ್ಷದ ದತ್ತಾಂಶಗಳೊಂದಿಗೆ  ಹೋಲಿಸಲಾಗಿದೆ ಮತ್ತು ಇವೆರಡೂ ಬಹುತೇಕ ಒಂದೇ ಆಗಿರುತ್ತವೆ. ಕಳೆದ ನಾಲ್ಕು ದಿನಗಳಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 450 ರಿಂದ (15 ದಿನಗಳಲ್ಲಿ ಪ್ರಚಲಿತ) 350 ಕ್ಕೆ ಇಳಿದಿದೆ ಎಂದು ಹೇಳಿದರು.

ಆಗಸ್ಟ್ 1ರಿಂದ 11ರವರೆಗೂ 500ಕ್ಕೂ ಹೆಚ್ಚು ಮಕ್ಕಳಿಗೆ ಸೋಂಕು ದೃಢಪಟ್ಟಿದ್ದು, ಆದರೆ ಸೋಂಕಿನಿಂದ ಯಾವುದೇ ಮಕ್ಕಳ ಸಾವು ಸಂಭವಿಸಿಲ್ಲ. ಆಗಸ್ಟ್ 1ರಿಂದ 543 ಮಕ್ಕಳಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಈ ವೇಳೆ 500ಕ್ಕೂ ಹೆಚ್ಚು ಮಕ್ಕಳಿಗೆ ಸೋಂಕು ದೃಢಪಟ್ಟಿದೆ. ಈ ಮಕ್ಕಳಲ್ಲಿ ಹೆಚ್ಚಿನವರು ರೋಗಲಣ ರಹಿತ ಮತ್ತು ಸೌಮ್ಯ ಸ್ವಭಾವಗ ರೋಗಳ ಹೊಂದಿದವರಾಗಿದ್ದರು ಎಂದು ಹೇಳಿದರು.

2 ಹಂತಗಳಲ್ಲಿ ಶಾಲೆ ಆರಂಭ, ನಿರ್ಧಾರದ ಬೆನ್ನಲ್ಲೇ ಮಕ್ಕಳಲ್ಲಿ ಸೋಂಕು ಹೆಚ್ಚಳ
ಇದೇ ವೇಳೆ 9 ರಿಂದ 12 ತರಗತಿಯ ವಿದ್ಯಾರ್ಥಿಗಳಿಗೆ ಆ 23ರಿಂದ 2 ಹಂತಗಳಲ್ಲಿ ಶಾಲೆ ತೆರೆಯಲು ಯೋಜಿಸಲಾಗಿತ್ತು. ಈ ನಿರ್ಧಾರದ ಬೆನ್ನಲ್ಲೇ ಮಕ್ಕಳಲ್ಲಿ ಸೋಂಕು ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿದೆ. ಮಕ್ಕಳ ಪೌಷ್ಠಿಕತೆಯನ್ನು ಪರೀಕ್ಷಿಸಲು ರಾಜ್ಯಸರ್ಕಾರ ಮಕ್ಕಳ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತೇವೆ. ತಜ್ಞರು ಮಕ್ಕಳ ಮೇಲೆ ಕೊರೋನಾ 3ನೇ ಅಲೆ ಪರಿಣಾಮ ಬೀರುವುದಾಗಿ ಎಚ್ಚರಿಸಿದ್ದಾರೆ. ನಾವು ಈಗಾಗಲೇ ಉಡುಪಿ ಮತ್ತು ಹಾವೇರಿಗಳಲ್ಲಿ ಮಕ್ಕಳ ಮೇಲ್ವಿಚಾರಣೆಗಾಗಿ ವಾತ್ಸಲ್ಯ ಯೋಜನೆ ಆರಂಭಿಸಲಾಗಿದೆ ಎಂದು ಈ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com