ಕಳೆದ ವಾರ ರಾಜ್ಯದಲ್ಲಿ ಕೋವಿಡ್ ಸಾವಿನ ಪ್ರಮಾಣದಲ್ಲಿ ಕ್ಷೀಣತೆ; ಮೂರು ಜಿಲ್ಲೆಗಳಲ್ಲಿ ಮಾತ್ರ ಹೆಚ್ಚು

ಕಳೆದ ಏಳು ದಿನಗಳಲ್ಲಿ ರಾಜ್ಯದಲ್ಲಿನ ಕೋವಿಡ್ ಸಾವಿನ ಪ್ರಮಾಣ ದರ (ಸಿಎಫ್ಆರ್ )  ಶೇ 1. 73 ರಷ್ಟಿದ್ದರೆ ಎಂಟು ಜಿಲ್ಲೆಗಳಲ್ಲಿ ಶೂನ್ಯ ದಾಖಲೆ ವರದಿಯಾಗಿದೆ. ಮೂರು ಜಿಲ್ಲೆಗಳಲ್ಲಿ ಶೇ. 10ಕ್ಕಿಂತಲೂ ಹೆಚ್ಚಾಗಿದೆ. 
ಮಾಸ್ಕ್ ಧರಿಸದವರಿಗೆ ದಂಡ ವಿಧಿಸುತ್ತಿರುವ ಬಿಬಿಎಂಪಿ ಮಾರ್ಷಲ್ ಗಳು
ಮಾಸ್ಕ್ ಧರಿಸದವರಿಗೆ ದಂಡ ವಿಧಿಸುತ್ತಿರುವ ಬಿಬಿಎಂಪಿ ಮಾರ್ಷಲ್ ಗಳು

ಬೆಂಗಳೂರು: ಕಳೆದ ಏಳು ದಿನಗಳಲ್ಲಿ ರಾಜ್ಯದಲ್ಲಿನ ಕೋವಿಡ್ ಸಾವಿನ ಪ್ರಮಾಣ ದರ (ಸಿಎಫ್ಆರ್ )  ಶೇ 1. 73 ರಷ್ಟಿದ್ದರೆ ಎಂಟು ಜಿಲ್ಲೆಗಳಲ್ಲಿ ಶೂನ್ಯ ದಾಖಲೆ ವರದಿಯಾಗಿದೆ. ಮೂರು ಜಿಲ್ಲೆಗಳಲ್ಲಿ ಶೇ. 10ಕ್ಕಿಂತಲೂ ಹೆಚ್ಚಾಗಿದೆ. 

ರಾಜ್ಯ ವಾರ್ ರೂಮ್ ಮಾಹಿತಿ ಪ್ರಕಾರ, ಬಾಗಲಕೋಟೆ, ಬಳ್ಳಾರಿ, ಬೀದರ್, ಚಿಕ್ಕಮಗಳೂರು, ಗದಗ್, ಕಲಬುರಗಿ, ರಾಯಚೂರು ಮತ್ತು ಯಾದಗಿರಿಯಲ್ಲಿ ಸಿಎಫ್ ಆರ್ ಶೂನ್ಯವಾಗಿದ್ದರೆ, ಕೊಡಗಿನಲ್ಲಿ ಶೇ 0.59 ರಷ್ಟಿದೆ.

ಬೆಂಗಳೂರು ನಗರ ಸೇರಿದಂತೆ ಏಳು ಜಿಲ್ಲೆಗಳಲ್ಲಿ  ಶೇ 2ಕ್ಕಿಂತಲೂ ಕಡಿಮೆಯಾಗಿದೆ. ಕೋಲಾರದಲ್ಲಿ ಶೇ, 11, ಧಾರವಾಡದಲ್ಲಿ ಶೇ 11.59 ಮತ್ತು ಹಾವೇರಿಯಲ್ಲಿ ಶೇ 12.50 ರಷ್ಟು ಸಾವಿನ ಪ್ರಮಾಣವಿದೆ. 

ಈ ಮಧ್ಯೆ ರಾಜ್ಯದಲ್ಲಿ ಶನಿವಾರ 1,632 ಹೊಸ ಪ್ರಕರಣಗಳು ವರದಿಯಾಗಿದ್ದು, 25  ಸೋಂಕಿತರು ಸಾವನ್ನಪ್ಪಿದ್ದಾರೆ. 1,612 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಪಾಸಿಟಿವಿಟಿ ದರ ಶೇ 7.18ಕ್ಕೆ ಕುಸಿದಿದೆ. ಆಗಸ್ಟ್ ಆರಂಭದಲ್ಲಿ ಪಾಸಿಟಿವಿಟಿ ದರ ಶೇ 7.49 ರಷ್ಟಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com