ಸಾಂದರ್ಭಿಕ ಚಿತ್ರ
ರಾಜ್ಯ
ಕೇರಳ ಚೆಕ್ ಪೋಸ್ಟ್ ನಲ್ಲಿ ನಕಲಿ ಕೊರೊನಾ ಆರ್ ಟಿ ಪಿ ಸಿ ಆರ್ ವರದಿ ಹೊಂದಿದ್ದ 9 ಮಂದಿ ಸೆರೆ
ಬಂಧಿತರೆಲ್ಲರೂ ಕಾಸರಗೋಡು ಮೂಲದವರು ಎಂದು ತಿಳಿದುಬಂಡಿದೆ. ಇವರಲ್ಲಿ ಓರ್ವ ನಕಲಿ ದಾಖಲೆ ಸೃಷ್ಟಿಸಿದವನೂ ಸೇರಿದ್ದಾನೆ.
ಮಂಗಳೂರು: ಕೇರಳ ಚೆಕ್ ಪೋಸ್ಟಿನಲ್ಲಿ ನಕಲಿ ಆರ್ ಟಿ ಪಿ ಸಿ ಆರ್ ವರದಿ ಹೊಂದಿದ್ದ 9 ಮಂದಿಯನ್ನು ಕಳೆದ 48 ಗಂಟೆಗಳ ಅವಧಿಯಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಕೇರಳದಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದರು. ಬುಧವಾರ ಒಂದೇ ದಿನ 7 ಮಂದಿ ಬಂಧಿಸಲ್ಪಟ್ಟಿದ್ದರು. ಗುರುವಾರ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಅಬ್ದುಲ್ ತಮೀಮ್, ಹಸನ್, ಹಾದಿಲ್, ಇಸ್ಮಾಯಿಲ್, ಫಾತಿಮತುಲ್ ಮುಬೀನಾ, ಶಹಾನ ಶಂಶೀರ್ ಬೇಗಮ್ ಮತ್ತು ರಮ್ಶೀದಾ ಬಂಧಿತರು. ಇವರಲ್ಲಿ ಓರ್ವ ನಕಲಿ ದಾಖಲೆ ಸೃಷ್ಟಿಸಿದವನೂ ಸೇರಿದ್ದಾನೆ. ಬಂಧಿತರೆಲ್ಲರೂ ಕಾಸರಗೋಡಿನವರು ಎಂದು ತಿಳಿದುಬಂದಿದೆ.


