ಬಳ್ಳಾರಿ ಜನತೆಗೆ ನೀರು ಸರಬರಾಜು ಮಾಹಿತಿ ಇನ್ಮುಂದೆ ಆನ್'ಲೈನ್ ಮೂಲಕವೂ ಲಭ್ಯ!

ಬಳ್ಳಾರಿ ನಗರ ಪಾಲಿಕೆಯು ನಿವಾಸಿಗಳಿಗೆ ವಿಶಿಷ್ಟ ಸೌಲಭ್ಯ ಕಲ್ಪಿಸಿದೆ. ಇನ್ನು ಮುಂದೆ ಜನರು ನೀರು ಸರಬರಾಜು ಸಮಯವನ್ನು ಆನ್'ಲೈನ್ ಮೂಲಕ ತಿಳಿದುಕೊಳ್ಳಬಹುದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬಳ್ಳಾರಿ: ಬಳ್ಳಾರಿ ನಗರ ಪಾಲಿಕೆಯು ನಿವಾಸಿಗಳಿಗೆ ವಿಶಿಷ್ಟ ಸೌಲಭ್ಯ ಕಲ್ಪಿಸಿದೆ. ಇನ್ನು ಮುಂದೆ ಜನರು ನೀರು ಸರಬರಾಜು ಸಮಯವನ್ನು ಆನ್'ಲೈನ್ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಬೇಸಿಗೆ ಹತ್ತಿರ ಬರುತ್ತಿದ್ದು, ನೀರಿಗೆ ಹಾಹಾಕಾರ ಎದುರಾಗಲಿದೆ. ನೀರಿಗೆ ಜನರಿಂದ ಬೇಡಿಕೆಗಳು ಎದುರಾಗುವ ಹಿನ್ನೆಲೆಯಲ್ಲಿ ಬಳ್ಳಾರಿ ನಗರ ಪಾಲಿಕೆ ಸಿದ್ಧತೆ ನಡೆಸಿದ್ದು, ಜನರಿಗೆ ವಿಶಿಷ್ಟ ಸೌಲಭ್ಯವೊಂದನ್ನು ಕಲ್ಪಿಸಿದೆ. ಈ ಸೌಲಭ್ಯವು ಜನರಿಗೆ ಅನುಕೂಲವಾಗಲಿದೆ.

ನೀರು ಪೂರೈಕೆಗೆ ಸಮಯ ಒದಗಿಸುವಂತೆ ಆಗ್ರಹಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳೀಯ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿ ವೇಳಾಪಟ್ಟಿಯನ್ನು ಸಿದ್ಧಪಡಿಸಿದೆ ಎಂದು ತಿಳಿದುಬಂದಿದೆ.

ನಿಗಮವು ತನ್ನ ವೆಬ್ ಸೈಟನ್ ನಲ್ಲಿ ಮಾಹಿತಿಗಳನ್ನು ಅಪ್ ಲೋಡ್ ಮಾಡುತ್ತಿದ್ದು, ಎಲ್ಲಾ ವಾರ್ಡ್‌ಗಳಲ್ಲಿನ ಆರ್'ಡಬ್ಲ್ಯೂಜಿಗಳಿಗೆ ಲಿಂಕ್ ಅನ್ನು ಒದಗಿಸಲಾಗಿಸಲಿದೆ.

ನೀರು ಸರಬರಾಜು ಚಾರ್ಟ್ ವಾರ್ಡ್ ಸಂಖ್ಯೆಗಳು, ದಿನಾಂಕಗಳು ಮತ್ತು ಸಮಯಗಳನ್ನು ಹೊಂದಿರುತ್ತದೆ. ವೆಬ್‌ಪುಟದಲ್ಲಿ ನಮೂದಿಸಿದ ಸಮಯ ಮತ್ತು ದಿನಾಂಕಗಳಲ್ಲಿ ನೀರು ಸರಬರಾಜು ಮಾಡುವುದನ್ನು ಖಚಿತಪಡಿಸಿಕೊಳ್ಳಲು ನಿಗಮವು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಈ ಪಟ್ಟಿಯಲ್ಲಿ ವಾರ್ಡ್ ಸಂಖ್ಯೆ, ದಿನಾಂಕ ಹಾಗೂ ಸಮಯವನ್ನೂ ನೀಡಲಾಗಿರುತ್ತದೆ. ವೇಳಾಪಟ್ಟಿ ಸಿದ್ಧಪಡಿಸಿರುವ ಹಿನ್ನೆಲೆಯಲ್ಲಿ ಪಟ್ಟಿಯಂತೆಯೇ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಪಾಲಿಕೆ ಸೂಚನೆ ನೀಡದೆ ಎಂದು ತಿಳಿದುಬಂದಿದೆ.

ನಿಗಮದ ಅಧಿಕೃತ ವೆಬ್‌ಸೈಟ್‌ನಲ್ಲಿ ಕುಡಿಯುವ ನೀರು ಕುರಿತ ದಿನಾಂಕ ಮತ್ತು ಸಮಯವನ್ನು ಪ್ರಕಟಿಸಲಾಗುತ್ತದೆ. ಇದರಲ್ಲಿ ವಾರ್ಡ್‌ಗಳು ಮತ್ತು ನೀರು ಸರಬರಾಜು ಸಮಯದ ಬಗ್ಗೆ ಮಾಹಿತಿಯನ್ನು ನೀಡಿರಲಾಗಿರುತ್ತದೆ. ಮಾಹಿತಿಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಕಂಡು ಬಂದರೂ ಜನರು ನಮ್ಮನ್ನು ಸಂಪರ್ಕಿಸಲು ವೆಬ್‌ಸೈಟ್‌ನಲ್ಲಿ ದೂರವಾಣಿ ಸಂಖ್ಯೆಯನ್ನು ನೀಡಲಾಗಿರುತ್ತದೆ. ಜನರು ಕರೆ ಮಾಡಿ ನೇರವಾಗಿ ಮಾತನಾಡಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೆಚ್ಚಿನ ಜನರು ಕೆಲಸ ಕಾರ್ಯಗಳಿಗೆ ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ ನೀರು ಸರಬರಾಜಾದರೆ ಅವರಿಗೆ ನೀರು ಹಿಡಿಯುವುದು ಕಷ್ಟಕರವಾಗುತ್ತದೆ. ವೇಳಾಪಟ್ಟಿ ನೀಡಿರುವುದು ಅಂತಹ ಜನರಿಗೆ ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ.

ಕಳೆದ ಬೇಸಿಗೆಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ನೀರು ಸರಬರಾಜು ಸೂಕ್ತವಾಗಿರಲಿಲ್ಲ, ಇಂತಹ ಸಮಸ್ಯೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಪಾಲಿಕೆಗೆ ಮನವಿ ಮಾಡಿಕೊಳ್ಳಲಾಗಿತ್ತು ಎಂದು ಬಳ್ಳಾರಿ ನಿವಾಸಿಯೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com