ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ: ರಾಯಬಾಗದಲ್ಲಿ ಪತಿಯಿಂದಲೇ ಯುವಕನ ಕೊಲೆ

ಯುವಕ ಅರ್ಜುನ್ ಕಳೆದ 5 ದಿನಗಳಿಂದ ನಾಪತ್ತೆಯಾಗಿದ್ದ. ಆ ಬಗ್ಗೆ ಆತನ ಪೋಷಕರು ಪೊಲೀಸ್ ದೂರು ನೀಡಿದ್ದರು.
ಕೊಲೆಯಾದ ಅರ್ಜುನ್ ಮಾರುತಿ ನಗಡೆ
ಕೊಲೆಯಾದ ಅರ್ಜುನ್ ಮಾರುತಿ ನಗಡೆ
Updated on: 

ರಾಯಭಾಗ: ಯುವಕನ ತಲೆಗೆ ರಾಡಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಕೊಲೆಯಾದ ಯುವಕ ಅರ್ಜುನ್ ಮಾರುತಿ ನಗಡೆ ಎಂದು ತಿಳಿದುಬಂದಿದೆ. ಕೊಲೆಗೆ ಅನೈತಿಕ ಸಂಬಂಧ ಕಾರಣ ಎನ್ನಲಾಗುತ್ತಿದೆ. 

ಯುವಕ ಅರ್ಜುನ್ ಕಳೆದ 5 ದಿನಗಳಿಂದ ನಾಪತ್ತೆಯಾಗಿದ್ದ. ಆ ಬಗ್ಗೆ ಆತನ ಪೋಷಕರು ಪೊಲೀಸ್ ದೂರು ನೀಡಿದ್ದರು. ಪೊಲೀಸ್ ಕಾರ್ಯಾಚರಣೆ ಸಮಯದಲ್ಲಿ ಆರ್ಜುನ್ ನನ್ನು ಕೊಲೆ ಮಾಡಿ ಆತನ ಶವವನ್ನು ಹೊಳೆಗೆ ಎಸೆದಿರುವ ಸಂಗತಿ ಬೆಳಕಿಗೆ ಬಂದಿತ್ತು.

ಮಹಿಳೆಯ ಪತಿ ಭೀಮಪ್ಪನೇ ಆರೋಪಿಯೆಂದು ತಿಳಿದುಬಂದಿದ್ದು, ಪೊಲೀಸರು ಆತನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com