ಬಾಡಿಗೆ ಪಡೆದ ಮನೆಯಲ್ಲೇ ದರೋಡೆ: ಸಹೋದರರ ಬಂಧನ

ಮನೆ ಬಾಡಿಗೆ ಪಡೆದ ಮಾಲೀಕರ​ ಮನೆಯಲ್ಲೇ ದರೋಡೆ ಮಾಡಿದ್ದ ಸಹೋದರರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಅರವಿಂದ್​ ಹಾಗೂ ಅವಿನಾಶ್​ ಬಂಧಿತ ಆರೋಪಿಗಳು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮನೆ ಬಾಡಿಗೆ ಪಡೆದ ಮಾಲೀಕರ​ ಮನೆಯಲ್ಲೇ ದರೋಡೆ ಮಾಡಿದ್ದ ಸಹೋದರರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಅರವಿಂದ್​ ಹಾಗೂ ಅವಿನಾಶ್​ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 123.77 ಗ್ರಾಂ ಚಿನ್ನಾಭರಣ,3 ಕೆ.ಜಿ ಬೆಳ್ಳಿ ಆಭರಣ ಹಾಗೂ 40 ಸಾವಿರ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅವಿನಾಶ್​ ಮತ್ತು ಅರವಿಂದ್​ ಎಂಬ ಅಣ್ಣ-ತಮ್ಮರಿಬ್ಬರು ತಮ್ಮದೇ ಪುಟ್ಟದಾದ ಬಟ್ಟೆ ವ್ಯಾಪಾರ ನಡೆಸುತ್ತಿದ್ದರು. ಆದರೆ, ಕೋವಿಡ್​​ ಲಾಕ್ ಡೌನ್ ನಿಂದ ಅವರ ವ್ಯಾಪಾರ ಕುಗ್ಗಿತು. ಹೀಗಾಗಿ ಅವರು ಮನೆ ಬಾಡಿಗೆ ಕಟ್ಟುವ ಸ್ಥಿತಿಯಲ್ಲಿಯೂ ಇರಲಿಲ್ಲ. 

ಇದೇ ಸಮಯದಲ್ಲಿ ಮನೆ ಮಾಲೀಕ ಸುಭಾಷ್ ಚಂದ್ರ ತಮ್ಮ ಮಗನ ಮದುವೆ ನಿಶ್ಚಯ ಮಾಡಿದ್ದರು. ಇದನ್ನು ಅರಿತ ಅರವಿಂದ್ ತನ್ನ ಸಹೋದರ ಅವಿನಾಶ್ ಜೊತೆ ಮಾತನಾಡಿ ಮನೆ ಮಾಲೀಕರ ಮನೆಯಲ್ಲಿಯೇ‌ ದರೋಡೆ ನಡೆಸಲು ಸಂಚು ರೂಪಿಸಿದರು. ಅದರಂತೆ ಮಾಲೀಕರ ಕೈ ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕು ದರೋಡೆ ನಡೆಸಿದ್ದರು.

ಘಟನೆಗೆ ಸಂಬಂಧಿಸಿದಂತೆ ಮನೆ ಮಾಲೀಕರು ವಿದ್ಯಾರಣ್ಯಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಜಾಡು ಹಿಡಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com