ಬೆಂಗಳೂರಿನಲ್ಲಿ ಒಂದು ವರ್ಷದಲ್ಲಿ ನೈಟ್ರೋಜನ್ ಡೈಆಕ್ಸೈಡ್ ಮಾಲಿನ್ಯ ಶೇ.90 ರಷ್ಟು ಹೆಚ್ಚಳ

ಕೋವಿಡ್ ನಿಂದಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಮಾಡಿದ ಒಂದು ವರ್ಷದ ನಂತರ, ಹೆಚ್ಚು ಜನಸಂಖ್ಯೆ ಹೊಂದಿರುವ ಎಂಟು ರಾಜ್ಯ ರಾಜಧಾನಿಗಳಲ್ಲಿ ಮುಂಬೈ, ದೆಹಲಿ, ಬೆಂಗಳೂರು, ಹೈದರಾಬಾದ್, ಚೆನ್ನೈ, ಕೋಲ್ಕತಾ, ಜೈಪುರ ಮತ್ತು ಲಖನೌಗಳಲ್ಲಿ NO2 (ಸಾರಜನಕ ಡೈಆಕ್ಸೈಡ್) ಮಾಲಿನ್ಯ ಹೆಚ್ಚಾಗಿದೆ ಎಂದು ಗ್ರೀನ್‌ಪೀಸ್ ಇಂಡಿಯಾದ ಹೊಸ ವರದಿ ಬಹಿರಂಗಪಡಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕೋವಿಡ್ ಸಾಂಕ್ರಾಮಿಕದಿಂದ ರಾಷ್ಟ್ರವ್ಯಾಪಿ ಲಾಕ್‌ಡೌನ್ ಮಾಡಿದ ಒಂದು ವರ್ಷದ ನಂತರ, ಹೆಚ್ಚು ಜನಸಂಖ್ಯೆ ಹೊಂದಿರುವ ಎಂಟು ರಾಜ್ಯಗಳ ರಾಜಧಾನಿಗಳಲ್ಲಿ ಮುಂಬೈ, ದೆಹಲಿ, ಬೆಂಗಳೂರು, ಹೈದರಾಬಾದ್, ಚೆನ್ನೈ, ಕೋಲ್ಕತಾ, ಜೈಪುರ ಮತ್ತು ಲಖನೌಗಳಲ್ಲಿ NO2 (ಸಾರಜನಕ ಡೈಆಕ್ಸೈಡ್) ಮಾಲಿನ್ಯ ಹೆಚ್ಚಾಗಿದೆ ಎಂದು ಗ್ರೀನ್‌ಪೀಸ್ ಇಂಡಿಯಾದ ಹೊಸ ವರದಿಯೊಂದು ಬಹಿರಂಗಪಡಿಸಿದೆ. 

ಉಪಗ್ರಹ ಮಾಹಿತಿಯ ಪ್ರಕಾರ, ಏಪ್ರಿಲ್ 2020 ಮತ್ತು ಏಪ್ರಿಲ್ 2021 ರ ನಡುವೆ ಬೆಂಗಳೂರಿನಲ್ಲಿ NO2 ಮಾಲಿನ್ಯ ಶೇಕಡಾ 90 ರಷ್ಟು ಹೆಚ್ಚಾಗಿದೆ. ಈ ಬದಲಾವಣೆಗೆ  ಹವಾಮಾನವು  ಅಲ್ಪ ಕೊಡುಗೆ ನೀಡಿದೆ. 2020ರಲ್ಲಿ 0.085 ಡಾಬ್ಸನ್ ಯನಿಟ್, 2021ರಲ್ಲಿ 0.161 ಡಬ್ಸನ್ ಯೂನಿಟ್ ಸಾರಜನಕ ಡೈಆಕ್ಸೈಡ್ ನ್ನು ನಗರವು ದಾಖಲಿಸಿದೆ.

ಸಾರಜನಕ ಡೈಆಕ್ಸೈಡ್ ಅಪಾಯಕಾರಿ ವಾಯು ಮಾಲಿನ್ಯಕಾರಕವಾಗಿದ್ದು, ಮೋಟಾರು ವಾಹನಗಳು, ವಿದ್ಯುತ್ ಉತ್ಪಾದಕಗಳು ಮತ್ತು ಕೈಗಾರಿಕಾ ಪ್ರಕ್ರಿಯೆಗಳಲ್ಲಿ ಇಂಧನವನ್ನು ಸುಟ್ಟಾಗ ಬಿಡುಗಡೆಯಾಗುತ್ತದೆ. ಇದು ಉಸಿರಾಟ ಮತ್ತು ರಕ್ತಪರಿಚಲನಾ ವ್ಯವಸ್ಥೆಗಳು ಮತ್ತು ಮೆದುಳು ಸೇರಿದಂತೆ ಎಲ್ಲಾ ವಯಸ್ಸಿನ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ, ಇದು ಆಸ್ಪತ್ರೆಗೆ ದಾಖಲಾತಿ ಮತ್ತು ಮರಣದ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಸಾರಜನಕ ಡೈ ಆಕ್ಸೈಡ್ ಹೊರಸೂಸುವಲ್ಲಿ ದೆಹಲಿಯಲ್ಲಿ ಶೇ 125, ಚೆನ್ನೈಯಲ್ಲಿ ಶೇ.94, ಮುಂಬೈ ಶೇ.52, ಹೈದರಾಬಾದ್ ಶೇ 69, ಕೊಲ್ಕತ್ತಾ ಶೇ. 11, ಜೈಪುರ ಶೇ 47, ಲಖನೌದಲ್ಲಿ ಶೇ 32 ರಷ್ಟು ಹೆಚ್ಚಳ ದಾಖಲಾಗಿದೆ. ಏಪ್ರಿಲ್ 2021ರಲ್ಲಿ ಈ ಅಂಕಿಅಂಶ ದಾಖಲಾಗಿದೆ.

ಇಂಧನ ಸಂಬಂಧಿತ ವಾಯುಮಾಲಿನ್ಯದಿಂದ ಆರೋಗ್ಯದ ಮೇಲಿನ ಪರಿಣಾಮ ತೀವ್ರವಾಗಿದೆ, ಮತ್ತು ಹಲವಾರು ವರದಿಗಳಲ್ಲಿ, ಸಮಯ ಮತ್ತು ಮತ್ತೆ ದಾಖಲಿಸಲಾಗಿದೆ. ಹೆಚ್ಚಿದ ಆರ್ಥಿಕ ಚಟುವಟಿಕೆಗಳು ಇನ್ನೂ ಹೆಚ್ಚಿನ ನಗರಗಳಲ್ಲಿ ವಿಷಕಾರಿ ವಾಯುಮಾಲಿನ್ಯದೊಂದಿಗೆ ಹೆಚ್ಚಾಗಿವೆ ಎಂದು ಸಂಸ್ಥೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಸ್ವಚ್ಛ  ಮತ್ತು ಸುಸ್ಥಿರ ಚಲನಶೀಲತೆ ನಗರಗಳಾದ್ಯಂತ ಚೇತರಿಕೆ ಪ್ರಯತ್ನಗಳಿಗೆ ಕೇಂದ್ರವಾಗಿರಬೇಕು.ಸಾಂಕ್ರಾಮಿಕದಿಂದ ಚೇತರಿಸಿಕೊಳ್ಳುವುದು ಹಿಂದಿನ ಮಟ್ಟದ ವಾಯುಮಾಲಿನ್ಯಕ್ಕೆ ಮರಳುವ ವೆಚ್ಚದಲ್ಲಿ ಬರಬಾರದು ಎಂದು ಗ್ರೀನ್‌ಪೀಸ್ ಇಂಡಿಯಾದ ಹಿರಿಯ ಹವಾಮಾನ ಪ್ರಚಾರಕ ಅವಿನಾಶ್ ಚಂಚಲ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com