ಬೆಂಗಳೂರು: ಸರಗಳ್ಳನ ಹಿಡಿಯಲು ಹೋದ ಪೋಲೀಸ್ ವಾಹನ ಅಪಘಾತ, ನಾಲ್ವರಿಗೆ ಗಾಯ

ಸರಗಳ್ಳತನದ ಆರೋಪಿಯನ್ನು ಪೋಲೀಸರು ಬೆನ್ನಟ್ಟಿವಾಗ ಎರಡು ಅಪಘಾತಗಳು ಸಂಭವಿಸಿದ ಘಟನೆ ಬೆಂಗಳುರಿನಲ್ಲಿ ನಡೆದಿದೆ. ಅಪಘಾತದಿಂದ ನಾಲ್ವರು ಗಾಯಗೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸರಗಳ್ಳತನದ ಆರೋಪಿಯನ್ನು ಪೋಲೀಸರು ಬೆನ್ನಟ್ಟಿವಾಗ ಎರಡು ಅಪಘಾತಗಳು ಸಂಭವಿಸಿದ ಘಟನೆ ಬೆಂಗಳುರಿನಲ್ಲಿ ನಡೆದಿದೆ. ಅಪಘಾತದಿಂದ ನಾಲ್ವರು ಗಾಯಗೊಂಡಿದ್ದಾರೆ.

ಬೆಳಿಗ್ಗೆ 9 ಗಂಟೆ ಸುಮಾರಿಗೆ ಸರ್ಜಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಮಂಜುಳಾ ಎಂಬ ಮಹಿಳೆಯ ಸರವನ್ನು ದ್ವಿಚಕ್ರ ವಾಹನ ಸವಾರರಿಬ್ಬರು ಕಸಿದಿದ್ದಾರೆ. 112 ಪೆಟ್ರೋಲಿಂಗ್ ವಾಹನವು ದುಷ್ಕರ್ಮಿಗಳನ್ನು ಬೆನ್ನಟ್ಟಿದೆ. ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ, ವೇಗವಾಗಿ ಬಂದ ದುಷ್ಕರ್ಮಿಗಳು ಬುರಗುಂಟೆಯಲ್ಲಿ ಭದ್ರತಾ ಸಿಬ್ಬಂದಿಯಾದ ಕಮಲ್ ಮೌತ್ ಎನ್ನುವವರನ್ನು ಬೈಕ್ ಗುದ್ದಿಸಿ ಬೀಳಿಸಿದ್ದಾರೆ. ಆ ವೇಳೆ ಮೌತ್ ಗಾಯಗೊಂಡರೂ ದುಷ್ಕರ್ಮಿಗಳು ಓಡಿಹೋದರು. ಪೋಲೀಸರು ಮೌತ್ ಅವರನ್ನು ಸ್ಪತ್ರೆಗೆ ಕರೆದೊಯ್ಯುತ್ತಿರುವಾಗ, ಅತ್ತಿಬೆಲೆ -ಸರ್ಜಾಪುರ ರಸ್ತೆಯಲ್ಲಿ ಸ್ಕೂಟರ್ ಸವಾರನೊಬ್ಬ ಯಾವುದೇ ಸೂಚನೆ ಇಲ್ಲದೆ  ಡಿಕ್ಕಿ ಹೊಡೆಯುವಂತೆ ನುಗ್ಗಿದ್ದಾನೆ.

ಸ್ಕೂಟರ್ ಗೆ ವಾಹನ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಪ್ರಯತ್ನದಲ್ಲಿದ್ದಾಗ ವಾಹನ ಅವನ ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿಯಾಗಿದೆ ಆ ಕಂಬ ಸರಕುಗಳ ಸಾಗಿಸುತ್ತಿದ್ದ ಆಟೋದ ಮೇಲೆ ಬಿದ್ದಿದೆ. ಅದರಲ್ಲಿದ್ದ ಒಬ್ಬ ಗಾಯಗೊಂಡಿದ್ದಾನೆ. ಅಲ್ಲದೆ ಪೋಲೀಸ್ ವಾಹನ ಚಾಲಕ ಮಲ್ಲಿಕಾರ್ಜುನ ಸಹ ಗಾಯಾಳುವಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com