ಕೋವಿಡ್ ಆತಂಕ, ಗೊಂದಲದ ನಡುವೆ ರಾಜ್ಯದ ಮಕ್ಕಳಿಗೆ ತಪ್ಪಿದ ನಿಯಮಿತ ಚುಚ್ಚುಮದ್ದು

 2018ಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಕೋವಿಡ್- 19 ಸಾಂಕ್ರಾಮಿಕ ವೇಳೆಯಲ್ಲಿ ಹಲವು ಮಕ್ಕಳು ನಿಯಮಿತ ಚುಚ್ಚುಮದ್ದುವಿನಿಂದ ತಪ್ಪಿಸಿಕೊಂಡಿದ್ದಾರೆ ಎಂದು ಮಕ್ಕಳ ತಜ್ಞರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯ ಚುಚ್ಚು ಮದ್ದು (ಲಸಿಕೆ) ಪಡೆಯದ ಮತ್ತು ಇನ್ನೂ ಪಡೆಯುತ್ತಿರುವ ಮಕ್ಕಳು ಭಾರತದಲ್ಲಿರುವುದಾಗಿ ಯುನೆಸೆಫ್ ಹೇಳಿದೆ. 2018ಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ವೇಳೆಯಲ್ಲಿ ಹಲವು ಮಕ್ಕಳು ನಿಯಮಿತ ಚುಚ್ಚುಮದ್ದುವಿನಿಂದ ತಪ್ಪಿಸಿಕೊಂಡಿದ್ದಾರೆ ಎಂದು ಮಕ್ಕಳ ತಜ್ಞರು ತಿಳಿಸಿದ್ದಾರೆ.

ರಾಜ್ಯದಲ್ಲಿ ನೋಡಿದಾಗ, ನಿಯಮಿತ ಚುಚ್ಚುಮದ್ದು ಖಂಡಿತವಾಗಿಯೂ ಕಡಿಮೆಯಾಗುತ್ತಿದೆ. ಫೋಷಕರ ಕಾರ್ಡ್ ನ್ನು ನೋಡಿದಾಗ, ಅನೇಕ ಚುಚ್ಚು ಮದ್ದನ್ನು ನೀಡದಿರುವುದು ಕಂಡುಬಂದಿತು. ಕೆಲವರಿಗೆ ಕಳೆದ ವರ್ಷ ನೀಡಲಾಗಿದೆ. ಇದು ಸರಿಯಾದ ಬೆಳವಣಿಗೆ ಅಲ್ಲ, ಚುಚ್ಚುಮದ್ದು ವಿಳಂಬದಿಂದ ರೋಗ ನಿರೋಧಕ ಶಕ್ತಿ ಕುಂಠಿತಗೊಂಡು, ಮಕ್ಕಳಿಗೆ ಕಾಯಿಲೆಗಳು ಬರಬಹುದೆಂದು ಮೀನಾಕ್ಷಿ ಆಸ್ಪತ್ರೆಯ ನಿಯೋನಾಟಾಲಜಿ ವಿಭಾಗದ ಮುಖ್ಯಸ್ಥ ಡಾ. ರಂಜನ್ ಕುಮಾರ್ ಪೇಜಾವರ್ ಹೇಳುತ್ತಾರೆ.

ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆಯಿಂದ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಭ್ಯವಾದ ಮಾಹಿತಿ ಪ್ರಕಾರ, 2018ಕ್ಕೆ ಹೋಲಿಸಿದರೆ ನಿಗದಿಪಡಿಸಲಾದ ಗುರಿ ಹಾಗೂ ಸಾಧನೆ  ಕೆಳಮಟ್ಟದಲ್ಲಿದೆ ಆದರೆ, ಬಾಗಲಕೋಟೆ, ವಿಜಯಪುರ, ಹಾವೇರಿ ಮತ್ತು ಉಡುಪಿಯಂತಹ ಕೆಲ ಜಿಲ್ಲೆಗಳನ್ನು ಹೊರತುಪಡಿಸಿದರೆ ಬಹುತೇಕ ಜಿಲ್ಲೆಗಳಲ್ಲಿ ಲಸಿಕಾ ಅಭಿಯಾನದ ಗುರಿ ಮುಟ್ಟಲಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಡಾ. ರಜನಿ ನಾಗೇಶ್ ರಾವ್ ಹೇಳಿದ್ದಾರೆ. 

ಕೆಲ ಜಿಲ್ಲೆಗಳಲ್ಲಿ ಮಕ್ಕಳಿಗೆ ಲಸಿಕೆ ತಪ್ಪಿರುವ ಬಗ್ಗೆ ಒಪ್ಪಿಕೊಳ್ಳುತ್ತೇನೆ. ಮೇ ತಿಂಗಳಲ್ಲಿ ಅಪಾರ ಪ್ರಮಾಣದಲ್ಲಿ ವಲಸೆ ಮತ್ತು ತಾವಿದ್ದ ಸ್ಥಳಕ್ಕೆ ಮತ್ತೆ ವಾಪಸ್ಸಾಗುವುದು ಸಂಭವಿಸಿತ್ತು. ಇದು ಕೆಲ ವಲಯಗಳಲ್ಲಿ ಈಗಲೂ ಮುಂದುವರೆದಿದೆ. ಮತ್ತೊಂದೆಡೆ ಆಶಾ ಕಾರ್ಯಕರ್ತೆಯರು ಕೋವಿಡ್ ಸೋಂಕಿಗೆ ತುತ್ತಾದರೆ ಮತ್ತೆ ಕೆಲವರನ್ನು ಲಸಿಕೆ ಸಂಬಂಧಿತ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಮೇ ತಿಂಗಳಲ್ಲಿ ಅಂಗನವಾಡಿ, ಶಾಲೆಗಳು ಬಂದ್ ಆಗಿದ್ದವು ಎಂದು ಅವರು ಮಾಹಿತಿ ನೀಡಿದ್ದಾರೆ.

ನಿಯಮಿತ ಚುಚ್ಚುಮದ್ದನ್ನು ಹಾಕಿಸಿಕೊಳ್ಳದೆ ಇರದೇ ಇರುವುದರಿಂದ ಚಿಕನ್ ಪಾಕ್ಸ್, ಡಿಫ್ತೀರಿಯಾ ಮತ್ತು ಟೈಫಾಯಿಡ್ ಸೋಂಕಿನಿಂದ ಅನೇಕ ಮಕ್ಕಳು ಬರುತ್ತಿದ್ದಾರೆ ಎಂದು ಮಕ್ಕಳ ಆರೋಗ್ಯ ಕುರಿತು ರಾಷ್ಟ್ರೀಯ ಐಎಂಎ ಸ್ಥಾಯಿ ಸಮಿತಿ ಅಧ್ಯಕ್ಷ ಡಾ. ಶ್ರೀನಿವಾಸ ಹೇಳಿದ್ದಾರೆ. ಇಂತಹ ರೋಗಗಳು ಬಾರದಿರಲಿ ಎಂಬ ಉದ್ದೇಶದಿಂದ 16-23 ತಿಂಗಳಿನ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. ಮತ್ತೆ 5 ಮತ್ತು 6 ವಯಸ್ಸಿನಲ್ಲೂ ಚುಚ್ಚಮದ್ದು ಹಾಕಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಕೊರೋನಾ ಕಾರಣದಿಂದ ತಪ್ಪಿಸಿರುವ ಚುಚ್ಚಮದ್ದನ್ನು ಕೂಡಲೇ ನೀಡಬೇಕು ಈ ಬಗ್ಗೆ ಪೋಷಕರು ನಿರ್ಲಕ್ಷ್ಯ ವಹಿಸದಂತೆ ಅರಿವು ಮೂಡಿಸಬೇಕೆಂದು ಡಾ. ರಂಜನ್ ಸಲಹೆ ನೀಡಿದ್ದಾರೆ. ಈ ಮಧ್ಯೆ ರಾಜ್ಯಾದ್ಯಂತ ಸಾರ್ವಜನಿಕ ಅರಿವು ಕಾರ್ಯಕ್ರಮಕ್ಕೆ ವೈದ್ಯರು ಕರೆ ನೀಡಿದ್ದಾರೆ. ಮನೆ ಮನೆಗೆ ಹೋಗಿ ಲಸಿಕೆ ಹಾಕದಿರುವ ಮಕ್ಕಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು, ಇದರಿಂದ ಕಿರು ಯೋಜನೆ ರೂಪಿಸಲು ಸುಲಭವಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ರಾಜ್ಯ ಆರೋಗ್ಯ ಇಲಾಖೆ ಈಗಾಗಲೇ ಈ ರೀತಿಯ ಪ್ರಚಾರ ಕಾರ್ಯಕ್ರಮವನ್ನು ರೂಪಿಸಿದೆ. ಇದನ್ನು ಎಲ್ಲಾ ಜಿಲ್ಲೆಗಳಲ್ಲಿ ಶೀಘ್ರದಲ್ಲಿಯೇ ಆರಂಭಿಸಲಾಗುವುದು, ಚುಚ್ಚುಮದ್ದು ಹಾಕಿಸಿಕೊಳ್ಳದಿರುವ ಎಲ್ಲಾ ಮಕ್ಕಳಿಗೂ ಮತ್ತೆ ಚುಚ್ಚುಮದ್ದು ಹಾಕಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದು ಡಾ. ರಂಜನಿ ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com