ಬೆಂಗಳೂರು: ಗಾಂಜಾ ಅಮಲಿನಲ್ಲಿ ಮೊಬೈಲ್ ಚಾರ್ಜಿಂಗ್ ವೈರ್ ಬಿಗಿದು ದೊಡ್ಡಮ್ಮನನ್ನು ಕೊಂದ ಯುವಕನ ಬಂಧನ

ಪಿಯುಸಿ ಫೇಲಾದ ಯುವಕನೊಬ್ಬ ತನ್ನ ದೊಡ್ಡಮ್ಮ ತಾಯಿಯ ಅಕ್ಕನನ್ನು ಮೊಬೈಲ್ ಚಾರ್ಜ್ ಮಾಡುವ ವೈರ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ಆನೇಕಲ್ ತಾಲೂಕಿನ ವಿನಾಯಕ ನಗರದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಆನೇಕಲ್: ಪಿಯುಸಿ ಫೇಲಾದ ಯುವಕನೊಬ್ಬ ತನ್ನ ದೊಡ್ಡಮ್ಮ ತಾಯಿಯ ಅಕ್ಕನನ್ನು ಮೊಬೈಲ್ ಚಾರ್ಜ್ ಮಾಡುವ ವೈರ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ಆನೇಕಲ್ ತಾಲೂಕಿನ ವಿನಾಯಕ ನಗರದಲ್ಲಿ ನಡೆದಿದೆ.

ವಿನಾಯಕ ನಗರದ ನಿವಾಸಿ ನಾಗವೇಣಿ (45) ಕೊಲೆಯಾದವರು. ನಾಗವೇಣಿ ತಂಗಿ ಭಾಗ್ಯಮ್ಮ ಪುತ್ರ ಪವನ್‌ (21) ಕೊಲೆ ಮಾಡಿದ ಆರೋಪಿ. ನಾಗವೇಣಿ ಮಾನಸಿಕ ಅಸ್ವಸ್ಥಳಾಗಿದ್ದರು, ಅವರ ತಂದೆ ತಾಯಿ ಮೂರು ವರ್ಷದ ಹಿಂದೆ ಸಾವನ್ನಪ್ಪಿದ ನಂತರ ತನ್ನ ಸಹೋದರಿ ಭಾಗ್ಯಮ್ಮನ ಜೊತೆ ವಾಸಿಸುತ್ತಿದ್ದರು. ಭಾಗ್ಯಮ್ಮ ಮತ್ತು ಆಕೆಯ ಪತಿ ಪಾಪಯ್ಯ ನಾಗವೇಣಿಯ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸುತ್ತಿದ್ದರು. ಇದರಿಂದ ಪವನ್ ಕುಪಿತನಾಗಿದ್ದ. 

ಮಂಗಳವಾರ ಮದ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಲೆ ಸುಮಾರು 12.30ರರ ವೇಳೆಗೆ ಚಾರ್ಜಿಂಗ್ ವೈರ್ ನಿಂದ ಆಕೆಯ ಕುತ್ತಿಗೆ ಬಿಗಿದು ಕೊಂದಿದ್ದಾನೆ, 12.45ಕ್ಕೆ ಭಾಗ್ಯಮ್ಮ ಮನೆಗೆ ಬಂದಿದ್ದಾರೆ. ಈ ವೇಳೆ ತನ್ನ ಅಕ್ಕ ಡ್ರಾಯಿಂಗ್ ರೂಮ್ ನಲ್ಲಿ ಬಿದ್ದಿದ್ದನ್ನು ನೋಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾಗ್ಯಮ್ಮ ಅವರು ನೀಡಿದ ದೂರಿನ ಅನ್ವಯ ಪೊಲೀಸರು ಪವನ್ ನನ್ನು ಬಂಧಿಸಿದ್ದಾರೆ, ಗಾಂಜಾ ಅಮಲಿನಲ್ಲಿ ಆತ ತನ್ನ ದೊಡ್ಡಮ್ಮನನ್ನು ಕೊಂದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com