ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿದ ಆರು ಡಮ್ಮಿ ಗನ್‌ಗಳು!

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್)ದ ಕಾರ್ಗೋ ಆವರಣದಲ್ಲಿ ಡಮ್ಮಿ ಗನ್‌ಗಳನ್ನು ಹೊಂದಿದ್ದ ಪೆಟ್ಟಿಗೆಯೊಂದು ಕೆಲಕಾಲ ಆತಂಕ ಸೃಷಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಕೆಂಪೇಗೌಡ ವಿಮಾನ ನಿಲ್ದಾಣ
ಕೆಂಪೇಗೌಡ ವಿಮಾನ ನಿಲ್ದಾಣ
Updated on

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್)ದ ಕಾರ್ಗೋ ಆವರಣದಲ್ಲಿ ಡಮ್ಮಿ ಗನ್‌ಗಳನ್ನು ಹೊಂದಿದ್ದ ಪೆಟ್ಟಿಗೆಯೊಂದು ಕೆಲಕಾಲ ಆತಂಕ ಸೃಷಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.

ಕಸ್ಟಮ್ ಅಧಿಕಾರಿಗಳು ಸರಕುಗಳನ್ನು ಪರಿಶೀಲಿಸುತ್ತಿದ್ದಾಗ ಇಸ್ತಾಂಬುಲ್‌ನಿಂದ ಚಲನಚಿತ್ರ ಚಿತ್ರೀಕರಣಕ್ಕಾಗಿ ತರಿಸಲಾಗಿದ್ದ ಆರು ಡಮ್ಮಿ ಬಂದೂಕುಗಳು ಪತ್ತೆಯಾಗಿವೆ.

ತಪಾಸಣೆ ಪ್ರಕ್ರಿಯೆ ವೇಳೆ ಗನ್ ಗಳಿದ್ದ ಬಾಕ್ಸ್ ಪತ್ತೆಯಾಗಿದೆ ಎಂದು ಕೆಐಎಎಲ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಅವುಗಳನ್ನು ಕನ್ನಡ ಚಿತ್ರರಂಗದ ಸಿಬ್ಬಂದಿಗೆ ಹಸ್ತಾಂತರಿಸಲು ನಿರ್ಧರಿಸಿದ್ದಾರೆ. ಈ ಚಿತ್ರದಲ್ಲಿ ಪ್ರಮುಖ ನಟ ನಟಿಸಲಿದ್ದಾರೆ ಎಂದು ವರದಿಯಾಗಿದೆ. 

ಸ್ಥಳೀಯ ಪೊಲೀಸ್ ಠಾಣೆ ಪ್ರೋಟೋಕಾಲ್ ಪ್ರಕಾರ ಅವುಗಳನ್ನು ಚಿತ್ರತಂಡಕ್ಕೆ ಕಳುಹಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಕ್ಲೈಮ್ಯಾಕ್ಸ್ ಚಿತ್ರೀಕರಣವನ್ನು ಮುಗಿಸಲು ಚಿತ್ರತಂಡ ಈ ಗನ್ ಗಳಿಗಾಗಿ ಕಾಯುತ್ತಿದ್ದು, "ಬಾಕ್ಸ್‌ಗೆ ಎನ್ ಒಸಿ ನೀಡಿದ ನಂತರ ಮುಂದಿನ ಪ್ರಕ್ರಿಯೆಗಾಗಿ ನಾವು ದಾಖಲೆಗಳನ್ನು ಪರಿಶೀಲಿಸುತ್ತೇವೆ" ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com