ಅಂತಾರಾಷ್ಟ್ರೀಯ ಹುಲಿ ದಿನಾಚರಣೆ: ನಾಗರಹೊಳೆ ಅಭಯಾರಣ್ಯಕ್ಕೆ ಹೊಸ ಲೋಗೋ

ರಾಜ್ಯದ ಎರಡು ಮೀಸಲು ಅರಣ್ಯ ಪ್ರದೇಶಗಳಿಗೆ ಈ ವರ್ಷದ ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಅತ್ಯಂತ ಮಹತ್ವದ್ದಾಗಿದ್ದು, ರಾಜ್ಯದ ನಾಗರಹೊಳೆ ಹುಲಿ ಸಂರಕ್ಷಿತ (ಎನ್ಟಿಆರ್) ಪ್ರದೇಶಕ್ಕೆ ಹೊಸ ಲೋಗೋ ನೀಡಲಾಗಿದ್ದು, ಅಂತೆಯೇ ಬಂಡೀಪುರ ಹುಲಿ ಮೀಸಲು ಸಂರಕ್ಷಿತ ಪ್ರದೇಶಕ್ಕೆ  ಜಾಗತಿತ ಗುಣಮಟ್ಟದ ಮಾನ್ಯತೆ ನೀಡಲಾಗಿದೆ.
ನಾಗರಹೊಳೆ ಅಭಿಯಾರಣ್ಯಕ್ಕೆ ಹೊಸ ಲೋಗೋ
ನಾಗರಹೊಳೆ ಅಭಿಯಾರಣ್ಯಕ್ಕೆ ಹೊಸ ಲೋಗೋ
Updated on

ಬೆಂಗಳೂರು: ರಾಜ್ಯದ ಎರಡು ಮೀಸಲು ಅರಣ್ಯ ಪ್ರದೇಶಗಳಿಗೆ ಈ ವರ್ಷದ ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಅತ್ಯಂತ ಮಹತ್ವದ್ದಾಗಿದ್ದು, ರಾಜ್ಯದ ನಾಗರಹೊಳೆ ಹುಲಿ ಸಂರಕ್ಷಿತ (ಎನ್ಟಿಆರ್) ಪ್ರದೇಶಕ್ಕೆ ಹೊಸ ಲೋಗೋ ನೀಡಲಾಗಿದ್ದು, ಅಂತೆಯೇ ಬಂಡೀಪುರ ಹುಲಿ ಮೀಸಲು ಸಂರಕ್ಷಿತ ಪ್ರದೇಶಕ್ಕೆ  ಜಾಗತಿತ ಗುಣಮಟ್ಟದ ಮಾನ್ಯತೆ ನೀಡಲಾಗಿದೆ.

ದೇಶದ 14 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾಗಿರುವ ಬಂಡೀಪುರ ಹುಲಿ ಸಂರಕ್ಷಿತಾಣ್ಯ ಇದೀಗ ಹುಲಿ ಪಡೆಯಲು ಇರುವ ಜಾಗತಿಕ ಗುಣಮಟ್ಟ ಮಾನ್ಯತೆಗೆ ಪಾತ್ರವಾಗಿದೆ. ಅಲ್ಲದೆ ಬಂಡೀಪುರ ಹುಲಿ ಸಂರಕ್ಷಿತಾರಣ್ಯವು ಈ ಮಾನ್ಯತೆಗಾಗಿ ರಾಜ್ಯದಿಂದ ಆಯ್ಕೆಯಾದ ಏಕೈಕ ಹುಲಿ ಮೀಸಲು ಪ್ರದೇಶವಾಗಿದೆ. ಈ  ಹೊಸ ಮಾನ್ಯತೆ ವನ್ಯಜೀವಿಗಳ ಪರಿಣಾಮಕಾರಿ ನಿರ್ವಹಣೆಗೆ ಮಾನದಂಡಗಳನ್ನು ಹೊಂದಿಸುತ್ತದೆ ಮತ್ತು ಅವುಗಳ ನಿರ್ವಹಣೆ ಯಶಸ್ವಿ ಹುಲಿ ಸಂರಕ್ಷಣೆಗೆ ಕಾರಣವಾಗುತ್ತದೆಯೇ ಎಂದು ಪರೀಕ್ಷಿಸಲು ಸ್ವಯಂ ಮೌಲ್ಯಮಾಪನಗಳನ್ನು ಪ್ರೋತ್ಸಾಹಿಸುತ್ತದೆ. 

ಇನ್ನು ನಾಗರಹೊಳೆ ಹುಲಿ ಸಂರಕ್ಷಿತ (ಎನ್ಟಿಆರ್) ಪ್ರದೇಶಕ್ಕೆ ಹೊಸ ಲೋಗೋ ನೀಡಲಾಗಿದ್ದು, ಬೆಂಗಳೂರು ಮೂಲದ ಬ್ರಾಂಡ್ ಸಂಸ್ಥೆ CoAndCo ಈ ಲೋಗೋವನ್ನು ವಿನ್ಯಾಸಗೊಳಿಸಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಸಂರಕ್ಷಿತಾರಣ್ಯದ ನಿರ್ದೇಶಕ ಡಿ ಮಹೇಶ್ ಕುಮಾರ್ ಅವರು, ಹಿಂದಿನ  ಲಾಂಛನವು ಭಾರತದಲ್ಲಿ ಎಲ್ಲಿಯೂ ಕಂಡುಬರದ ಮರವನ್ನು ಹೊಂದಿತ್ತು. ಇದು ಆಫ್ರಿಕನ್ ಸವನ್ನಾಗಳಲ್ಲಿ ಮಾತ್ರ ಕಂಡುಬರುವ ಜಾತಿಯ ಮರವಾಗಿತ್ತು. ಆದ್ದರಿಂದ, ನಾವು ಲಾಂಛನವನ್ನು ಬದಲಾಯಿಸಲು ಮತ್ತು ಬ್ರ್ಯಾಂಡ್ ತಂಡವನ್ನು ಸಂಪರ್ಕಿಸಲು ನಿರ್ಧರಿಸಿದೆವು. CoAndCo ನ ವಿನ್ಯಾಸ  ಕಾರ್ಯತಂತ್ರಜ್ಞ ಅಶ್ವಿನಿ ವಿ ಬಿ, ಅವರು ಅದನ್ನು ಮಾಡುವ ಮೊದಲು ಎನ್ಟಿಆರ್ ಬಗ್ಗೆ ವಿವರವಾಗಿ ಅಧ್ಯಯನ ಮಾಡಿ ಲೋಗೋ ತಯಾರಿಸಿದ್ದಾರೆ ಎಂದು ಹೇಳಿದರು. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com