ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಳಕೆಯಾಗದೇ ಉಳಿದಿದೆ 11,580 ಎಕರೆ ಭೂಮಿ: ಬಿಡಿಎ ಆಡಿಟ್ ನಿಂದ ಮಾಹಿತಿ!

ದೇಶದ ಸಿಲಿಕ್ಯಾನ್ ವ್ಯಾಲಿ ಎಂದೇ ಖ್ಯಾತಿ ಗಳಿಸಿರುವ ಬೆಂಗಳೂರಿನಲ್ಲಿ ಸುಮಾರು 11,580 ಎಕರೆ ಭೂಮಿ ಬಳಕೆಯಾಗದೇ ಖಾಲಿ ಉಳಿದಿದೆ ಎಂಬ ಮಹತ್ವದ ಮಾಹಿತಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಲಭ್ಯವಾಗಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಬೆಂಗಳೂರು: ದೇಶದ ಸಿಲಿಕ್ಯಾನ್ ವ್ಯಾಲಿ ಎಂದೇ ಖ್ಯಾತಿ ಗಳಿಸಿರುವ ಬೆಂಗಳೂರಿನಲ್ಲಿ ಸುಮಾರು 11,580 ಎಕರೆ ಭೂಮಿ ಬಳಕೆಯಾಗದೇ ಖಾಲಿ ಉಳಿದಿದೆ ಎಂಬ ಮಹತ್ವದ ಮಾಹಿತಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಲಭ್ಯವಾಗಿದೆ.

ಬೆಂಗಳೂರು ಅಭಿವದ್ಧಿ ಪ್ರಾಧಿಕಾರ (ಬಿಡಿಎ) ನಡೆಸಿದ ಲೆಕ್ಕಪರಿಶೋಧನೆ ವೇಳೆ ಈ ಮಹತ್ವದ ಮಾಹಿತಿ ಬಹಿರಂಗವಾಗಿದ್ದು, ನಗರದಲ್ಲಿ ಸುಮಾರು 11,580 ಎಕರೆ ಭೂಮಿ ಬಳಕೆಯಾಗದೇ ಖಾಲಿ ಉಳಿದಿದೆ. ನಗರದ 63 ಲೇಔಟ್ ಗಳಲ್ಲಿ ಲಭ್ಯವಿರುವ ಭೂಮಿಯನ್ನು ಗುರುತಿಸಲು ಎರಡು ವರ್ಷಗಳಿಂದ ಕೈಗೊಂಡ  ಬೃಹತ್ ಭೂ ಲೆಕ್ಕಪರಿಶೋಧನಾ ಅಭಿಯಾನದಿಂದ ಸುಮಾರು 1,000 ಕೋಟಿ ರೂ. ಮೌಲ್ಯದ ಸುಮಾರು 11,580 ಎಕರೆ ಭೂಮಿಗಳನ್ನು ವಿವಿಧ ಕಾರಣಗಳಿಂದ ಇನ್ನೂ ಉಪಯೋಗಕ್ಕೆ ತರಲಾಗಿಲ್ಲ ಎಂದು ತಿಳಿದುಬಂದಿದೆ. 

ಕೆಲವು ಭೂಮಿಯನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಅತಿಕ್ರಮಿಸಲಾಗಿದ್ದು, ಇತರ ಭೂ ಪ್ರದೇಶಗಳು ಕೋರ್ಟ್ ದಾವೆಗಳಲ್ಲಿ ಸಿಲುಕಿಕೊಂಡಿವೆ. ಈ ಭೂಮಿಗಳ ಪೈಕಿ ಖಾಲಿ ಫ್ಲಾಟ್‌ಗಳೂ ಇವೆ ಎಂದು ಹಿರಿಯ ಬಿಡಿಎ ಅಧಿಕಾರಿಯೊಬ್ಬರು ಹೇಳಿದರು. ಅನೇಕ ಸಂದರ್ಭಗಳಲ್ಲಿ, ನ್ಯಾಯಾಲಯವು ಬಿಡಿಎ ಪರವಾಗಿ  ತೀರ್ಪು ನೀಡಿದೆ, ಆದರೆ ಪ್ರಾಧಿಕಾರವು ಭೂಮಿಯನ್ನು ಇನ್ನೂ ಸ್ವಾಧೀನಪಡಿಸಿಕೊಂಡಿಲ್ಲ ಎಂದು ಅವರು ಹೇಳಿದರು.

"ಇಐ ಟೆಕ್ನಾಲಜೀಸ್ 10 ಕೋಟಿ ರೂ.ಗಳ ವೆಚ್ಚದಲ್ಲಿ ಸಿದ್ಧಪಡಿಸಿದ ವರದಿಯ ನಿರ್ಣಾಯಕ ಭಾಗಗಳು ಬಹುತೇಕ ಪೂರ್ಣಗೊಂಡಿವೆ ಮತ್ತು ಅಂತಿಮ ವರದಿಯನ್ನು ಹದಿನೈದು ದಿನಗಳಲ್ಲಿ ನಮಗೆ ಹಸ್ತಾಂತರಿಸಲಾಗುವುದು" ಎಂದು ಅವರು ಹೇಳಿದರು.

11,000ಕ್ಕೂ ಅಧಿಕ ಎಕರೆ ಭೂಮಿಯಲ್ಲಿ 2,000 ಎಕರೆ ವಶಕ್ಕೆ ಪಡೆಯಲು ತಕ್ಷಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಿಡಿಎ ಅಧ್ಯಕ್ಷ ಮತ್ತು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ನಮ್ಮ ನಾಲ್ಕು ವಿಭಾಗಗಳಲ್ಲಿ ಮೊದಲು ಆಯಾ ಪ್ರದೇಶಗಳಲ್ಲಿ ಕನಿಷ್ಠ 20 ಎಕರೆ  ಭೂಮಿಯನ್ನು ಗುರುತಿಸಿ ಜುಲೈ 5 ರೊಳಗೆ ನಮಗೆ ಹಸ್ತಾಂತರಿಸುವಂತೆ ನಾವು ಕೇಳಿದ್ದೇವೆ. ಜುಲೈ 8 ರಿಂದ ತೆರವು ಕಾರ್ಯಾಚರಣೆ ಮತ್ತು ಸ್ವಾಧೀನ ಪ್ರಕ್ರಿಯೆಯನ್ನು ಪುನರಾರಂಭಿಸಲು ನಾವು ಯೋಜಿಸಿದ್ದೇವೆ ಎಂದು ಅವರು ಹೇಳಿದರು. 

ಕೋವಿಡ್ ಸಾಂಕ್ರಾಮಿಕದ ಹಿನ್ನಲೆಯಲ್ಲಿ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿರುವ ಹಿನ್ನಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನ್ನ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.  

ಬಿಡಿಎ ಬಲಗೊಳಿಸಿಲು ಕಾನೂನು ತಂಡ
ಇನ್ನು ಬಿಡಿಎಯನ್ನು ಬಲಗೊಳಿಸಿಲು ಕಾನೂನು ತಂಡ ನೇಮಕಕ್ಕೆ ಮುಂದಾಗಿದ್ದು, ಮಾಜಿ ಹೈಕೋರ್ಟ್ ನ್ಯಾಯಾಧೀಶರು ಮತ್ತು ಹತ್ತು ಯುವ ವಕೀಲರನ್ನು ನೇಮಕ ಮಾಡುವ ಮೂಲಕ ಬಿಡಿಎಯ ಕಾನೂನು ವಿಭಾಗವನ್ನು ಶೀಘ್ರದಲ್ಲೇ ನವೀಕರಿಸಲಾಗುವುದು. ಇದಕ್ಕಾಗಿ ನಾವು ಕ್ಯಾಂಪಸ್ ನೇಮಕಾತಿಯನ್ನು  ಕೈಗೊಳ್ಳಲು ಕಾನೂನು ಕಾಲೇಜುಗಳಿಗೆ ಹೋಗುತ್ತೇವೆ ಮತ್ತು ಅವರಿಗೆ ಉತ್ತಮ ವೇತನ ನೀಡುತ್ತೇವೆ ಎಂದು ವಿಶ್ವನಾಥ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com