ರೂ.5,500 ಕೋಟಿ ವೆಚ್ಚದ 5ನೇ ಹಂತದ ಕಾವೇರಿ ನೀರು ಪೂರೈಕೆ ಯೋಜನೆ ಶೀಘ್ರದಲ್ಲೇ ಮುಕ್ತಾಯ

ಮಹಾಮಾರಿ ವೈರಸ್'ಗೆ ಸೆಡ್ಡು ಹೊಡೆದಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್ ಬಿ) ಅಧಿಕಾರಿಗಳು, ನಗರಕ್ಕೆ ಪ್ರಮುಖವಾಗಿರುವ ರೂ.5,500 ಕೋಟಿ ವೆಚ್ಚದ 5ನೇ ಹಂತದ ಕಾವೇರಿ ನೀರು ಪೂರೈಕೆ ಯೋಜನೆಯ ಕಾಮಗಾರಿ ಕಾರ್ಯಗಳನ್ನು ಶೀಘ್ರಗತಿಯಲ್ಲಿ ನಡೆಸುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ 2ನೇ ಅಲೆ ತೀವ್ರವಾಗಿದ್ದರೂ, ಮಹಾಮಾರಿ ವೈರಸ್'ಗೆ ಸೆಡ್ಡು ಹೊಡೆದಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್ ಬಿ) ಅಧಿಕಾರಿಗಳು, ನಗರಕ್ಕೆ ಪ್ರಮುಖವಾಗಿರುವ ರೂ.5,500 ಕೋಟಿ ವೆಚ್ಚದ 5ನೇ ಹಂತದ ಕಾವೇರಿ ನೀರು ಪೂರೈಕೆ ಯೋಜನೆಯನ್ನು ಗಡುವಿಗೂ ಮುನ್ನ ಮುಕ್ತಾಯಗೊಳಿಸಲು ಚುರುಕಾಗಿ ಕಾಮಗಾರಿ ಕಾರ್ಯಗಳನ್ನು ತ್ವರಿತಗೊಳಿಸುತ್ತಾರೆ.  

ಯೋಜನೆ ಶೀಘ್ರಗತಿಯಲ್ಲಿ ಪೂರ್ಣಗೊಂಡಿದ್ದೇ ಆದರೆ, ಬೆಂಗಳೂರಿನ ಪೆರಿಫೆರಲ್ ಪ್ರದೇಶದಲ್ಲಿರುವ ಸುಮಾರು 50 ಲಕ್ಷ ನಿವಾರಿಗಳಿಗೆ ಕುಡಿಯುವ ನೀರು ದೊರೆಯಲಿದೆ. 

ಕಾವೇರಿ ನೀರು ಸರಬರಾಜು ಯೋಜನೆಯ 5ನೇ ಹಂತದ ಯೋಜನೆ ಪೂರ್ಣಗೊಂಡಿದ್ದೇ ಆದರೆ, ಪ್ರತೀನಿತ್ಯ 775 ದಶಲಕ್ಷ ಲೀಟರ್ ನೀರನ್ನು ಪೂರೈಕೆ ಮಾಡಬಹುದು. ಪ್ರಸ್ತುತ ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿಯಿಂದ 1450 ಎಂಎಲ್ ಡಿ ಕಾವೇರಿ ನೀರನ್ನು ಬೆಂಗಳೂರಿಗೆ ಪಂಪ್ ಮಾಡಲಾಗುತ್ತಿದೆ. ಈ ಯೋಜನೆಯಿಂದ ಮಹದೇವಪುರ, ದಾಸರಹಳ್ಳಿ,ರಾಜರಾಜೇಶ್ವರಿನಗರ, ಬ್ಯಾಟರಾಯನಪುರ ಮತ್ತು ಬೊಮ್ಮನಹಳ್ಳಿ ಸುತ್ತಮುತ್ತಲಿನ 110 ಹಳ್ಳಿಗಳಿಗೆ ನೀರು ಪೂರೈಕೆಯಾಗಲಿದೆ. ಕೊರೋನಾ ಸಾಂಕ್ರಾಮಿಕ ರೋಗ ಹರಡುತ್ತಿರುವ ನಡುವಲ್ಲೇ ಯೋಜನೆಯ ಕಾರ್ಯವನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಬೇಕೆಂದು ಕಾಮಕಾರಿಗಳನ್ನು ಚುರುಕಿನಿಂದ ಸಾಗಿಸುತ್ತಿದ್ದೇವೆಂದು ಬಿಡಬ್ಲ್ಯೂಎಸ್‌ಎಸ್ ಬಿ ಅಧಿಕಾರಿ ಎಸ್.ವಿ.ರಮೇಶ್ ಅವರು ಹೇಳಿದ್ದಾರೆ. 

ಯೋಜನೆಯ ಇಂಜಿನಿಯರ್ ಗಳು ಗಡಿಯಾರದ ಮುಳ್ಳುಗಳಂತೆ ಕೆಲಸ ಮಾಡುತ್ತಿದ್ದಾರೆ. ಯೋಜನೆಯ ಗಡುವನ್ನು 2023ರ ಆಗಸ್ಟ್ ವರೆಗೂ ನೀಡಲಾಗಿದೆ. ಜಪಾನಿನ ಇಂಟರ್ ನ್ಯಾಷನಲ್ ಕೊ ಆಪರೇಷನ್ ಏಜೆನ್ಸಿ, ಬಿಡಬ್ಲ್ಯೂಎಸ್ಎಸ್'ಬಿ 2017ರ ಜುಲೈ ತಿಂಗಳಿನಲ್ಲಿ ಒಪ್ಪಂದ ಮಾಡಿಕೊಂಡು ಯೋಜನೆಯ ಕಾರ್ಯ ನಡೆಸುತ್ತಿದೆ. 

2020 ರ ಜನವರಿ ಮತ್ತು ನವೆಂಬರ್ ನಡುವೆ ಎಲ್ಲಾ ನೀರು ಸರಬರಾಜು ಮತ್ತು ಒಳಚರಂಡಿಗೆ ಗುತ್ತಿಗೆ ನೀಡಲಾಗಿದೆ. ಒಳಚರಂಡಿ ಸಂಸ್ಕರಣಾ ಘಟಕಗಳು ಮತ್ತು ಒಳಚರಂಡಿಗೆ ಈ ತಿಂಗಳು ಗುತ್ತಿಗೆಗಳನ್ನು ನೀಡಲಾಗುತ್ತದೆ.  ತೊರೆಕಾಡನಹಳ್ಳಿಯಲ್ಲಿ 775 ಎಂಎಲ್‌ಡಿ ನೀರು ಸಂಸ್ಕರಣಾ ಘಟಕ ಮತ್ತು ಟಿ ಕೆ ಹಳ್ಳಿ, ಹಾರೋ ಹಳ್ಳಿ ಮತ್ತು ಟಾಟಾಗುನಿಗಳಲ್ಲಿ ಪಂಪಿಂಗ್ ಕೇಂದ್ರಗಳ ನಿರ್ಮಾಣಕ್ಕೆ ಈಗಾಗಲೇ ಗುತ್ತಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

 ಬಿಡಬ್ಲ್ಯೂಎಸ್ ಎಸ್ ಬಿ ಅಧ್ಯಕ್ಷ ಎನ್. ಜಯರಾಮ್ ಮಾತನಾಡಿ, ಸಮಯಕ್ಕೆ ಸರಿಯಾಗಿ ಯೋಜನೆ ಪೂರ್ಣಗೊಳಿಸಲು ಈಗಾಗಲೇ ಬಿಬಿಎಂಪಿ, ಪಿಡಬ್ಲ್ಯುಡಿ, ಕೆಪಿಟಿಸಿಎಲ್, ಜಿಕೆವಿಕೆ ಮತ್ತು ಜಿಎಐಎಲ್ ನಿಂದ ಅನುಮತಿ ಪಡೆಯಲಾಗಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com