ಆರ್ ಟಿ ಪಿಸಿಆರ್ ಪರೀಕ್ಷಾ ವರದಿಗೆ 7-10 ದಿನ; ಅಂಗೈಯಲ್ಲಿ ಜೀವ ಹಿಡಿದು ಆತಂಕದಲ್ಲಿ ದಿನದೂಡುತ್ತಿರುವ ಜನ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವಂತೆಯೇ ಇತ್ತ ಆರ್‌ಟಿಪಿಸಿಆರ್ ಪರೀಕ್ಷಾ ಫಲಿತಾಂಶಗಳು ಜನರನ್ನು ತಲುಪಲು 7-10 ದಿನಗಳನ್ನು ತೆಗೆದುಕೊಳ್ಳುತ್ತಿದ್ದು, ಜನರು ತಮ್ಮ ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡು ಭೀತಿಯಲ್ಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಮಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವಂತೆಯೇ ಇತ್ತ ಆರ್‌ಟಿಪಿಸಿಆರ್ ಪರೀಕ್ಷಾ ಫಲಿತಾಂಶಗಳು ಜನರನ್ನು ತಲುಪಲು 7-10 ದಿನಗಳನ್ನು ತೆಗೆದುಕೊಳ್ಳುತ್ತಿದ್ದು, ಜನರು ತಮ್ಮ ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡು ಭೀತಿಯಲ್ಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಖಾಸಗಿ ಆಸ್ಪತ್ರೆಗಳಿಂದ ಫಲಿತಾಂಶಗಳು 24 ಗಂಟೆಗಳ ಒಳಗೆ ಲಭ್ಯವಿದ್ದರೂ, ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ 7-10 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಈ ದೂರುಗಳು ನಿಜವೇ ಎಂದು ಪರಿಶೀಲಿಸಲು, ಕಳೆದ ಏಪ್ರಿಲ್ 24 ರಂದು ಮಂಗಳೂರಿನ ಬೆಜೈನಲ್ಲಿರುವ ಸಾರ್ವಜನಿಕ  ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆಗೆ ಹೋಗಿದ್ದರು, ಆದರೆ 10 ದಿನಗಳ ನಂತರವೂ ಫಲಿತಾಂಶ ಬಂದಿಲ್ಲ. ಕೇವಲ ವರದಿಗಾರ ಮಾತ್ರವಲ್ಲ ಇದು ಎಲ್ಲರ ಪರಿಸ್ಥಿತಿಯಾಗಿದೆ. ಇದು ಸಮಾನ್ಯ ಜನರ ಒತ್ತಡದ ಮಟ್ಟವನ್ನು ಹೆಚ್ಚಿಸುತ್ತದೆ. ಅಂತೆಯೇ ಖಾಸಗಿ ಸೌಲಭ್ಯಗಳತ್ತ ಜನ ಮುಖ ಮಾಡುವಂತೆ ಪರೋಕ್ಷವಾಗಿ  ಪ್ರೇರಿಪಿಸುತ್ತಿದೆ.

ಸಿಬ್ಬಂದಿಗಳು ಹೇಳುವಂತೆ ಆರ್‌ಟಿಪಿಸಿಆರ್ ಫಲಿತಾಂಶವು ಕನಿಷ್ಠ ಏಳು ದಿನಗಳನ್ನು ತೆಗೆದುಕೊಳ್ಳುತ್ತದೆ. ಪರೀಕ್ಷಾ ಫಲಿತಾಂಶಗಳ ತುರ್ತು ಅಗತ್ಯವಿರುವ ಜನರು ಪರೀಕ್ಷೆಗೆ ಒಳಗಾಗದೆ ಪಿಎಚ್‌ಸಿ ಮತ್ತು ಸರ್ಕಾರಿ ಆಸ್ಪತ್ರೆಗಳಿಂದ ಹಿಂದಿರುಗುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳನ್ನು ಸಂಪರ್ಕಿಸಲು ಅವರು ಪರೋಕ್ಷವಾಗಿ  ಒತ್ತಾಯಿಸಲ್ಪಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ಪರೀಕ್ಷೆಗೆ 800 ರಿಂದ 1,300 ರೂ. ಪಡೆಯಲಾಗುತ್ತಿದೆ. ಈ ಬಗ್ಗೆ ಖಾಸಗಿ ಆಸ್ಪತ್ರೆ ಉದ್ಯೋಗಿಗಳು ಕೂಡ ಸಮರ್ಥನೆ ಮಾಡಿಕೊಂಡಿದ್ದು, ನಾವು ಫಲಿತಾಂಶವನ್ನು ಬೇಗ ನೀಡುವುದರಿಂದ ಈ ಬೆಲೆ ಸಾಮಾನ್ಯ ಎಂದು ಹೇಳಿದ್ದಾರೆ.

ಪರೀಕ್ಷೆಗಳಿಗೆ ಹೋಗುವ ಜನರ ಸಂಖ್ಯೆಯಲ್ಲಿ ದೊಡ್ಡ ಪ್ರಮಾಣದಲ್ಲಿರುವುದರಿಂದ ಸರ್ಕಾರಿ ಸೌಲಭ್ಯಗಳ ಫಲಿತಾಂಶಗಳು ವಿಳಂಬವಾಗುತ್ತಿವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಈ ಒತ್ತಡ ತಗ್ಗಿಸಲು ಕೋವಿಡ್ ರೋಗಲಕ್ಷಣಗಳು ಮುಂದುವರಿದು, 17 ದಿನಗಳ ಪ್ರತ್ಯೇಕತೆಯ ನಂತರ ರೋಗಲಕ್ಷಣಗಳು  ಇಲ್ಲದಿದ್ದರೆ ಮರುಪರೀಕ್ಷೆಗೆ ಹೋಗಬೇಡಿ ಎಂದು ವೈದ್ಯರು ಮನವಿ ಮಾಡಿಕೊಂಡಿದ್ದಾರೆ. ಪರೀಕ್ಷಾ ಫಲಿತಾಂಶಗಳನ್ನು ಪ್ರಕಟಿಸುವಲ್ಲಿನ ವಿಳಂಬವನ್ನು ನಿಭಾಯಿಸಲು, ಸರ್ಕಾರಿ ಸೌಲಭ್ಯಗಳಿಂದ ಖಾಸಗಿ ಪ್ರಯೋಗಾಲಯಗಳಿಗೆ ಹೆಚ್ಚುವರಿ ಮಾದರಿಗಳನ್ನು ಕಳುಹಿಸಲು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರು  ಸರ್ಕಾರದ ಅನುಮೋದನೆಯ ನಂತರ ಜಿಲ್ಲಾಡಳಿತಕ್ಕೆ ಅನುಮತಿ ನೀಡಿದ್ದಾರೆ.ಆದರೂ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ, ತ್ವರಿತ ಫಲಿತಾಂಶಗಳನ್ನು ಪಡೆಯಲು ಜನರು ಖಾಸಗಿ ಆಸ್ಪತ್ರೆಗಳಲ್ಲಿ ಪುನರಾವರ್ತಿತ ಪರೀಕ್ಷೆಗಳಿಗೆ ಹೋಗುವಂತೆ ಇದು ಪರೋಕ್ಷ ಒತ್ತಡ ಹೇರುತ್ತಿದೆ ಎನ್ನಲಾಗಿದೆ.

ಜಿಲ್ಲೆಯ ವೆನ್ಲಾಕ್ ಆಸ್ಪತ್ರೆಯಲ್ಲಿರುವ ಮಂಗಳೂರು ವೈರಾಲಜಿ ರಿಸರ್ಚ್ ಮತ್ತು ಡಯಾಗ್ನೋಸ್ಟಿಕ್ ಲ್ಯಾಬೊರೇಟರಿಯ ನೋಡಲ್ ಅಧಿಕಾರಿ ಡಾ.ಶರತ್ ಕುಮಾರ್ ಅವರು ಈ ಬಗ್ಗೆ ಮಾತನಾಡಿದ್ದು, ಪರೀಕ್ಷಾ ಫಲಿತಾಂಶಗಳನ್ನು ವೆಬ್‌ಸೈಟ್‌ನಲ್ಲಿ ನವೀಕರಿಸಲು ವಿಳಂಬವಾಗುತ್ತಿದೆ. ವೆಬ್‌ಸೈಟ್‌ನಲ್ಲಿ ಡೇಟಾವನ್ನು  ಸುವ್ಯವಸ್ಥಿತಗೊಳಿಸಿ ಮತ್ತು ನವೀಕರಿಸುತ್ತಿರುವುದರಿಂದ ಶೀಘ್ರದಲ್ಲೇ ಪರಿಸ್ಥಿತಿಯನ್ನು ಬಗೆಹರಿಸಲಾಗುವುದು. ದಿನಕ್ಕೆ 1,400 ಮಾದರಿಗಳನ್ನು ಪರೀಕ್ಷಿಸುವ ಸಾಮರ್ಥ್ಯವನ್ನು ಹೊಂದಿದ್ದರೂ, ಸಾಮರ್ಥ್ಯ ಮೀರಿ 2,500 ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com