ಕೋವಿಡ್ ಕೇರ್ ಕೇಂದ್ರ
ಕೋವಿಡ್ ಕೇರ್ ಕೇಂದ್ರ

ಖಾಸಗಿ ಸಂಸ್ಥೆಗಳ ಮೇಲುಸ್ತುವಾರಿಯಲ್ಲಿ ಸಿಸಿಸಿ ಕೇಂದ್ರ ನಿರ್ವಹಣೆ..?

ಬೆಂಗಳೂರಿನಲ್ಲಿ ತೆರೆಯಲಾಗಿರುವ ಬೃಹತ್ ಕೋವಿಡ್ ಕೇರ್ ಕೇಂದ್ರಗಳ ನಿರ್ವಹಣೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಖಾಸಗಿ ಸಂಸ್ಥೆಗಳಿಗೆ ನೀಡಿದೆಯೇ..?
Published on

ಬೆಂಗಳೂರು: ಬೆಂಗಳೂರಿನಲ್ಲಿ ತೆರೆಯಲಾಗಿರುವ ಬೃಹತ್ ಕೋವಿಡ್ ಕೇರ್ ಕೇಂದ್ರಗಳ ನಿರ್ವಹಣೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಖಾಸಗಿ ಸಂಸ್ಥೆಗಳಿಗೆ ನೀಡಿದೆಯೇ..?

ಬೆಡ್ ಗಳು ಮತ್ತು ಮತ್ತು ಕೋವಿಡ್ ವಾರ್ ರೂಂ ತೊಂದರೆಗಳನ್ನು ನಿಯಂತ್ರಿವಲ್ಲಿ ಬಿಬಿಎಂಪಿ ವಿಫಲವಾಗುತ್ತಿದ್ದು, ಇದೇ ಕಾರಣಕ್ಕೆ ಕೋವಿಡ್ ಕೇರ್ ಕೇಂದ್ರಗಳ ನಿರ್ವಹಣಾ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗಳಿಗೆ ನೀಡಿದೆ ಎನ್ನಲಾಗಿದೆ. ಕೋರಮಂಗಲ ರಾಷ್ಟ್ರೀಯ ಕ್ರೀಡಾಕೂಟ ಗ್ರಾಮದಲ್ಲಿ ನಗರದ ಅತಿದೊಡ್ಡ  ಕೋವಿಡ್ ಕೇರ್ ಕೇಂದ್ರವನ್ನು (ಸಿಸಿಸಿ) ನಿರ್ವಹಿಸುವ ಒಪ್ಪಂದವನ್ನು ಎರಡು ಸಂಘಗಳು ಪಡೆದುಕೊಂಡಿವೆ ಎಂದು ಹೇಳಲಾಗಿದೆ.

ಕೆಲವು ದಿನಗಳ ಹಿಂದೆ, ಯುನೈಟೆಡ್ ಸಿಖ್ ಚಳವಳಿ ಸಂಸ್ಥೆ ಒಳಾಂಗಣ ಕ್ರೀಡಾಂಗಣದಲ್ಲಿ ಸಿಸಿಸಿ ತೆರೆಯಲು ಬಿಬಿಎಂಪಿಯೊಂದಿಗೆ ಕೆಲಸ ಮಾಡುತ್ತಿದ್ದೇವೆಂದು ವೀಡಿಯೊವನ್ನು ಅಪ್ಲೋಡ್ ಮಾಡಿದ್ದರು. ಈ ಬಗ್ಗೆ ಬಿಬಿಎಂಪಿ ದಕ್ಷಿಣ ವಲಯದ ಅಧಿಕಾರಿಗಳು ವಿವರವಾದ ವಿಚಾರಣೆ ನಡೆಸಿದಾಗ ವಲಯ ಆಡಳಿತವು  ಯಾವುದೇ ಅನುಮತಿ ನೀಡಿಲ್ಲ ಮತ್ತು ಬಿಬಿಎಂಪಿ ಕೂಡ ಯುನೈಟೆಡ್ ಸಿಖ್ ಚಳವಳಿ ಸಂಸ್ಥೆಯೊಂದಿಗೆ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ತಿಳಿದುಬಂದಿತ್ತು.

ಆದರೆ ಸಂಸ್ಥೆಯ ಮುಖ್ಯಸ್ಥ ಮೊಯಾನಂದರ್ ಸಿಂಗ್ ಅವರು ಬಿಬಿಎಂಪಿ ಪ್ರಧಾನ ಕಚೇರಿಯಿಂದ ಮೌಖಿಕ ಅನುಮತಿ ಪಡೆದಿದ್ದು, ಕೆಲಸವನ್ನು ಪ್ರಾರಂಭಿಸಲು ಅಂತಿಮ ಆದೇಶಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದರು. ಏತನ್ಮಧ್ಯೆ, ಎನ್‌ಜಿವಿ ಕೇಂದ್ರ ಮತ್ತು ಇತರೆ ಬಿಬಿಎಂಪಿ ಸಿಸಿಸಿಗಳನ್ನು ನಿರ್ವಹಿಸುವ  ಒಪ್ಪಂದವನ್ನು ತಾವು ಪಡೆದುಕೊಂಡಿದ್ದೇವೆ ಎಂದು ಎಕೆ ಎಂಟರ್‌ಪ್ರೈಸಸ್‌ ಬೆಂಗಳೂರಿನ ವಿನಯ್  ಚಂದ್ರಶೇಖರ್ ಹೇಳಿದ್ದಾರೆ. ಅವರು ಬಿಬಿಎಂಪಿಯಿಂದ ಕೆಲಸ ಪ್ರಾರಂಭಿಸಲು ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಆದರೆ ಮಾರ್ಚ್ 19 ರಂದು ಜಾಗವನ್ನು ಸುಪರ್ದಿಗೆ ತೆಗೆದುಕೊಂಡಿದ್ದಾರೆ  ಎನ್ನಲಾಗಿದೆ. 

ಅವರು ಸಿಸಿಸಿಗಳು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಬಿಬಿಎಂಪಿಗೆ  ಲಾಂಡ್ರಿ, ಕೊಳಾಯಿ, ಅಡುಗೆ, ವೈದ್ಯಕೀಯ ಮತ್ತು ಡೇಟಾ ಎಂಟ್ರಿ ಇತರೆ ಕೆಲಸಗಳನ್ನು ಮಾಡುವ ಕುರಿತು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಆದರೆ ದಕ್ಷಿಣ ವಲಯ ಆಯುಕ್ತ ತುಳಸಿ ಮದ್ದಿನೆನಿ ಈ ಬಗ್ಗೆ ಮಾಹಿತಿ ನೀಡಿದ್ದು, ಯುನೈಟೆಡ್ ಸಿಖ್ ಚಳವಳಿಗೆ ಯಾವುದೇ ಒಪ್ಪಂದವನ್ನು ನೀಡಿಲ್ಲ. ನೀರಿನ ಒಳಚರಂಡಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲವಾದ್ದರಿಂದ ಈ ಸೌಲಭ್ಯವನ್ನು ಇನ್ನೂ ತೆರೆಯಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಎಲ್ಲಾ  ಸೌಲಭ್ಯಗಳು ಬಿಬಿಎಂಪಿಗೆ ಸೇರಿವೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com