ಉಪ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರ ಸಾವು, ವರದಿ ನೀಡುವಂತೆ ಸುರೇಶ್ ಕುಮಾರ್ ಸೂಚನೆ

ಕೋವಿಡ್‌ ಕಾರ್ಯದಲ್ಲಿ‌ ತೊಡಗಿಸಿಕೊಂಡಿದ್ದ ಹಾಗೂ ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಹಲವು ಶಿಕ್ಷಕರು ಹಾಗೂ ಪದವಿಪೂರ್ವ ಉಪನ್ಯಾಸಕರ ಸಾವನ್ನು  ಗಂಭೀರವಾಗಿ ಪರಿಗಣಿಸಿರುವ ಸಚಿವ ಎಸ್‌. ಸುರೇಶ್ ಕುಮಾರ್‌  ಈ ಕುರಿತು ಕೂಡಲೇ ಶಿಕ್ಷಕವಾರು ವರದಿಯನ್ನು ಮಂಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್
ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್

ಬೆಂಗಳೂರು: ಕೋವಿಡ್‌ ಕಾರ್ಯದಲ್ಲಿ‌ ತೊಡಗಿಸಿಕೊಂಡಿದ್ದ ಹಾಗೂ ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಹಲವು ಶಿಕ್ಷಕರು ಹಾಗೂ ಪದವಿಪೂರ್ವ ಉಪನ್ಯಾಸಕರ ಸಾವನ್ನು  ಗಂಭೀರವಾಗಿ ಪರಿಗಣಿಸಿರುವ ಸಚಿವ ಎಸ್‌. ಸುರೇಶ್ ಕುಮಾರ್‌ 
ಈ ಕುರಿತು ಕೂಡಲೇ ಶಿಕ್ಷಕವಾರು ವರದಿಯನ್ನು ಮಂಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಕಳೆದ ಏಪ್ರಿಲ್ 2021ರಿಂದ ಇಲ್ಲಿಯವರೆಗೆ ಕೋವಿಡ್ ಕಾರಣದಿಂದ‌ ಮೃತಪಟ್ಟ ಶಿಕ್ಷಕರು ಹಾಗೂ ಉಪನ್ಯಾಸಕರ‌‌ ವಯಸ್ಸು, ಹಾಗೂ 
ಸಾವಿನ ಖಚಿತ ಕಾರಣಗಳೊಂದಿಗೆ ವರದಿ ಮಂಡಿಸುವಂತೆ  ಶಿಕ್ಷಣ‌ ಇಲಾಖೆಯ ಆಯುಕ್ತರು ಹಾಗೂ ಪದವಿಪೂರ್ವ ಶಿಕ್ಷಣ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. 

ಶಿಕ್ಷಕರ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಸುರೇಶ್‌ಕುಮಾರ್, ಇದು ದುರದೃಷ್ಟಕರ ಸಂಗತಿ. ಶಿಕ್ಷಕರ ಕುಟುಂಬಗಳ ಬಗ್ಗೆ ತಮ್ಮ ತೀವ್ರವಾದ ಸಂತಾಪವಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com