ಬೆಂಗಳೂರು: ಬಿಜಿಎಸ್ ಮೆಡಿಕಲ್ ಕಾಲೇಜಿನಿಂದ ಕೋವಿಡ್ ಸೋಂಕಿತರಿಗೆ ನೂತನವಾಗಿ ಬೆಡ್ ವ್ಯವಸ್ಥೆ ಮಾಡಲಾಗಿದ್ದು, ಬೆಡ್ ವ್ಯವಸ್ಥೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು.
ಬಿಜಿಎಸ್ ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಸೆಂಟರ್ ಮತ್ತು ಸಾರ್ವಜನಿಕ ಸೇವೆಗೆ ಚಾಲನೆ ನೀಡಲಾಗಿದ್ದು, ಆಕ್ಸಿಜನ್ ಸೌಲಭ್ಯವುಳ್ಳ 210 ಹಾಸಿಗೆ, 33 ವೆಂಟಿಲೇಟರ್ ಇರುವ, 43 ಐಸಿಯು ಹಾಸಿಗೆಗಳು, 30 ಹೆಚ್.ಡಿ.ಯು ಹಾಸಿಗೆಗಳು. 100 ಸಾಮಾನ್ಯ ಹಾಸಿಗೆಗಳ ಬೆಡ್ ವ್ಯವಸ್ಥೆಯನ್ನು ಇದು ಒಳಗೊಂಡಿದೆ.
ಇನ್ನು ಮೈಸೂರು ಹಸಿರು ಪ್ರತಿಷ್ಠಾನ ವತಿಯಿಂದ ಎರಡು ಸಾವಿರ ಗಿಡಗಳನ್ನು ಹಂಚಿಕೆ ಮಾಡಲಾಗಿದ್ದು, ಬಿಜಿಎಸ್ ಕ್ಯಾಂಪಸಲ್ಲಿ ಗಿಡ ನೆಡುವ ಮೂಲಕ ಹಾಸಿಗೆ ಸೌಲಭ್ಯಗಳಿಗೆ ಚಾಲನೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, 'ಬಿಜಿಎಸ್ ಆಸ್ಪತ್ರೆ ವತಿಯಿಂದ ಆಕ್ಸಿಜನ್, ಐಸಿಯು, ಸಾಮಾನ್ಯ ಬೆಡ್ ವ್ಯವಸ್ಥೆ ಮಾಡಲಾಗಿದೆ. ಮೈಸೂರು ಹಸಿರು ಪ್ರತಿಷ್ಠಾನದಿಂದ 2ಸಾವಿರ ಗಿಡಗಳನ್ನ ನೆಡಲಾಗಿದೆ. ನಿರ್ಮಲಾನಂದ ಶ್ರೀಗಳು, ಪ್ರಕಾಶ್ ಸ್ವಾಮೀಜಿ ಅವರಿಗೆ ಧನ್ಯವಾದಗಳು. ಬಿಜಿಎಸ್ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಮಾಡಿದ್ದು ಖುಷಿ ತಂದಿರುವುದಾಗಿ ಸಿಎಂ ಹೇಳಿದರು.
ಅಂತೆಯೇ ನಾಡಿನ ವಿದ್ಯಾರ್ಥಿಗಳ ಶೈಕ್ಷಣಿಕ ವ್ಯವಸ್ಥೆ ಮಾಡಲಾಗಿದೆ. ಜಾತ್ಯಾತೀತವಾಗಿ ಶಿಕ್ಷಣ ಬಾಗಿಲು ತೆರೆದಿದೆ. ಉನ್ನತ ಶಿಕ್ಷಣ ಜೊತೆಗೆ ಆಧುನಿಕತೆಯನ್ನ ಹೊಂದಿದೆ. ಕಡು ಬಡವರಿಗೂ ಸುಲಭ ದರದಲ್ಲಿ ಚಿಕಿತ್ಸೆ ದೊರೆಯುತ್ತಿದೆ. ಬಿಜಿಎಸ್ ಸಂಸ್ಥೆ ಸರ್ಕಾರದೊಂದಿಗೆ ಸಹಕಾರ ನೀಡಿದೆ. ಕೋವಿಡ್ ಕೇರ್ ಆರಂಭಿಸಿರುವುದು, ಸಂಸ್ಥೆಯ ಮಾನವೀಯತೆ ಕಂಡು ಬರುತ್ತಿದೆ.ಇದಕ್ಕಾಗಿ ನಿರ್ಮಲಾನಂದ ಶ್ರೀಗಳಿಗೆ ಗೌರವ ಅರ್ಪಿಸುವುದಾಗಿ ಹೇಳಿದರು.
ಕಳೆದ ಮೂರು ವರ್ಷದಿಂದ ಹಸಿರು ಪ್ರತಿಷ್ಠಾನ ಕೆಲಸ ಮಾಡುತ್ತಿದೆ. ಸಾಮೂಹಿಕವಾಗಿ ಗಿಡಗಳನ್ನು ನೆಡಲಾಗುತ್ತಿದೆ. ಪ್ರತಿಷ್ಠಾನ ಹೀಗೆ ಹಲವು ರೀತಿಯಲ್ಲಿ ಮನು ಕುಲದ ಒಳಿತಿಗೆ ಉತ್ತಮ ಕೆಲಸ ಮಾಡುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ಜನರ ಸಹಕಾರ ಅತ್ಯಗತ್ಯ. ಆಸ್ಪತ್ರೆ ಕೋವಿಡ್ ಕೇರ್ ಸೆಂಟರ್ ಎಲ್ಲರಿಗೂ ಮಾದರಿಯಾಗಲಿ ಯಡಿಯೂರಪ್ಪ ಹೇಳಿದರು.
ಮೀನುಗಾರರ ರಕ್ಷಣೆ
ಇದೇ ವೇಳೆ ಅರಬ್ಬೀ ಸಮುದ್ರದಲ್ಲಿ ಮೀನುಗಾರರ ರಕ್ಷಣೆ ವಿಚಾರವಾಗಿ ಭಾನುವಾರ ಇಡೀ ದಿನ ಪ್ರಯತ್ನ ಮಾಡಿ ಮೀನುಗಾರರ ರಕ್ಷಣೆ ಆಗಿದೆ. ಬಹಳ ಸಾಹಸ ಮಾಡಿ ರಕ್ಷಣೆ ಮಾಡಿದ್ದಾರೆಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸುದ್ದಿಗಾರರೊಂದಿಗೆ ನಿರ್ಮಲಾನಂದ ಶ್ರೀಗಳು ಮಾತನಾಡಿ, ಬಿಜಿಎಸ್ ಮಠದಿಂದ ಹೊಸ ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.ಕಳೆದ ಒಂದು ವರ್ಷದಿಂದ ಕರೋನಾ ಕಾಣಿಸಿಕೊಂಡಿದೆ. ಕೋವಿಡ್ ರೋಗಿಗಳನ್ನು ಚಿಕಿತ್ಸೆ ನೀಡುವ ಕೆಲಸ ಸಂಸ್ಥೆ ಮಾಡುತ್ತಿದೆ. ಇದಕ್ಕಾಗಿ ಆಸ್ಪತ್ರೆಯಲ್ಲಿ ಶೇ.75 ರಷ್ಟು ಬೆಡ್ ಮೀಸಲಿಟ್ಟಿದ್ದೇವೆ. ಎಲ್ಲೆಡೆ ಆಕ್ಸಿಜನ್ ಕೊರತೆ ಇದೆ. ಆಕ್ಸಿಜನ್ 13 ಕೆ.ಎಲ್ ಸಾಮರ್ಥ್ಯವುಳ್ಳ ಟ್ಯಾಂಕ್ ಉದ್ಘಾಟನೆ ಮಾಡಲಾಗಿದೆ ಎಂದರು. ಸಚಿವ ಎಸ್.ಟಿ.ಸೋಮಶೇಖರ್ ಈ ವೇಳೆ ಉಪಸ್ಥಿತರಿದ್ದರು.
Advertisement