4 ವಾರಗಳ ಬಳಿಕ ಕೋವಿಶೀಲ್ಡ್ ಎರಡನೇ ಡೋಸ್ ಲಸಿಕೆ ಪಡೆದವರಲ್ಲಿ 'ಆ್ಯಂಟಿಬಾಡಿ'ಗಳ ಉತ್ಪತ್ತಿ ಉತ್ತಮ: ವರದಿ

ಕೋವಿಶೀಲ್ಡ್ ನ ಎರಡೂ ಲಸಿಕೆ ಹಾಕಿಸಿಕೊಂಡವರಲ್ಲಿ ಉತ್ತಮವಾಗಿ 'ಆ್ಯಂಟಿಬಾಡಿ'ಗಳ ಉತ್ಪತ್ತಿಯಾಗಿದೆ ಎಂದು ಅಧ್ಯಯನವೊಂದು ಹೇಳಿದೆ. 
ಕೋವಿಶೀಲ್ಡ್
ಕೋವಿಶೀಲ್ಡ್
Updated on

ಬೆಂಗಳೂರು: ಕೋವಿಶೀಲ್ಡ್ ನ ಎರಡೂ ಲಸಿಕೆ ಹಾಕಿಸಿಕೊಂಡವರಲ್ಲಿ ಉತ್ತಮವಾಗಿ 'ಆ್ಯಂಟಿಬಾಡಿ'ಗಳ ಉತ್ಪತ್ತಿಯಾಗಿದೆ ಎಂದು ಅಧ್ಯಯನವೊಂದು ಹೇಳಿದೆ. 

ಬೆಂಗಳೂರಿನ ಶ್ರೀ ಜಯದೇವ ವೈದ್ಯಕೀಯ ಸಂಸ್ಥೆ ಈ ಅಧ್ಯಯನ ನಡೆಸಿದ್ದು, ತನ್ನದೇ ಸಂಸ್ಥೆಯ 140 ಆರೋಗ್ಯ ಸಿಬ್ಬಂದಿಗಳ ಮೇಲೆ ಈ ಅಧ್ಯಯನ ನಡೆಸಿದೆ. ಮೊದಲ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದ 4 ವಾರಗಳ ಬಳಿಕ 2ನೇ ಡೋಸ್ ಲಸಿಕೆ ಪಡೆದವರಲ್ಲಿ ರೋಗನಿರೋಧಕ ಸಾಮರ್ಥ್ಯ ಹೆಚ್ಚಿಸುವ  ಪ್ರತಿಕಾಯಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. ಈ ಅಧ್ಯಯನದ ಅನ್ವಯ ಕೋವಿ ಶೀಲ್ಡ್ ಎರಡೂ ಲಸಿಕೆ ಪಡೆದವರಲ್ಲಿ ಶೇ.78ರಷ್ಟು ಉತ್ತಮ ಪ್ರಮಾಣದ ಪ್ರತಿಕಾಯಗಳು ಅಭಿವೃದ್ಧಿಯಾಗಿವೆ ಎಂದು ಹೇಳಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಸಂಸ್ಥೆಯ ನಿರ್ದೇಶಕ ಡಾ.ಸಿ ಎನ್ ಮಂಜುನಾಥ್ ಅವರು, ನಾವು ಮಾರ್ಚ್ ಎರಡನೇ ವಾರದಲ್ಲಿ ಒಂದು ಅಧ್ಯಯನವನ್ನು ಮಾಡಿದ್ದು, ಆರೋಗ್ಯ ಕಾರ್ಯಕರ್ತರು ಲಸಿಕೆಯ ನಾಲ್ಕು ವಾರಗಳ ಅಂತರದಲ್ಲಿ ಎರಡೂ ಡೋಸ್ ಗಳನ್ನು ಸ್ವೀಕರಿಸಿದ ನಂತರ. ಅವರ ದೇಹದಲ್ಲಿ ಉತ್ತಮ  ಪ್ರಮಾಣದ ಪ್ರತಿಕಾಯಗಳ ಉತ್ಪತ್ತಿಯಾಗಿದೆ ಎಂದು ಹೇಳಿದ್ದಾರೆ.

ಉತ್ತಮ ರೋಗನಿರೋಧಕ ಸಾಮರ್ಥ್ಯ ಪಡೆಯಲು ಕೋವಿಶೀಲ್ಡ್ ನ ಎರಡೂ ಲಸಿಕೆ ಪಡೆಯುವುದು ಅನಿವಾರ್ಯ. ಇದು ಮಾರಕ ಕೋವಿಡ್ ಸೋಂಕಿನ ಹೊಡೆತದಿಂದ ತಪ್ಪಿಸುತ್ತದೆ. ಮೊದಲ ಡೋಸ್ ರೋಗನಿರೋಧಕ ಪ್ರತಿಕ್ರಿಯೆಯನ್ನು ಪ್ರಾರಂಭಿಸುತ್ತದೆ. ಎರಡನೇ ಡೋಸ್ ರೋಗ ನಿರೋಧಕ ಪ್ರಕ್ರಿಯೆಯ  ಬೂಸ್ಚರ್ ಶಾಟ್ ಆಗಿರುತ್ತದೆ. ಇದು ರೋಗ ನಿರೋಧಕ ಪ್ರಕ್ರಿಯೆ ವೇಗವಾಗಿ ಕಾರ್ಯ ನಿರ್ವಹಿಸಲು ನೆರವಾಗುತ್ತದೆ. ಬಹುತೇಕ ಆರೋಗ್ಯ ಸಿಬ್ಬಂದಿ ಜನವರಿಯಲ್ಲಿ ಮೊದಲ ಡೋಸ್ ಪಡೆದು ಫೆಬ್ರವರಿಯಲ್ಲಿ 2ನೇ ಡೋಸ್ ಪಡೆದಿದ್ದಾರೆ. ಹೀಗೆ ಲಸಿಕೆ ಪಡೆವರನ್ನು ಕೋಮಾರ್ಬಿಡಿಯಲ್ಲಿರುವವರನ್ನೂ  ಪ್ರತ್ಯೇಕಿಸಲಾಗಿದ್ದು, ಅವರಲ್ಲೂ ಉತ್ತಮ ಫಲಿತಾಂಶ ದೊರೆತಿದೆ ಎಂದು ಹೇಳಿದ್ದಾರೆ.

ಅಂತೆಯೇ ಕೇಂದ್ರ ಸರ್ಕಾರವು ಆರಂಭದಲ್ಲಿ ಘೋಷಿಸಿದ ನಿಯಮಾವಳಿಯ ಪ್ರಕಾರ ಎರಡು ಡೋಸ್‌ಗಳ ನಡುವೆ ನಾಲ್ಕು ವಾರಗಳ ಅಂತರವಿದ್ದರೂ, ಇದು ಸಂಪೂರ್ಣವಾಗಿ ವೈಜ್ಞಾನಿಕವಾಗಿದೆ ಮತ್ತು ಪ್ರತಿಕಾಯ ಉತ್ಪಾದನೆಯು ಇನ್ನೂ ಹೆಚ್ಚಾದಾಗ ಅಂತರವನ್ನು 12 ವಾರಗಳವರೆಗೆ ವಿಸ್ತರಿಸಲು ಸಾಧ್ಯವಿದೆ.  ಇದಕ್ಕೆ ಪುರಾವೆಗಳೂ ಕೂಡ ಇವೆ ಎಂದು ಅವರು ಹೇಳಿದರು. 12 ವಾರಗಳ ಅಂತರವು ದೊಡ್ಡ ಮಟ್ಟದಲ್ಲಿ ಪ್ರತಿಕಾಯ ಪ್ರತಿಕ್ರಿಯೆಯನ್ನು ನೀಡುತ್ತದೆ. ಇದಕ್ಕೆ ಸಾಕಷ್ಟು ಅಧ್ಯಯನ ಸಹಿತ ಪುರಾವೆಗಳಿವೆ. ಇದಕ್ಕೆ ಪೂರಕವಾದ ಅಧ್ಯಯನಗಳನ್ನು ಶೀಘ್ರದಲ್ಲೇ ಆಸ್ಪತ್ರೆಯಲ್ಲಿ ಕೈಗೊಳ್ಳಲಾಗುವುದು ಎಂದು ಅವರು  ಹೇಳಿದರು.

ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಮೊದಲ ಡೋಸ್ ಲಸಿಕೆ ಪಡೆದ ಕೆಲ ಕೋವಿಡ್ ವಾರಿಯರ್ಸ್ ಗಳನ್ನು ಎಂಟು ವಾರಗಳ ನಂತರದ ಎರಡನೇ ಡೋಸ್ ಪಡೆದವರ ಮೇಲೆ ಅಧ್ಯಯನ ನಡೆಸಲಾಗುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com