ಬಾಕಿ ಮೊತ್ತ ನೀಡದ ಸರ್ಕಾರ: ಸೇವೆ ಸ್ಥಗಿತಗೊಳಿಸಲು ವೈದ್ಯಕೀಯ ತ್ಯಾಜ್ಯ ಘಟಕಗಳ ನಿರ್ಧಾರ

ವರ್ಷದಿಂದಲೂ ರಾಜ್ಯ ಸರ್ಕಾರ ಬಾಕಿ ಹಣ ನೀಡದ ಹಿನ್ನೆಲೆಯಲ್ಲಿ ಬೇಸತ್ತು ಹೋಗಿರುವ ರಾಜ್ಯದ 26 ಬಯೋಮೆಡಿಕಲ್ ತ್ಯಾಜ್ಯ ಸಂಸ್ಕರಣಾ ಘಟಕಗಳು ಸೇವೆ ಸ್ಥಗಿತಗೊಳಿಸಲುವ ಬೆದರಿಕೆ ಹಾಕಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ವರ್ಷದಿಂದಲೂ ರಾಜ್ಯ ಸರ್ಕಾರ ಬಾಕಿ ಹಣ ನೀಡದ ಹಿನ್ನೆಲೆಯಲ್ಲಿ ಬೇಸತ್ತು ಹೋಗಿರುವ ರಾಜ್ಯದ 26 ಬಯೋಮೆಡಿಕಲ್ ತ್ಯಾಜ್ಯ ಸಂಸ್ಕರಣಾ ಘಟಕಗಳು ಸೇವೆ ಸ್ಥಗಿತಗೊಳಿಸಲುವ ಬೆದರಿಕೆ ಹಾಕಿವೆ. 

ರಾಜ್ಯದ 26 26 ಬಯೋಮೆಡಿಕಲ್ ತ್ಯಾಜ್ಯ ಸಂಸ್ಕರಣಾ ಘಟಕಗಳು ಕೊರೋನಾ ಸಂಬಂಧಿತ ತ್ಯಾಜ್ಯಗಳನ್ನು ನಿರ್ವಹಣೆ ಮಾಡುತ್ತಿದ್ದು, ಬಾಕಿ ಮೊತ್ತವನ್ನು ರಾಜ್ಯ ಸರ್ಕಾರ ಪಾವತಿ ಮಾಡದೇ ಹೋದಲ್ಲಿ ಜೂನ್ 1 ರಿಂದ ಸೇವೆ ಸ್ಥಗಿತಗೊಳಿಸುವುದಾಗಿ ತಿಳಿಸಿವೆ. 

ಬಯೋಮೆಡಿಕಲ್ ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಸೌಲಭ್ಯ ನಿರ್ವಾಹಕರ ಸಂಘದ ಅಧ್ಯಕ್ಷ ಡಿ ಕೆ ನಾಗರಾಜ್ ಅವರು, ಹಾಸನದಲ್ಲಿ ತ್ಯಾಜ್ಯ ಘಟಕವನ್ನು ನಿರ್ವಹಣೆ ಮಾಡುತ್ತಿದ್ದು, 2020 ಮಾರ್ಚ್ ನಿಂದಲೂ ಸರ್ಕಾರ ವೇತನ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ರಾಜ್ಯದಲ್ಲಿ ಪರಿಸರ ಮತ್ತು ಆರೋಗ್ಯ ವಿಪತ್ತುಗಳು ಎದುರಾಗಬಾರದು ಎಂಬ ಉದ್ದೇಶದಿಂದ ಎಲ್ಲಾ ನೌಕರರಿಗೂ ಹಾಗೂ ಎಲ್ಲಾ ರೀತಿಯ ವೆಚ್ಚವನ್ನು ನಮ್ಮ ಜೇಬಿನ ಹಣವನ್ನು ನೀಡಿ ಖರ್ಚು ಮಾಡುತ್ತಿದ್ದೇವೆ. ಕೋವಿಡ್ ತ್ಯಾಜ್ಯ ಅತ್ಯಂತ ಅಪಾಯಕಾರಿ ಹಾಗೂ ಅತ್ಯಂತ ಸೂಕ್ಷ್ಮವಾಗಿದೆ. ಅವುಗಳನ್ನು ನಿರ್ವಹಿಸುವಾಗ ಮತ್ತು ಸುಡುವಾಗ ಸಿಬ್ಬಂದಿಗಳು ಹೆಚ್ಚುವರಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ. ಪ್ರತಿದಿನ ತ್ಯಾಜ್ಯವನ್ನು ಸಂಗ್ರಹಿಸಲು ನಾವು ನಮ್ಮ ವಾಹನಗಳನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುತ್ತೇವೆ. ತ್ಯಾಜ್ಯ ಸಂಗ್ರಹಿಸದೇ ಹೋದರೆ ಸೋಂಕು ಹರಡುವ ಹಾಗೂ ಜನರ ಜೀವನದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ ಎಂದು ನಾಗರಾಜ್ ಹೇಳಿದ್ದಾರೆ. 

ಚಾಮರಾಜನಗರ, ಕೊಡಗು, ಮಂಡ್ಯ, ಹಾಸನ ಮತ್ತು ತುಮಕೂರು ಜಿಲ್ಲೆಗಳನ್ನು ಹೊರತುಪಡಿಸಿ, ಕರ್ನಾಟಕ ಿತರೆ ಎಲ್ಲಾ ಜಿಲ್ಲೆಗಳಲ್ಲೂ ಸಾಮಾನ್ಯ ತ್ಯಾಜ್ಯ ಘಟಕವಿದೆಯ ಈ ಪ್ರದೇಶವನ್ನು ಖಾಸಗಿಯವರು ನಿರ್ವಹಣೆ ಮಾಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳು ಹಾಗೂ ಬಿಬಿಎಂಪಿ ನಡೆಸುತ್ತಿರುವ ಆಸ್ಪತ್ರೆಗಳು ವೇತನವನ್ನು ನೀಡುತ್ತಿವೆ. ಆದರೆ, ಸರ್ಕಾರ ನಡೆಸುತ್ತಿರುವ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಕೇಂದ್ರಗಳಲ್ಲಿ ತ್ಯಾಜ್ಯ ವಿಲೇವಾರಿಗೆ ವೇತನ ನೀಡಲಾಗುತ್ತಿಲ್ಲ. 

ಈ ಘಟಕಗಳಿಂದ ಪ್ರತಿನಿತ್ಯ 25,000 ಕೆಜಿ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ. ನಿರ್ವಾಹಕರು ಸಾಕಷ್ಟು ಬಾರಿ ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದಾರೆ. ಆದರೂ ಸರ್ಕಾರ ಬಾಕಿ ಹಣ ನೀಡಿಲ್ಲ. ನಮ್ಮ ಲೆಕ್ಕಾಚಾರದ ಪ್ರಕಾರ, ನಮಗೆ ಸಂಪೂರ್ಣವಾಗಿ ರೂ. 10 ಕೋಟಿ ರೂಪಾಯಿಗಳನ್ನು ಪಾವತಿಸಬೇಕು. ಕೆಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿ ಘಟಕಗಳನ್ನು ಮುಂದುವರೆಸಲು ಸಣ್ಣ ಪ್ರಮಾಣದ ಹಣ ಬಿಡುಗಡೆ ಮಾಡಿದ್ದಾರೆಂದು ತಿಳಿಸಿದ್ದಾರೆ. 

ಮೇ.10 ರಿಂದಲೇ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿದ್ದೆವು. ಆದರೆ, ಇನ್ನೂ ಮೂರು ವಾರಗಳ ಕಾಲ ಕಾಲಾವಕಾಶ ಕೊಟ್ಟು ನೋಡೋಣ ಎಂದು ನಿರ್ಧರಿಸಿದ್ದೇವೆ. ಈಗಲೂ ಸರ್ಕಾರ ಬಾಕಿ ಹಣ ನೀಡದೇ ಹೋದಲ್ಲಿ ಜೂನ್.1ರಿಂದ ಸೇವೆ ಸ್ಥಗಿತಗೊಳಿಸುತ್ತೇವೆಂದಿದ್ದಾರೆ. 

ಸರ್ಕಾರ ತ್ಯಾಜ್ಯ ನಿರ್ವಹಣೆಗೆ ದರ ನಿಗದಿ ಮಾಡದ ಹಿನ್ನೆಲೆಯಲ್ಲಿ ಬಾಕಿ ಹಣ ನೀಡುವಲ್ಲಿ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳ ಮೂಲಗಳು ಮಾಹಿತಿ ನೀಡಿವೆ. 

ಈ ನಡುವೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಆರೋಗ್ಯ ಇಲಾಖೆಯ ಸ್ಥಳೀಯ ಅಧಿಕಾರಿ ಸಂಪರ್ಕಕ್ಕೆ ಸಿಕ್ಕಿಲ್ಲ. ಆರೋಗ್ಯ ಸಚಿವ ಸುಧಾಕರ್ ಅವರೂ ಕೂಡ ಸಂಪರ್ಕಕ್ಕೆ ಸಿಕ್ಕಿಲ್ಲ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com