ರಾಜ್ಯೋತ್ಸವ ಪ್ರಶಸ್ತಿ ಮೊತ್ತ 5 ಲಕ್ಷ ರೂ. ಗೆ ಹೆಚ್ಚಳ: ಸಿಎಂ ಘೋಷಣೆ

ಮುಂದಿನ ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿಯನ್ನು ಅರ್ಜಿ ಪಡೆದು ನೀಡಲಾಗುವುದಿಲ್ಲ. ಅದರ ಜತೆ ರಾಜ್ಯೋತ್ಸವ ಪ್ರಶಸ್ತಿಯ ಮೊತ್ತವನ್ನು 5 ಲಕ್ಷ ರೂ. ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ
Updated on

ಬೆಂಗಳೂರು: ಮುಂದಿನ ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿಯನ್ನು ಅರ್ಜಿ ಪಡೆದು ನೀಡಲಾಗುವುದಿಲ್ಲ. ಅದರ ಜತೆ ರಾಜ್ಯೋತ್ಸವ ಪ್ರಶಸ್ತಿಯ ಮೊತ್ತವನ್ನು 5 ಲಕ್ಷ ರೂ. ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಅವರು ಇಂದು ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ - 2021ದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡುತ್ತಿದ್ದರು. ರಾಜ್ಯೋತ್ಸವ ಈ ಪ್ರಶಸ್ತಿಯ ಮೌಲ್ಯ ಹೆಚ್ಚಬೇಕು. ಹಣದ ಮೊತ್ತ ಇಲ್ಲಿ ಮಹತ್ವದ್ದಲ್ಲ. ಆದರೆ ಸರ್ಕಾರವೇ ಪ್ರಶಸ್ತಿ ಅರ್ಹರನ್ನು ಗುರುತಿಸುತ್ತದೆ. ಎರಡು ತಿಂಗಳಿಗಿಂತ ಮುಂಚಿತವಾಗಿ ಆಯ್ಕೆ ಸಮಿತಿ ಸಾಧಕರನ್ನು ಪಟ್ಟಿ ಮಾಡುತ್ತದೆ. ನಂತರ ಸರ್ಕಾರವೇ ಸಾಧಕರನ್ನು ಅಯ್ಕೆ ಮಾಡಿ ಪ್ರಶಸ್ತಿ ನೀಡುತ್ತದೆ. ಇಂಥ ವ್ಯವಸ್ಥೆ ಜಾರಿಗೆ ಬರಲಿದೆ ಎಂದರು. 

'ರಾಜ್ಯೋತ್ಸವ ಪ್ರಶಸ್ತಿ ಸಮಾರಂಭದಲ್ಲಿ ಸಾಧಕ ಮತ್ತು ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮುಖ್ಯಮಂತ್ರಿಗಳು, ಪ್ರಶಸ್ತಿ ಮೊತ್ತವನ್ನು 1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗುವುದು, ಮುಂದಿನ ವರ್ಷದಿಂದ ಇದು ಚಾಲನೆಗೆ ಬರಲಿದೆ. ರಾಜ್ಯೋತ್ಸವ ಪ್ರಶಸ್ತಿಗೆ ವಯಸ್ಸಿನ ಮಿತಿಯನ್ನು 60 ವರ್ಷದಿಂದ ಇಳಿಕೆ ಮಾಡಲಾಗುವುದು. ಈ ಸಂಬಂಧ ನ್ಯಾಯಾಲಕ್ಕೆ ಮನವರಿಕೆ ಮಾಡಕೊಡಲಾಗುವುದು ಹೇಳಿದರು. ಕನ್ನಡ ರಾಜ್ಯೋತ್ಸವ ಮುಂದಿನ ದಿನಗಳಲ್ಲಿ ಕನ್ನಡ ಜನೋತ್ಸವವನ್ನಾಗಿ ಆಚರಿಸಲಾಗುವುದು. ನವ ಕರ್ನಾಟಕ ಕಟ್ಟುವ ಚಿಂತನೆಯಿದೆ ಎಂದು ಹೇಳಿದರು.

ಕನ್ನಡದಲ್ಲಿ ಇಷ್ಟೊಂದು ದೊಡ್ಡ ಸಾಧಕರ ಪಟ್ಟಿ ಇದೆ. ಇವರ ಬದುಕಲ್ಲಿ ಹಲವಾರು ಆಯ್ಕೆ ಇತ್ತು, ಆದರೆ ಸಮಾಜಮುಖಿ ಕೆಲಸಕ್ಕೆ ಮಾನ್ಯತೆ ನೀಡಿದ್ರು. ಸಾಹಿತ್ಯ ಕಲಾ ಸಂಗೀತ ಸಂಸ್ಕೃತಿ ಹಾಡುಗಾರಿಕೆ‌ ಎಲ್ಲಾ ರಂಗವನ್ನು ಶ್ರೀಮಂತ ಗೊಳಿಸಿದ್ದಾರೆ ಎಂದು ಸಾಧಕರನ್ನು ಹಾಡಿ ಹೊಗಳಿದರು. ಆಯ್ಕೆ ಸಮಿತಿ ಸಮುದ್ರ ಆಳದಲ್ಲಿ ಇರುವ ಮುತ್ತು, ಭೂಮಿ ಆಳದಲ್ಲಿರುವ ರತ್ನವನ್ನು ಆಯ್ಕೆ ಮಾಡಿದ್ದಾರೆ. ಇವರೆಲ್ಲರಿಗೂ ನನ್ನ ಧನ್ಯವಾದ ಎಂದರು. 

ಪರೋಪಕಾರಿ ಗುಣಗಳು ಮನುಷ್ಯನಲ್ಲಿ ಬರಬೇಕು. ಬದುಕಿನಲ್ಲಿ ಒಂದು ಬ್ಯಾಲೆನ್ಸಿಂಗ್ ಇದೆ. ಇಡೀ ಜಗತ್ತಿನಲ್ಲಿ ಕನ್ನಡ ನಾಡು ವಿಶೇಷವಾದ ಭಾಗ, ಮನುಷ್ಯನಿಗೆ ಹಲವಾರು ಆಸೆ ಅಭಿಲಾಷೆ ಇರುತ್ತೆ. ದೈಹಿಕ ಬೆಳವಣಿಗೆ ಜೊತೆಗೆ ಮಾನಸಿಕ ಬೆಳವಣಿಗೆ ಕೂಡ ಆಗಿರುತ್ತೆ. ಅದರಂತೆ ನಮ್ಮ ಆಸೆ ಅಭಿಲಾಸೆ ಕೂಡ ಬದಲಾಗುತ್ತಿರುತ್ತೆ. ಅದು ಬಂದಾಗ ಮಾತ್ರ ಜೀವನದಲ್ಲಿ ಒಳ್ಳೆಯ ಸಮಾಜ ನಿರ್ಮಾಣ ಮಾಡಬಹುದು. ಮುಂದಿನ ದಿನಗಳಲ್ಲಿ ಕನ್ನಡ ಪರ್ವ ಪ್ರಾರಂಭ ಆಗಬೇಕು. ಪರ್ವ ಅಂದರೆ ಎಲ್ಲಾ ರಂಗದಲ್ಲಿ ಮೊದಲೇ ಸ್ಥಾನ ಕನ್ನಡಕ್ಕೆ ಇರಬೇಕು. ಮೊದಲ ಸ್ಥಾನ ಕನ್ನಡಿಗನಿಗೆ ಇರಬೇಕು ಎಂದು ಕರೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com