ಬಳ್ಳಾರಿ ಜಿಲ್ಲೆಯಲ್ಲಿ ಒಣಗಲು ಬಿಟ್ಟಿದ್ದ ಮೆಣಸಿನಕಾಯಿ ಭಾರೀ ಮಳೆಗೆ ಹಾನಿಗೊಳಗಾಗಿರುವುದು.
ಬಳ್ಳಾರಿ ಜಿಲ್ಲೆಯಲ್ಲಿ ಒಣಗಲು ಬಿಟ್ಟಿದ್ದ ಮೆಣಸಿನಕಾಯಿ ಭಾರೀ ಮಳೆಗೆ ಹಾನಿಗೊಳಗಾಗಿರುವುದು.

ಬಳ್ಳಾರಿ: ಒಂದೇ ರಾತ್ರಿಯಲ್ಲಿ 1 ಕೋಟಿ ರೂ. ಮೌಲ್ಯದ ಮೆಣಸಿನಕಾಯಿ ಹಾನಿ!

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕುರುಗೋಡು ತಾಲೂಕಿನ ಮೆಣಸಿನಕಾಯಿ ಬೆಳೆಗಾರರು ಕಂಗಾಲಾಗಿದ್ದಾರೆ.

ಬಳ್ಳಾರಿ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕುರುಗೋಡು ತಾಲೂಕಿನ ಮೆಣಸಿನಕಾಯಿ ಬೆಳೆಗಾರರು ಕಂಗಾಲಾಗಿದ್ದಾರೆ.

ಕಟಾವಿಗೆ ಬಂದಿದ್ದ ಮೆಣಸಿನಕಾಯಿಗೆ ಸರಿಯಾದ ದಾಸ್ತಾನು ಮಾಡಲು ಸಾಧ್ಯವಾಗದ ಕಾರಣ ಒಂದೇ ರಾತ್ರಿಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ಮೆಣಸಿನಕಾಯಿ ಹಾನಿಗೊಳಗಾಗಿದೆ ಎಂದು ತಿಳಿದುಬಂದಿದೆ.

ತಾಲೂಕಿನ ಆಲದಹಳ್ಳಿಯಲ್ಲಿ ಶೈತ್ಯಾಗಾರ ನಿರ್ಮಿಸುವುದಾಗಿ ಈ ಹಿಂದೆ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಇದರಲ್ಲಿ ಯಾವುದೇ ಪ್ರಗತಿಗಳೂ ಕಂಡು ಬಂದಿಲ್ಲ.

ಕೆಂಪು ಮೆಣಸಿನಕಾಯಿಯನ್ನು ತೆರೆದ ಸ್ಥಳಗಳಲ್ಲಿ ಒಣಗಿಸಿದ ನಂತರವೇ ಗೋದಾಮಿನಲ್ಲಿ ಸಂಗ್ರಹಿಸಲಾಗುತ್ತದೆ. ಈ ಬಾರಿ ಬಿಸಿಲು ಕಾಣದೆ ಮಳೆಯಿಂದಾಗಿ ಭಾರೀ ಪ್ರಮಾಣ ಮೆಣಸಿನಕಾಯಿ ಹಾನಿಗೊಳಗಾಗುವಂತಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com