ಭಾರೀ ಮಳೆ: ಶಿವಮೊಗ್ಗದಲ್ಲಿ 112 ಹೆಕ್ಟೇರ್‌ ಬೆಳೆ ನಾಶ

ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ 101 ಹೆಕ್ಟೇರ್‌ ಭತ್ತ, 9 ಹೆಕ್ಟೇರ್‌ ಜೋಳ ಹಾಗೂ 2 ಹೆಕ್ಟೇರ್‌ ಇತರೆ ಬೆಳೆ ಸೇರಿದಂತೆ 112 ಹೆಕ್ಟೇರ್‌ ಪ್ರದೇಶದ ಬೆಳೆಗಳು ನಾಶಗೊಂಡಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶಿವಮೊಗ್ಗ: ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ 101 ಹೆಕ್ಟೇರ್‌ ಭತ್ತ, 9 ಹೆಕ್ಟೇರ್‌ ಜೋಳ ಹಾಗೂ 2 ಹೆಕ್ಟೇರ್‌ ಇತರೆ ಬೆಳೆ ಸೇರಿದಂತೆ 112 ಹೆಕ್ಟೇರ್‌ ಪ್ರದೇಶದ ಬೆಳೆಗಳು ನಾಶಗೊಂಡಿವೆ.

ಕಳೆದ ವಾರ ನವೆಂಬರ್ 13 ಮತ್ತು 14 ರಂದು ಸುರಿದ ಮಳೆಗೆ 56 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಬೆಳೆ ಹಾನಿಗೊಳಗಾಗಿತ್ತು. ಇದೀಗ ಕಳೆದೆರಡು ದಿನಗಳಿಂದ ಸುರಿದ ಮಳೆಗೆ ಮತ್ತೆ 112 ಹೆಕ್ಟೇರ್‌ ಬೆಳೆ ನಾಶಗೊಂಡಿದೆ.

ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಭತ್ತ, ಜೋಳ ಮತ್ತಿತರ ಬೆಳೆಗಳು ಜಲಾವೃತವಾಗಿವೆ. ಪರಿಸ್ಥಿತಿ ಗಂಭೀರತೆಯನ್ನು ಅರಿತ ಅಧಿಕಾರಿಗಳು ಇದೀಗ ನೀರು ಹರಿದು ಹೋಗುವಂತೆ ಮಾಡಲು ರೈತರಿಗೆ ಸೂಚನೆ ನೀಡಿದ್ದಾರೆ. ನೀರು ಹರಿಯದೆ ನಿಂತ ಜಾಗದಲ್ಲೇ ನಿಂತರೆ ಇದು ಬೆಳೆ ಇಳುವರಿ ಮೇಲೆ ಪರಿಣಾಮ ಬೀರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com