ಮಕ್ಕಳಿಗೆ ಲಸಿಕೆ ಹಾಕುವ ಮುನ್ನ ಸುರಕ್ಷತೆ, ಪರಿಣಾಮಕಾರಿತ್ವದ ಬಗ್ಗೆ ಮಾಹಿತಿಯ ಅಗತ್ಯವಿದೆ: ತಜ್ಞರು 

ಎರಡು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳ ಲಸಿಕೆಗೆ ತುರ್ತು ಅನುಮೋದನೆಯೊಂದಿಗೆ ಮೂರನೇ ಅಲೆ ತಡೆಗಾಗಿ ರಚಿಸಲಾಗಿರುವ ರಾಜ್ಯ  ಕೋವಿಡ್-19 ಸಮಿತಿಯ ಸದಸ್ಯರು ಹಾಗೂ ಆಸ್ಟರ್ ಸಿಎಂಐ ಆಸ್ಪತ್ರೆಯ ಸಮಾಲೋಚಕ ವೈದ್ಯ ಜೆ.ಟಿ. ಶ್ರೀಕಾಂತ್, ಸಾಧಕ ಬಾಧಕಗಳ ಬಗ್ಗೆ ಮಾತನಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಎರಡು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳ ಲಸಿಕೆಗೆ ತುರ್ತು ಅನುಮೋದನೆಯೊಂದಿಗೆ ಮೂರನೇ ಅಲೆ ತಡೆಗಾಗಿ ರಚಿಸಲಾಗಿರುವ ರಾಜ್ಯ  ಕೋವಿಡ್-19 ಸಮಿತಿಯ ಸದಸ್ಯರು ಹಾಗೂ ಆಸ್ಟರ್ ಸಿಎಂಐ ಆಸ್ಪತ್ರೆಯ ಸಮಾಲೋಚಕ ವೈದ್ಯ ಜೆ.ಟಿ. ಶ್ರೀಕಾಂತ್, ಸಾಧಕ ಬಾಧಕಗಳ ಬಗ್ಗೆ ಮಾತನಾಡಿದ್ದಾರೆ.

ಭಾರತ್ ಬಯೋಟೆಕ್ ತಯಾರಿಸಿರುವ ಕೋವಾಕ್ಸಿನ್ ಮತ್ತು ಝೈಡಸ್ ಕ್ಯಾಡಿಲಾದ   ZyCov-D ಮಕ್ಕಳ ಲಸಿಕೆ  ಸುರಕ್ಷತೆ ಮತ್ತು ಪರಿಣಾಮಕಾರಿತ್ವ ಕುರಿತು ಪ್ರಕಟವಾದ ಮಾಹಿತಿಯಲ್ಲಿ ಕೊರತೆಯಿದೆ ಎಂದು ಕೆಲವು ತಜ್ಞರು ಹೇಳುತ್ತಾರೆ, ನೀವು ಏನಾಂತೀರಾ?

ಮಕ್ಕಳ ಕೋವಿಡ್ -19 ಲಸಿಕೆಗಳ ತುರ್ತು ಬಳಕೆಗಾಗಿ ಮಾತ್ರ ಅನುಮೋದನೆ ದೊರೆತಿದೆ.ತಮ್ಮ ಮಕ್ಕಳಿಗೆ ಲಸಿಕೆ ಹಾಕುವಂತೆ ಪೋಷಕರಿಗೆ ಹೇಳಲು ನಮ್ಮ ಬಳಿ ಸಾಕಷ್ಟು ಮಾಹಿತಿ ಇಲ್ಲ. ನಾವು ಮಕ್ಕಳ ಕೋವಿಡ್ -19 ಲಸಿಕೆಯನ್ನು ಪ್ರತಿಪಾದಿಸುವ ಮೊದಲು ನಮಗೆ ಸಮಂಜಸವಾದ ಮಾಹಿತಿಯ ಅಗತ್ಯವಿದೆ. ಕೋಟ್ಯಂತರ ಜನರು ಲಸಿಕೆ ಪಡೆದರೂ ವಯಸ್ಕರಿಗೆ ಕೋವಾಕ್ಸಿನ್ ಲಸಿಕೆಯ ಮಾಹಿತಿ ಇನ್ನೂ ಪ್ರಕಟವಾಗಿಲ್ಲ. ಇದಕ್ಕಾಗಿಯೇ ಜನರು ತಮ್ಮ ಮಕ್ಕಳಿಗೆ ಲಸಿಕೆ ಹಾಕಲು ಹಿಂಜರಿಯುತ್ತಾರೆ. ಇದು ಪರಿಣಾಮಕಾರಿ ಎಂದು ಸಾಬೀತಾಗದ ಹೊರತು, ಇದನ್ನು ಅವರನ್ನು ಮಕ್ಕಳಿಗೆ ನೀಡಿ ಎಂದು ಹೇಳಲು ಹೇಗೆ ಸಾಧ್ಯ? ಡಿಸಿಜಿಐ ಕೂಡಾ ಇದನ್ನೇ ಹೇಳಿದೆ. ನಾವು ಆತುರ ಪಡುವುದು ಬೇಡ. ಝಡೈಸ್ ಕ್ಯಾಡಿಲಾದ ಪ್ರಾಯೋಗಿಕ ಪರೀಕ್ಷೆಯಲ್ಲಿ ಕೇವಲ 1,400 ಮಕ್ಕಳು ಭಾಗಿಯಾಗಿದ್ದಾರೆ. ಸುರಕ್ಷತೆ ಮತ್ತು  ರೋಗ ನಿರೋಧಕ ಶಕ್ತಿ ಅರಿಯುವಲ್ಲಿ ಇದು ಸಣ್ಣ ಸಂಖ್ಯೆಯಾಗಿದೆ. ಆದಾಗ್ಯೂ, ನಾವು ಸರಿಯಾದ ದಿಕ್ಕಿನಲ್ಲಿದ್ದೇವೆ. ಮಕ್ಕಳಿಗೆ  ಡೋಸ್ ಗಳ  ನಡುವಿನ ಅಂತರ ಕೇವಲ 28 ದಿನಗಳಾಗಿರಬೇಕು, ಏಕೆಂದರೆ ನಾವು ಅದನ್ನು ಹೆಚ್ಚಿಸಿದರೆ, ಪರಿಣಾಮಕಾರಿತ್ವ  ಕಡಿಮೆಯಾಗುತ್ತದೆ.

ದೇಶದಲ್ಲಿ ಈವರೆಗೂ ಮಕ್ಕಳಿಗಾಗಿ ಅಭಿವೃದ್ಧಿಪಡಿಸಲಾಗಿರುವ ಕೋವಿಡ್-19 ಲಸಿಕೆ ಸುರಕ್ಷತೆ ಬಗ್ಗೆ ಏನಾದರೂ ತಿಳಿಯಬಹುದಾ? 

ಕೋವಾಕ್ಸಿನ್ ಸುರಕ್ಷಿತವೇ?  ಕಳೆದ ಒಂದು ವರ್ಷದಿಂದ ವಯಸ್ಕರಿಗೆ ಈ ಲಸಿಕೆಯನ್ನು ನೀಡಲಾಗುತ್ತಿದ್ದು, ಮಕ್ಕಳಲ್ಲಿ ಪರಿಣಾಮಕಾರಿತ್ವ ಹಾಗೂ ಸುರಕ್ಷಿತ ಕುರಿತು ಯಾವುದೇ ಮಾಹಿತಿ ಇಲ್ಲದಿದ್ದರೂ ಇದು ಸುರಕ್ಷಿತ ಎಂದು ಕಂಡುಬರುತ್ತದೆ.  ಯಾವುದೇ  ರೀತಿಯ ವ್ಯತಿರಿಕ್ತ ಪರಿಣಾಮವಾಗದಿದ್ದರೆ ಒಳ್ಳೆಯದು, ಆದರೆ, ಇದು ವಿಷಯದ ಮಾಹಿತಿಯಾಗಿದೆ. ಬಹುತೇಕ ಲಸಿಕೆಗಳಲ್ಲಿ ಜ್ವರ ಹಾಗೂ ಮೈಕೈ ನೋವಿನಂತಹ ಲಕ್ಷಣಗಳು ಕಂಡುಬಂದಿವೆ. ಝಡೈಸ್ ಕ್ಯಾಡಿಲಾದ ಲಸಿಕೆ ಹೊಸ ಡಿಎನ್ ಎ ತಂತ್ರಜ್ಞಾನವಾಗಿದ್ದು, ಬೇಗನೆ ಮನುಷ್ಯರ ಮೇಲೆ ಪ್ರಯೋಗ ನಡೆಸಿಲ್ಲ. ಆದ್ದರಿಂದ ನಾನು ಕಾಯುತ್ತಿದ್ದೇನೆ.

ಸಂಭಾವ್ಯ ಮೂರನೇ ಅಲೆಗೂ ಮುಂಚಿತವಾಗಿ ಮಕ್ಕಳಿಗೆ ಲಸಿಕೆ ಹಾಕುವುದು ಎಷ್ಟು ಮಹತ್ವದ್ದು?

ಮೂರನೇ ಅಲೆಯನ್ನು ನಾವು ತಡೆಯುವುದು ಹೇಗೆ? ಮಕ್ಕಳಿಗೆ ಲಸಿಕೆ ಹಾಕುವುದರಿಂದ ಅದನ್ನು ತಡೆಯಬಹುದು. ಪ್ರೌಢ ಶಾಲೆಗಳು ಆರಂಭವಾಗಿದ್ದು, ಪ್ರಾಥಮಿಕ ಶಾಲೆಗಳನ್ನು ಕೂಡಾ ಪುನಾರಾರಂಭಿಸಲು ಚಿಂತನೆ ನಡೆದಿದೆ. ಒಂದು ವೇಳೆ ಲಸಿಕೆ ಪಡೆಯದ, ಸೋಂಕಿತ ಮಕ್ಕಳು ವಯಸ್ಕರಲ್ಲಿ ಸೋಂಕು ಹರಡುವ ಸಾಧ್ಯತೆ ಇರುತ್ತದೆ. 

ದೇಶದಲ್ಲಿ ಮಕ್ಕಳಿಗೆ ಲಸಿಕೆ ಹಾಕಲು ಏನು ಮಾಡಬೇಕು? ಅದು ಕಷ್ಟಕರವಾಗಬಹುದು?

ಶಾಲೆಗಳಲ್ಲಿ, ಕ್ಲಿನಿಕ್ ಗಳಲ್ಲಿ ಮತ್ತು ಮನೆಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕುವುದು ಸುಲಭವಾಗುತ್ತದೆ. ರಾಜ್ಯದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು  ಮಕ್ಕಳ ತಜ್ಞರಿದ್ದಾರೆ. ಎಲ್ಲರೂ ಕೂಡಾ ಐಸ್ ನಿಂದ ರೆಫ್ರಿಜಿರೇಟರ್ ಹೊಂದಿದ್ದಾರೆ. ಒಂದು ವೇಳೆ ಸರ್ಕಾರ ಇವರೆಲ್ಲರಿಗೂ ಅನುಮತಿ ನೀಡಿದರೆ, 0-18 ವರ್ಷ ವಯಸ್ಸಿನ ಸುಮಾರು 1.7 ಕೋಟಿ ಅಥವಾ 2  ಅವರು ಲಸಿಕೆ ನೀಡಬಹುದಾಗಿದೆ. 2-18 ವರ್ಷದ 1.2 ಕೋಟಿ ಜನರಿಗೆ ನೀಡಬಹುದಾಗಿದೆ. ಮಕ್ಕಳ ಕ್ಲಿನಿಕ್ ಗಳಲ್ಲಿ ಸಾಮೂಹಿಕವಾಗಿ ಲಸಿಕೆ ನೀಡಿಕೆ ಕಾರ್ಯಕ್ರಮ ಹಾಕಿಕೊಳ್ಳಬಹುದಾಗಿದೆ. ಶಾಲೆಗಳಲ್ಲಿಯೂ ಲಸಿಕೆ ನೀಡಬಹುದಾಗಿದೆ. 
ಪಲ್ಸ್ ಪೊಲೀಯೊ ರೀತಿಯಲ್ಲಿ ಈ ಲಸಿಕೆ ಹಾಕುವುದು ಉತ್ತಮ. ಮನೆ ಮನೆಗೆ ತೆರಳಿ ಲಸಿಕೆ ಹಾಕುವುದರಿಂದ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವ, ವಲಸೆ ಕಾರ್ಮಿಕರ ಮಕ್ಕಳಿಗೆ ಲಸಿಕೆ ಹಾಕಲು ಅನುಕೂಲವಾಗುತ್ತದೆ. 

ಆರೋಗ್ಯವಂತ ಮಕ್ಕಳಿಗೆ ಲಸಿಕೆ ಹಾಕುವ ಅಗತ್ಯವಿಲ್ಲ ಎಂದು ಕೆಲ ತಜ್ಞರು ಹೇಳುತ್ತಾರಲ್ಲ..

ರೋಗ ನಿರೋಧಕ ಸಮಸ್ಯೆ, ಕಿಡ್ನಿ ತೊಂದರೆ ಮತ್ತಿತರ ಸಮಸ್ಯೆಯಿಂದ ಬಳಲುತ್ತಿರುವ ದುರ್ಬಲ ಮಕ್ಕಳಿಗೆ ಲಸಿಕೆ ನೀಡುವ ಅಗತ್ಯವಿದೆ. ಆರೋಗ್ಯವಂತ ಮಕ್ಕಳಿಗೆ ಮೊದಲು ಲಸಿಕೆ ನೀಡಬೇಕಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com