ಬೆಸ್ಕಾಂಗೆ ಎದುರಾದ ಆರ್ಥಿಕ ಸಮಸ್ಯೆ: ಟ್ರಾನ್ಸ್ ಫಾರ್ಮರ್'ಗಳ ಸ್ಥಳಾಂತರ ಮತ್ತಷ್ಟು ವಿಳಂಬ!

ಬೆಸ್ಕಾಂ (ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ)ಗೆ ಆರ್ಥಿಕ ಸಮಸ್ಯೆ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಟ್ರಾನ್ಸ್ ಫಾರ್ಮರ್'ಗಳ ಸ್ಥಳಾಂತರಕ್ಕೆ ವಿಳಂಬವಾಗಲಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಬೆಸ್ಕಾಂ (ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ)ಗೆ ಆರ್ಥಿಕ ಸಮಸ್ಯೆ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಟ್ರಾನ್ಸ್ ಫಾರ್ಮರ್'ಗಳ ಸ್ಥಳಾಂತರಕ್ಕೆ ವಿಳಂಬವಾಗಲಿದೆ ಎಂದು ತಿಳಿದುಬಂದಿದೆ.

ಪಾದಚಾರಿ ಮಾರ್ಗಗಳಲ್ಲಿನ ಟ್ರಾನ್ಸ್ ಫಾರ್ಮರ್ ಗಳಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದು, ಹೀಗಾಗಿ ಪಾದಚಾರಿಗಳ ಸುರಕ್ಷತೆಗಾಗಿ ಅವುಗಳ ಸ್ಥಳಾಂತರ ಮಾಡುವಂತೆ ಆಗ್ರಹಗಳು ಕೇಳಿ ಬರುತ್ತಿವೆ.

ಇದರಂತೆ ಬಿಬಿಎಂಪಿ, ಬೆಸ್ಕಾಂ ಹಾಗೂ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಕಾರ್ಯಾಚರಣೆ ಕೈಗೆತ್ತಿಕೊಂಡಿತದ್ದು, ಹೆಚ್ಚು ಪಾದಚಾರಿಗಳ ಚಲನೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಸಮೀಕ್ಷೆ ನಡೆಸಿದೆ.

ವರದಿಯಲ್ಲಿ ನಗರದಲ್ಲಿ ಒಟ್ಟು 5,946 ಟ್ರಾನ್ಸ್ ಫಾರ್ಮರ್ ಗಳಿದ್ದು, ಇದರಲ್ಲಿ 3,196 ಟ್ರಾನ್ಸ್ ಫಾರ್ಮರ್ ಗಳನ್ನು ಬದಲಿಸಲಾಗಿದೆ. ಇನ್ನೂ 2,750 ಟ್ರಾನ್ಸ್ ಫಾರ್ಮರ್ ಗಳನ್ನು ಬದಲಿಸಬೇಕಾಗಿದೆ ಎಂದು ತಿಳಿಸಿದೆ.

ಬಾಕಿ ಇರುವ ಟ್ರಾನ್ಸ್ ಫಾರ್ಮರ್ ಗಳನ್ನು 6 ತಿಂಗಳುಗಳಿಂದ 1 ವರ್ಷದೊಳಗೆ ಸ್ಥಳಾಂತರ ಮಾಡುವ ಗುರಿ ಹೊಂದಲಾಗಿತ್ತು. ಆದರೆ, ಈ ಮಧ್ಯೆ ಆರ್ಥಿಕ ಕೊರತೆ ಎದುರಾಗಿರುವುದರಿಂದ ಕಾರ್ಯಾಚರಣೆ ತಡವಾಗುತ್ತಿದೆ. ಇದೀಗ ಹಂತ ಹಂತವಾಗಿ ಕಾರ್ಯಾಚರಣೆಗಳನ್ನು ನಿರ್ಧರಿಸಲಾಗಿದೆ. ತುರ್ತು ಅಗತ್ಯವಿರುವ ಸ್ಥಳಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಬೆಸ್ಕಾಂ ಅಧಿಕಾರಿಗಳು ಹೇಳಿದ್ದಾರೆ.

ಬೆಸ್ಕಾಂನ ಹಳೆಯ ಟೆಂಡರ್ ದರಗಳ ಪ್ರಕಾರ, ಒಂದು ಟ್ರಾನ್ಸ್‌ಫಾರ್ಮರ್ ಅನ್ನು ಬದಲಿಸುವ ವೆಚ್ಚ 5.05 ಲಕ್ಷ ರೂಪಾಯಿಗಳಾಗಿದೆ. ಮತ್ತು ಇದಕ್ಕಾಗಿ ಇದೂವರೆಗೆ 161.44 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.

ಈ ನಡವೆ ನಗರ ಆಡಳಿತ ಮತ್ತು ಬೆಸ್ಕಾಂ ಅಧಿಕಾರಿಗಳು ಸ್ಮಾರ್ಟ್ ಸಿಟಿ ಯೋಜನೆಯಡಿ ಟ್ರಾನ್ಸ್‌ಫಾರ್ಮರ್‌ಗಳನ್ನು ಬದಲಾಯಿಸುವ ಕಾರ್ಯಾಚರಣೆಯನ್ನು ಯಾವ ರೀತಿ ಸೇರ್ಪಡಗೊಳಿಸುವುದು ಎಂಬುದರ ಕುರಿತಂತೆಯೂ ಚಿಂತನೆಗಳನ್ನು ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಅಧಿಕಾರಿಗಳು ಮತ್ತು ತಜ್ಞರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕಾರ್ಯಾಚರಣೆ ಅಂತಹ ದೊಡ್ಡ ಆರ್ಥಿಕತೆಯನ್ನು ಬಯಸುವುದಿಲ್ಲ. ಆದರೆ, ಒಂದು ರಸ್ತೆಯನ್ನು ಎರಡೆರಡು ಬಾರಿ ಅಗಯದಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ಇದಕ್ಕೆ ಸಹಕಾರಗಳು ಅಗತ್ಯವಾಗುತ್ತದೆ ಎಂದು ಹೇಳಿದ್ದಾರೆ.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಅವರು ಮಾತನಾಡಿ, "ನಗರದಾದ್ಯಂತ ಎಲ್ಲಾ ಟ್ರಾನ್ಸ್‌ಫಾರ್ಮರ್‌ಗಳನ್ನು ಬದಲಿಸುವ ಯೋಜನೆ ಹೊಂದಲಾಗಿದೆ. ಈ ಕಾರ್ಯಾಚರಣೆಯನ್ನು ಹಂತ ಹಂತವಾಗಿ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಇದು ಅತ್ಯಂತ ದೀರ್ಘಾವಧಿಯ ಸಮಸ್ಯೆಯಾಗಿದ್ದು, ಸಮಸ್ಯೆ ಇನ್ನೂ ಬಗೆಹರಿಸಲಾಗಿಲ್ಲ. ಈ ಕೆಲಸ ಸಾಧ್ಯವಾದಷ್ಟು ಬೇಗವಾಗಿದ್ದೇ ಆದರೆ, ವಿದ್ಯುತ್ ಕಡಿತ, ನಿರ್ವಹಣೆ ಸಮಸ್ಯೆಗಳು ಮತ್ತು ಸ್ಫೋಟಗಳು ಅಥವಾ ಗೃಹೋಪಯೋಗಿ ಉಪಕರಣಗಳಲ್ಲಿ ಎದುರಾಗುವ ದೋಷಗಳು ಉಂಟಾಗುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.

ಸರ್ಕಾರದ ಪ್ರತೀ ಇಲಾಖೆಯಲ್ಲಿಯೂ ತನ್ನದೇ ಆದಂತಹ ಆರ್ಥಿಕ ಸಮಸ್ಯೆಯನ್ನು ಹೊಂದಿರುತ್ತದೆ. ರಾಜಕೀಯ ನಾಯಕರು ಯೋಜನೆಗಳನ್ನು ಘೋಷಣೆ ಮಾಡಿ ಬಿಡುತ್ತಾರೆ. ಆದರೆ, ಅದನ್ನು ಅನುಸರಿಸಿ, ಅನುಷ್ಠಾನಕ್ಕೆ ತರುವುದು ಮುಖ್ಯವಾಗುತ್ತದೆ. ನಗರ ಗುರಿಗಳನ್ನು ಮುಟ್ಟಲು ಈ ಸಮಸ್ಯೆಗಳನ್ನು ಶೀಘ್ರಾತಿ ಶೀಘ್ರಗತಿಯಲ್ಲಿ ಬಗೆಹರಿಸಬೇಕಿದೆ. ಪ್ರಮುಖವಾಗಿ ಹೆದ್ದಾರಿಗಳು ಹಾಗೂ ಹೊರವಲಯಗಳಲ್ಲಿನ ಸಮಸ್ಯೆಗಳತ್ತ ಹೆಚ್ಚು ಗಮನಹರಿಸಬೇಕಿದೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com