ಕಾಂಗ್ರೆಸ್ ಪಕ್ಷ ಸ್ವದೇಶದ್ದಲ್ಲ ಫಾರಿನ್ ಪಾರ್ಟಿ: ರಾಜ್ಯ ಶಿಕ್ಷಣ ಸಚಿವ ಅಶ್ವತ್ ನಾರಾಯಣ್ ಲೇವಡಿ

ಕಾಂಗ್ರೆಸ್ ಪಕ್ಷವನ್ನು ದೇಶದಿಂದ ನಿರ್ಮೂಲನೆ ಮಾಡುವ ಕೆಲಸದಲ್ಲಿ ಬಿಜೆಪಿ ಕಂಕಣಬದ್ಧವಾಗಿದೆ ಎಂದು ಸಚಿವರು ಇದೇ ವೇಳೆ ಹೇಳಿದರು.
ಸಚಿವ ಅಶ್ವಥ್ ನಾರಾಯಣ್ ಐಟಿಐ ಪ್ರಾಜೆಟ್ ಪರಿಶೀಲನೆ ಸಲುವಾಗಿ ಉಡುಪಿಯ ಬೈಂದೂರಿಗೆ ಆಗಮಿಸಿದ ಸಂದರ್ಭ
ಸಚಿವ ಅಶ್ವಥ್ ನಾರಾಯಣ್ ಐಟಿಐ ಪ್ರಾಜೆಟ್ ಪರಿಶೀಲನೆ ಸಲುವಾಗಿ ಉಡುಪಿಯ ಬೈಂದೂರಿಗೆ ಆಗಮಿಸಿದ ಸಂದರ್ಭ
Updated on

ಬೆಂಗಳೂರು: ದೇಶಕ್ಕೆ ಅಗತ್ಯವೇ ಇಲ್ಲದ ವಿಚಾರಧಾರೆ ಮತ್ತು ಸಂಸ್ಕೃತಿಯನ್ನು ಪ್ರತಿಷ್ಟಾಪಿಸಿದ ಕಾಂಗ್ರೆಸ್ ಪಕ್ಷ ಫಾರಿನ್ ಪಾರ್ಟಿ ಎಂದು ರಾಜ್ಯ ಶಿಕ್ಷನ ಸಚಿವ ಎನ್. ಅಶ್ವತ್ ನಾರಾಯಣ್ ಲೇವಡಿ ಮಾಡಿದ್ದಾರೆ. 

ದೇಶದ ಅಭಿವೃದ್ಧಿಗೆ ಪೂರಕವಲ್ಲದ ಸಂಸ್ಕೃತಿಯನ್ನು ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಪೋಷಿಸಿಕೊಂಡು ಬಂದಿದೆ. ಆ ಪಕ್ಷವನ್ನು ದೇಶದಿಂದ ನಿರ್ಮೂಲನೆ ಮಾಡುವ ಕೆಲಸದಲ್ಲಿ ಬಿಜೆಪಿ ಕಂಕಣಬದ್ಧವಾಗಿದೆ ಎಂದು ಸಚಿವರು ಇದೇ ವೇಳೆ ಹೇಳಿದರು.

ಇತ್ತೀಚಿಗಷ್ಟೆ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಓರ್ವ ಡ್ರಗ್ ಅಡಿಕ್ಟ್ ಹಾಗೂ ಡ್ರಗ್ ಪೆಡ್ಲರ್ ಎಂದು ಕರೆದಿದ್ದರು. ಅದರ ಬೆನ್ನಲ್ಲೇ ಅಶ್ವಥ್ ನಾರಾಯಣ್ ಕಾಂಗ್ರೆಸ್ ಪಕ್ಷದ ಕುರಿತು ಈ ಹೇಳಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com