ಬೆಂಗಳೂರು ವಾಸ್ತವಿಕ ಸ್ಥಿತಿ ಅರಿಯಲು ನಗರ ಪ್ರವಾಸ ಕೈಗೊಳ್ಳಿ: ಸಿಎಂ ಬೊಮ್ಮಾಯಿಗೆ ಜನತೆ ಆಗ್ರಹ

ಗುಂಡಿ ಬಿದ್ದ ರಸ್ತೆಗಳು, ಕಸ ತುಂಬಿದ ರಸ್ತೆಗಳು, ವಿದ್ಯುತ್ ದೀಪಗಳಿಲ್ಲದೆ ಕತ್ತಲಲ್ಲಿ ಬಣಗುಡುತ್ತಿರುವ ರಸ್ತೆಗಳಿಂದ ಸಿಲಿಕಾನ್ ಸಿಟಿ ಜನತೆ ಬೇಸತ್ತು ಹೋಗಿದ್ದು, ನಗರದ ವಾಸ್ತವಿಕ ಸ್ಥಿತಿಯನ್ನು ಅರಿಯಲು ಪ್ರವಾಸ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಆಗ್ರಹಿಸುತ್ತಿದ್ದಾರೆ.
ರಸ್ತೆ ಗುಂಡಿ
ರಸ್ತೆ ಗುಂಡಿ

ಬೆಂಗಳೂರು: ಗುಂಡಿ ಬಿದ್ದ ರಸ್ತೆಗಳು, ಕಸ ತುಂಬಿದ ರಸ್ತೆಗಳು, ವಿದ್ಯುತ್ ದೀಪಗಳಿಲ್ಲದೆ ಕತ್ತಲಲ್ಲಿ ಬಣಗುಡುತ್ತಿರುವ ರಸ್ತೆಗಳಿಂದ ಸಿಲಿಕಾನ್ ಸಿಟಿ ಜನತೆ ಬೇಸತ್ತು ಹೋಗಿದ್ದು, ನಗರದ ವಾಸ್ತವಿಕ ಸ್ಥಿತಿಯನ್ನು ಅರಿಯಲು ಪ್ರವಾಸ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಆಗ್ರಹಿಸುತ್ತಿದ್ದಾರೆ.

ನಗರದ ರಸ್ತೆಗಳು ತೀವ್ರವಾಗಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ವಾಹನ ಸವಾರರು, ಪ್ರಮುಖವಾದಿ ದ್ವಿಚಕ್ರ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಗರವಾಸಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ದುಃಸ್ಥಿತಿಯಲ್ಲಿರುವ ರಸ್ತೆಗಳ ಫೋಟೋ ಹಾಗೂ ವಿಡಿಯೋಗಳನ್ನು ಟ್ವಿಟರ್ ಹಾಗೂ ಕೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಜನತೆಗ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

@BangaloreRepair ಎಂಬ ಹೆಸರಿನ ಟ್ವಿಟರ್ ಖಾತೆ ಬಳಕೆದಾರರು ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಟ್ವೀಟ್ ಮಾಡಿದ್ದು, ಡಾ.ಮಿ.ಬಿ.ಬೊಮ್ಮಾಯಿಯವರೇ, ಬೆಂಗಳೂರು ಪ್ರವಾಸಕ್ಕೆ ನಮ್ಮೊಂದಿಗೆ ಬನ್ನಿ ಮತ್ತು ಹೊಂಡ-ಗುಂಡಿಗಳಿಂದ ಕೂಡಿದ ರಸ್ತೆ, ಬೀದಿ-ದೀಪಗಳಿಲ್ಲದ ರಸ್ತೆ, ಧೂಳು, ಗಾಳಿ ಮತ್ತು ಕಸ ತುಂಬಿದ ರಸ್ತೆಗಳಲ್ಲಿ ನಾಗರಿಕರು ಯಾವ ರೀತಿಯ ಸಮಸ್ಯಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ನೋಡಿ ಎಂದು ನಾವು ನಿಮಗೆ ಸವಾಲು ಹಾಕುತ್ತೇವೆ. ದಿನ, ಸಮಯ ಹಾಗೂ ವಾಹನವನ್ನು ನೀವೇ ನಿರ್ಧರಿಸಿ. ಸ್ಥಳವನ್ನು ನಾವು ತೋರಿಸುತ್ತೇವೆಂದು ಹೇಳಿದ್ದಾರೆ.

ಮುಖ್ಯಮಂತ್ರಿಗಳಿಗೆ ಸವಾಲು ಹಾಕಿರುವ ಹರ್ಷ್ ಗೋಲಿಯನ್ ಎಂಬುವವರು ಮಾತನಾಡಿ, ರಿಂಗ್ ರೋಡ್ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಗಳಲ್ಲಿ ಬೀದಿ ದೀಪಗಳಿಲ್ಲ ಎಂದು ತಿಳಿದಿದ್ದೆ. ಆದರೆ, ನಗರದ ಬಹುತೇಕ ರಸ್ತೆಗಳ ಸ್ಥಿತಿ ಇದೇ ಆಗಿದೆ ಎಂಬುದು ನಂತರ ತಿಳಿಯಿತು. ರಸ್ತೆಗಳು ಗುಂಡಿಮಯವಾಗಿದ್ದು, ವಾಹನಗಳ ಓಡಿಸುವುದು ಅತ್ಯಂತ ಕಠಿಣವಾಗಿ ಹೋಗಿದೆ. ಸಾಕಷ್ಟು ರಸ್ತೆಗಳು ಕಸದಿಂದ ಕೂಡಿದೆ. ಇಂದು ಒಂದು ದಿನದ ಸಮಸ್ಯೆಯಾಗಿ ಉಳಿದಿಲ್ಲ. ಪ್ರತೀನಿತ್ಯ ಇದೇ ಸಮಸ್ಯೆಯಾಗಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ಕೆಲ ಜನರು ಸಮಸ್ಯೆಗಳಿರುವ ರಸ್ತೆಗಳ ಪಟ್ಟಿಗಳನ್ನೇ ಸಿದ್ಧಪಡಿಸಿದ್ದಾರೆ. ಇನ್ನೂ ಕೆಲವರು ರಸ್ತೆಗಳಲ್ಲಿನ ಸಮಸ್ಯೆಗಳ ಫೋಟೋಗಳನ್ನು ತೆಗೆದು ಮಾಹಿತಿ ನೀಡಿ ಬಹುಮಾನ ಗೆಲ್ಲುವಂತೆ ಸ್ಪರ್ಧೆಗಳನ್ನೂ ಆಯೋಜಿಸುತ್ತಿರುವುದು ಕಂಡು ಬರುತ್ತಿದೆ.

ಇಂದಿರಾನಗರದಲ್ಲಿ ಕಳಪೆ ನಿರ್ವಹಣೆಯ ರಸ್ತೆಗಳ ಕಡೆಗೆ ಅಧಿಕಾರಿಗಳ ಗಮನ ಸೆಳೆಯಲು ಅನೇಕರು ಕೂ ಆ್ಯಪ್ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ.

 ಇಂದಿರಾನಗರದ 100 ಅಡಿ ರಸ್ತೆಯಲ್ಲಿ ವೈಟ್‌ ಟಾಪಿಂಗ್‌ ಮಾಡಬೇಕಿದ್ದ ಒಂದು ಭಾಗವನ್ನು ವರ್ಷ ಕಳೆದರೂ ಇನ್ನೂ ಮಾಡಿಲ್ಲ ಎಂದು ದೂರಿದ್ದಾರೆ. ಅಲ್ಲದೆ, ಡಾಂಬರ್‌ ಹಾಕಿರುವ ರಸ್ತೆಯ ಇನ್ನೊಂದು ಬದಿ ಹೊಂಡಗಳಿಂದ ಕೂಡಿದೆ ಎಂದು ಜನರು ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com