ವಿಜಯಪುರ: ಮುಸ್ಲಿಂ ಯುವತಿಯನ್ನು ಪ್ರೇಮಿಸಿದ್ದ ಹಿಂದೂ ರೈತ ಯುವಕನ ಕೊಲೆ

ಇದೇ ವಿಷಯವಾಗಿ ಎರಡೂ ಕುಟುಂಬಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ಅದರ ಬೆನ್ನಲ್ಲೇ ಅಮೀನಾ ಪೊಲೀಸ್ ಠಾಣೆಗೆ ಬಂದು ತನ್ನ ಕುಟುಂಬದವರು ರವಿಯನ್ನು ಅಪಹರಣ ಮಾಡಿದ್ದಾರೆ ಎಂದು ದೂರು ನೀಡಿದ್ದಳು. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ವಿಜಯಪುರ: ಕಳೆದ ಶುಕ್ರವಾರ ವಿಜಯಪುರ ಜಿಲ್ಲೆಯ ಬಳಗನೂರು ಗ್ರಾಮದಿಂದ 32 ವರ್ಷದ ರವಿ ನಿಂಬರಗಿ ಎಂಬುವವರು ನಾಪತ್ತೆಯಾಗಿದ್ದರು. ಇದೀಗ ಆತನ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಲೆಯ ಹಿಂದೆ ಕೋಮು ಧ್ವೇಷ ಹೊಗೆಯಾಡಿದೆ. 

ರವಿ ನಿಂಬರಗಿ ಎಂಬುವವರು ಕಳೆದ 5 ವರ್ಷಗಳಿಂದ ಅದೇ ಗ್ರಾಮದ ಮುಸ್ಲಿಂ ಯುವತಿ 24 ವರ್ಷದ ಅಮೀನಾ ಬೇಗಂ ಎಂಬಾಕೆಯನ್ನು ಪ್ರೀತಿಸುತ್ತಿದ್ದರು. ಆಕೆಯೂ ರವಿಯನ್ನು ಪ್ರೀತಿಸುತ್ತಿದ್ದರು. ಆದರೆ ಯುವತಿಯ ಕುಟುಂಬಕ್ಕೆ ಇವರಿಬ್ಬರ ಪ್ರೇಮ ಸಂಬಂಧ ಸುತಾರಾಂ ಇಷ್ಟವಿರಲಿಲ್ಲ.

ಇದೇ ವಿಷಯವಾಗಿ ಎರಡೂ ಕುಟುಂಬಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ಅದರ ಬೆನ್ನಲ್ಲೇ ಅಮೀನಾ ಪೊಲೀಸ್ ಠಾಣೆಗೆ ಬಂದು ತನ್ನ ಕುಟುಂಬದವರು ರವಿಯನ್ನು ಅಪಹರಣ ಮಾಡಿದ್ದಾರೆ ಎಂದು ದೂರು ನೀಡಿದ್ದಳು. 

ರವಿಯ ಶವ ಗ್ರಾಮದ ಬಾವಿಯಲ್ಲಿ ಪತ್ತೆಯಾಗಿದೆ. ಕೊಲೆ ಸಂಬಂಧ ಯುವತಿಯ ಸಹೋದರನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com