ಕೆರೆಗಳ ಸಂರಕ್ಷಣೆಗೆ ಕೆಲಸಕ್ಕಾಗಿ ಬಿಬಿಎಂಪಿಗೆ ಪ್ರಶಸ್ತಿ

ನಗರದಲ್ಲಿನ 18 ಕೆರೆಗಳ ಪುನಶ್ಚೇತನ ಮತ್ತು ಏಳಕ್ಕೂ ಹೆಚ್ಚು ಕೆರೆಗಳ ಸಂರಕ್ಷಣೆ ಕೆಲಸಕ್ಕಾಗಿ ಬಿಬಿಎಂಪಿಗೆ ಅರ್ಥ್ ಡೆ ನೆಟ್ ವರ್ಕ್ ಸ್ಟಾರ್ ಮುನ್ಸಿಪಾಲ್ ಲೀಡರ್ ಶಿಪ್ ಪ್ರಶಸ್ತಿಯನ್ನು ಶುಕ್ರವಾರ  ಪಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದಲ್ಲಿನ 18 ಕೆರೆಗಳ ಪುನಶ್ಚೇತನ ಮತ್ತು ಏಳಕ್ಕೂ ಹೆಚ್ಚು ಕೆರೆಗಳ ಸಂರಕ್ಷಣೆ ಕೆಲಸಕ್ಕಾಗಿ ಬಿಬಿಎಂಪಿಗೆ ಅರ್ಥ್ ಡೆ ನೆಟ್ ವರ್ಕ್ ಸ್ಟಾರ್ ಮುನ್ಸಿಪಾಲ್ ಲೀಡರ್ ಶಿಪ್ ಪ್ರಶಸ್ತಿಯನ್ನು ಶುಕ್ರವಾರ  ಪಡೆದಿದೆ.

ಈ ಪ್ರಶಸ್ತಿಗಾಗಿ ಪುಟ್ಟೇನಹಳ್ಳಿ ನೆರೆಹೊರೆಯ ಕೆರೆ ಸುಧಾರಣಾ ಟ್ರಸ್ಟ್  (ಪಿಎನ್ ಎಲ್ ಐಟಿ) ಬಿಬಿಎಂಪಿಯನ್ನು ನಾಮನಿರ್ದೇಶನ ಮಾಡಿತ್ತು. ಪುಟ್ಟೇನಹಳ್ಳಿ ಕೆರೆ ಪುನಶ್ಚೇತನಕ್ಕಾಗಿ 2009ರಿಂದಲೂ ಈ ಟ್ರಸ್ಟ್ ಬಿಬಿಎಂಪಿಯೊಂದಿಗೆ ಕೆಲಸ ಮಾಡುತ್ತಿದೆ.

ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವಂತಹ ಯೋಜನೆ ಹಾಗೂ ಕಾರ್ಯ ಕೈಗೊಂಡ ಸ್ಥಳೀಯ ಸಂಸ್ಥೆಗಳಿಗೆ  ಅರ್ಥ್ ಡೇ 50ನೇ ವರ್ಷಚಾರಣೆ ಪ್ರಯುಕ್ತ  ಅರ್ಥ್ ಡೇ ನೆಟ್ ವರ್ಕ್ ಇಂಡಿಯಾದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಇಂಡಿಯಾ ಅರ್ಥ್ ಡೇ ಅರ್ಗನೈಷನ್ ಹಿರಿಯ ಮ್ಯಾನೇಜರ್,  ನೀಲಾ ಮಜುಂದಾರ್ ಮತ್ತು ಪಿಎನ್ ಎಲ್ ಐಟಿ ಮುಖ್ಯಸ್ಥೆ ಉಷಾ ರಾಜಗೋಪಾಲನ್ ಶುಕ್ರವಾರ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರಿಗೆ  ಈ ಪ್ರಶಸ್ತಿ ಪ್ರದಾನ ಮಾಡಿದರು.

ಚಿಕ್ಕಬಸ್ತಿ, ಗುಬ್ಬಲಾಲ, ಯಲ್ಲನಹಳ್ಳಿ, ತಲಘಟ್ಟಪುರ,  ಬೈರಸಂದ್ರ, ಬಸವನಪುರ, ಸಿದ್ದಾಪುರ, ನಗರೇಶ್ವರ ನಾಗೇನಹಳ್ಳಿ, ಮಹಾದೇವಪುರ-2, ಸಾರಕ್ಕಿ, ಬೇಗೂರು, ಹೂರಮಾವು, ಭಟ್ಟರ ಹಳ್ಳಿ, ಕೊತ್ತನೂರು, ನಲ್ಲೂರಳ್ಳಿ, ಗುಂಜೂರು ಪಾಳ್ಯ, ದೇವರಕೆರೆ ಮತ್ತಿತರ ಕೆರೆಗಳ ಅಭಿವೃದ್ಧಿ ಕಾರ್ಯವನ್ನು ಬಿಬಿಎಂಪಿ ಈ ವರ್ಷ ಮಾಡಿದೆ. 

 ಸಾರ್ವಜನಿಕರ ಸಹಭಾಗಿತ್ವ ಹಾಗೂ ಹೆಚ್ಚಿನ ಜನರು ತೊಡಗಿಸಿಕೊಂಡರೆ ಹೆಚ್ಚಿನ ಕೆರೆಗಳ ಸಂರಕ್ಷಣೆ ಕಾರ್ಯ ಕೈಗೊಳ್ಳಲು ನೆರವಾಗಲಿದೆ ಎಂದು ಗೌರವ್ ಗುಪ್ತಾ ಹೇಳಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com