ತಗ್ಗಿದ ಕೋವಿಡ್-19 2ನೇ ಅಲೆ: ತಮಿಳುನಾಡು, ಕೇರಳಕ್ಕಿಂತ ಕರ್ನಾಟಕ ಉತ್ತಮ

ದೇಶಾದ್ಯಂತ ಕೊರೋನಾ 2 ನೇ ಅಲೆ ನಿಯಂತ್ರಣದಲ್ಲಿದ್ದು ಸಕ್ರಿಯ ಪ್ರಕರಣಗಳ ವಿಷಯದಲ್ಲಿ ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕವೇ ಉತ್ತಮ ಸ್ಥಿತಿಯಲ್ಲಿದೆ.
ಕೋವಿಡ್-19 ಲಸಿಕೆ ಪಡೆಯುತ್ತಿರುವ ಮಹಿಳೆ
ಕೋವಿಡ್-19 ಲಸಿಕೆ ಪಡೆಯುತ್ತಿರುವ ಮಹಿಳೆ
Updated on

ಬೆಂಗಳೂರು: ದೇಶಾದ್ಯಂತ ಕೊರೋನಾ 2 ನೇ ಅಲೆ ನಿಯಂತ್ರಣದಲ್ಲಿದ್ದು ಸಕ್ರಿಯ ಪ್ರಕರಣಗಳ ವಿಷಯದಲ್ಲಿ ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕವೇ ಉತ್ತಮ ಸ್ಥಿತಿಯಲ್ಲಿದೆ.

ಕೋವಿಡ್-19 ಸಕ್ರಿಯ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯ ವಿಷಯದಲ್ಲಿ 2020 ರ ಆಗಸ್ಟ್ ನಲ್ಲಿದ್ದ ಪರಿಸ್ಥಿತಿಗೂ 2021 ರ ಆಗಸ್ಟ್ ನ ಪರಿಸ್ಥಿತಿಗೂ ತುಲನಾತ್ಮಕ ವಿಶ್ಲೇಷಣೆ ನಡೆಸಲಾಗಿದ್ದು ದಕ್ಷಿಣ ಭಾರತದ ರಾಜ್ಯಗಳಲ್ಲಿ ಕರ್ನಾಟಕದ್ದೇ ಉತ್ತಮ ಪರಿಸ್ಥಿತಿ ಎಂಬುದು ಸ್ಪಷ್ಟವಾಗಿದೆ.

2020 ಆಗಸ್ಟ್ 1-28 ವರೆಗೆ ರಾಜ್ಯದಲ್ಲಿ 2,11,813  ಪಾಸಿಟೀವ್ ಪ್ರಕರಣಗಳಿದ್ದವು. ಈ ವರ್ಷ (2021) ರಲ್ಲಿ ಆಗಸ್ಟ್ ನಲ್ಲಿ ವರದಿಯಾಗಿದ್ದು 40,862 ಪಾಸಿಟೀವ್  ಪ್ರಕರಣಗಳು!

ತಮಿಳುನಾಡಿನಲ್ಲೂ ಪಾಸಿಟೀವ್ ಪ್ರಕರಣಗಳ ಸಂಖ್ಯೆ ಈ ಬಾರಿ ಕುಸಿತ ಕಂಡಿದೆ. 2020 ರ ಆಗಸ್ಟ್ ನಲ್ಲಿ 1,63,379 ಪ್ರಕರಣಗಳು ವರದಿಯಾಗಿದ್ದರೆ 2021 ರಲ್ಲಿ ವರದಿಯಾಗಿದ್ದು ಕೇವಲ 50,702 ಪ್ರಕರಣಗಳಷ್ಟೇ. ಆದರೆ ಇದಕ್ಕೆ ತದ್ವಿರುದ್ಧವಾಗಿ ಕೇರಳದಲ್ಲಿ 2020 ರಲ್ಲಿ 45,691 ಪ್ರಕರಣಗಳು ವರದಿಯಾಗಿತ್ತು. ಈ ಬಾರಿ ಇದು 5,86,811 ಪ್ರಕರಣಗಳು ಆಗಸ್ಟ್ ತಿಂಗಳಲ್ಲಿ ವರದಿಯಾಗಿದೆ.

ಸಾವಿನ ಸಂಖ್ಯೆಯಲ್ಲೂ ಕರ್ನಾಟಕ ಕಳೆದ ವರ್ಷಕ್ಕಿಂತ ಹೆಚ್ಚು ಸುಧಾರಣೆ ಕಂಡಿದ್ದು, 2020 ರ ಆಗಸ್ಟ್ ನಲ್ಲಿ ರಾಜ್ಯದಲ್ಲಿ 3,275 ಮಂದಿ ಕೋವಿಡ್-19 ನಿಂದ ಮೃತಪಟ್ಟಿದ್ದರು. 2021 ರ ಆಗಸ್ಟ್ ನಲ್ಲಿ 699 ಮಂದಿ ಕೋವಿಡ್-19 ನಿಂದ ಮೃತಪಟ್ಟಿದ್ದಾರೆ.

ನೆರೆ ರಾಜ್ಯ ತಮಿಳುನಾಡಿನಲ್ಲಿ ಕಳೆದ ಆಗಸ್ಟ್ ನಲ್ಲಿ 3,115 ಸಾವುಗಳು ಸಂಭವಿಸಿದ್ದರೆ, ಈ ವರ್ಷದ ಆಗಸ್ಟ್ ನಲ್ಲಿ 780 ಮಂದಿ ಸಾವನ್ನಪ್ಪಿದ್ದಾರೆ.  ಈ ವಿಭಾಗದಲ್ಲೂ ಕಳೆದ ವರ್ಷಕ್ಕಿಂತ ಕೇರಳದ ಪರಿಸ್ಥಿತಿ ಉತ್ತಮವಾಗಿಲ್ಲ. ಕೇರಳದಲ್ಲಿ ಕಳೆದ ಆಗಸ್ಟ್ ನಲ್ಲಿ 201 ಸಾವುಗಳು ಸಂಭವಿಸಿದ್ದರೆ, ಈ ವರ್ಷದ ಆಗಸ್ಟ್ ನಲ್ಲಿ 3,685 ಸಾವುಗಳು ಸಂಭವಿಸಿದೆ.

ಜೀವನ್ ರಕ್ಷಾ ನಡೆಸಿರುವ ವಿಶ್ಲೇಷಣೆಯ ಪ್ರಕಾರ ಕರ್ನಾಟಕದಲ್ಲಿ ಪ್ರಕರಣದ ಸಾವಿನ ಪ್ರಮಾಣ ಶೇ.1.7 ರಷ್ಟಿದ್ದು 1.5 ರಷ್ಟಿರುವ ತಮಿಳುನಾಡು, ಶೇ.0.6 ರಷ್ಟಿರುವ ಕೇರಳಕ್ಕೆ ಹೋಲಿಸಿದರೆ ಏರುಗತಿಯಲ್ಲಿಯೇ ಇದೆ.

ಜೀವನ್ ರಕ್ಷಾದ ಸಂಚಾಲಕ ಸಂಜೀವ್ ಮೈಸೂರು ಮಾತನಾಡಿದ್ದು "ಕೇರಳದಲ್ಲಿ ಜನಸಂಖ್ಯೆಯ ಸಾಂದ್ರತೆ ಹೆಚ್ಚಿದ್ದು ಗ್ರಾಮೀಣ ಹಾಗೂ ನಗರಪ್ರದೇಶಗಳೆಂಬ ಪ್ರಮುಖ ವಿಭಾಗಗಳಿಲ್ಲ. ಎಲ್ಲಾ 14 ಜಿಲ್ಲೆಗಳಲ್ಲಿ ಏರಿಕೆ ಏಕರೂಪವಾಗಿದೆ. ಆದರೆ ಕರ್ನಾಟಕದ ಪರಿಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿದೆ. ಬೆಂಗಳೂರು ನಗರವೊಂದೇ ಒಟ್ಟಾರೆ ಕೋವಿಡ್-19 ಸೋಂಕು, ಸಾವು ಪ್ರಕರಣಗಳ ಶೇ.42 ರಷ್ಟನ್ನು ಹೊಂದಿರುತ್ತದೆ. ಉಳಿದ 29 ಜಿಲ್ಲೆಗಳು ಶೇ.58 ರಷ್ಟು ಕೋವಿಡ್-19 ಸೋಂಕು ಸಾವಿನ ಪ್ರಕರಣಗಳನ್ನು ಹೊಂದಿರುತ್ತವೆ. ಕರ್ನಾಟಕದ ಬೇರೆ ಯಾವುದೆ ಭಾಗಗಳಲ್ಲಿರುವುದಕ್ಕಿಂತಲೂ ಸಿಆರ್ ಎಫ್ ಬೆಂಗಳೂರಿನಲ್ಲಿ ಹೆಚ್ಚಿದೆ. ಸಣ್ಣ ನಗರಗಳು ಹಾಗೂ ಗ್ರಾಮೀಣ ಭಾಗದಲ್ಲಿ ಟೆಸ್ಟಿಂಗ್ ಹಾಗೂ ಆರ್ ಟಿಪಿಸಿಆರ್ ಟೆಸ್ಟಿಂಗ್ ನ ಅಲಭ್ಯತೆಯೂ ಇದಕ್ಕೆ ಪ್ರಾಥಮಿಕ ಕಾರಣ" ಎಂದು ಹೇಳಿದ್ದಾರೆ.

ಅಧ್ಯಯನದ ಮಾಹಿತಿಯ ಪ್ರಕಾರ ಆಗಸ್ಟ್ 16-22, 2021 ರಲ್ಲಿ 1,249 ಮಂದಿ ಕೋವಿಡ್-19 ಗೆ 893 (ಶೇ.71) ರಷ್ಟು ಮಂದಿ ಕೇರಳದಲ್ಲಿ ಸಾವನ್ನಪ್ಪಿದ್ದರೆ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ 166 (ಶೇ.13ರಷ್ಟು) ಮಂದಿ ಜೀವ ತೆತ್ತಿದ್ದಾರೆ.  ಕರ್ನಾಟಕದಲ್ಲಿ ನಾಲ್ಕರಲ್ಲಿ ಒಂದು ಸಾವು 50 ವರ್ಷಗಳ ಒಳಗಿನ ವಯಸ್ಸಿನವರದ್ದಾಗಿದ್ದು 166 ಸಾವುಗಳಲ್ಲಿ 19 ಮಂದಿ 31-40 ವಯಸ್ಸಿನವರಾಗಿದ್ದಾರೆ. ಕೇರಳದಲ್ಲಿ 5 ರಲ್ಲಿ ಒಂದು ಸಾವು 80 ವರ್ಷದ ಮೇಲ್ಪಟ್ಟವರದ್ದಾಗಿದ್ದರೆ ತಮಿಳುನಾಡಿನಲ್ಲಿ ಐವರಲ್ಲಿ ಒಬ್ಬರು 51-60 ವಯಸ್ಸಿನವರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com