ಶಿವಮೊಗ್ಗ: ಗಂಡನ ಸಾಲಕ್ಕೆ ಹೆದರಿ ಒಂದೇ ಸೀರೆಗೆ ಕೊರಳೊಡ್ಡಿ ತಾಯಿ-ಮಗಳು ಆತ್ಮಹತ್ಯೆ

ಗಂಡನ ಸಾಲಕ್ಕೆ ಹೆದರಿ ತಾಯಿ-ಮಗಳು ಒಂದೇ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಭದ್ರಾವತಿಯ ಯಾಕ್ಸಿನ್ ನಗರದಲ್ಲಿ‌ ಮಂಗಳವಾರ ನಡೆದಿದೆ. 
ತಾಯಿ-ಮಗಳು ಆತ್ಮಹತ್ಯೆಗೆ ಶರಣು
ತಾಯಿ-ಮಗಳು ಆತ್ಮಹತ್ಯೆಗೆ ಶರಣು
Updated on

ಶಿವಮೊಗ್ಗ: ಗಂಡನ ಸಾಲಕ್ಕೆ ಹೆದರಿ ತಾಯಿ-ಮಗಳು ಒಂದೇ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಭದ್ರಾವತಿಯ ಯಾಕ್ಸಿನ್ ನಗರದಲ್ಲಿ‌ ಮಂಗಳವಾರ ನಡೆದಿದೆ. 

ಸಂಗೀತಾ (35) ಹಾಗೂ ಮಧುಶ್ರೀ (11) ಮೃತ ದುರ್ದೈವಿಗಳು. ಸಂಗೀತಾ ಪತಿ ಧನಶೇಖರ್ ಹೋಲ್​ಸೇಲ್ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. 

ಆದರೆ, ಕೋವಿಡ್-19 ಹಿನ್ನೆಲೆಯಲ್ಲಿ ವ್ಯವಹಾರದಲ್ಲಿ ಅಪಾರ ನಷ್ಟ ಅನುಭವಿಸಿದ್ದರು. ವ್ಯಾಪಾರದಲ್ಲಿ ನಷ್ಟ ಉಂಟಾಗಿದ್ದರಿಂದ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಪತಿಯ ಸಾಲದ ವಿಷಯ ತಿಳಿದಿದ್ದ ಪತ್ನಿ ಸಂಗೀತಾ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಸಾಲಕ್ಕೆ ಹೆದರಿಯೇ ತಾಯಿ-ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com