ಕಾರ್ಯಾಗಾರದಲ್ಲಿ ವಾಸುದೇವ ಶರ್ಮಾ
ಕಾರ್ಯಾಗಾರದಲ್ಲಿ ವಾಸುದೇವ ಶರ್ಮಾ

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ಶತಮಾನಗಳೇ ಬೇಕು: ತಜ್ಞರ ಅಭಿಪ್ರಾಯ

ಭಾರತದ ಪ್ರತಿ 11 ಮಕ್ಕಳಲ್ಲಿ ಒಂದು ಮಗು ಬಾಲ ಕಾರ್ಮಿಕ ಪದ್ಧತಿಯಲ್ಲಿ ತೊಡಗಿಕೊಂಡಿದೆ, ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಾಶ ಮಾಡಲು 100 ವರ್ಷಗಳೇ ಬೇಕು.
Published on

ಬೆಂಗಳೂರು: ಭಾರತದ ಪ್ರತಿ 11 ಮಕ್ಕಳಲ್ಲಿ ಒಂದು ಮಗು ಬಾಲ ಕಾರ್ಮಿಕ ಪದ್ಧತಿಯಲ್ಲಿ ತೊಡಗಿಕೊಂಡಿದೆ, ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಾಶ ಮಾಡಲು 100 ವರ್ಷಗಳೇ ಬೇಕು ಎಂದು ಮಕ್ಕಳ ಹಕ್ಕುಗಳ ಟ್ರಸ್ಟ್ ನ ಕಾರ್ಯ ನಿರ್ವಾಹಕ ನಿರ್ದೇಶಕ ಎನ್ .ವಿ ವಾಸುದೇವ ಶರ್ಮಾ ಹೇಳಿದ್ದಾರೆ.

ಜಿಆರ್‌ಪಿ, ರೈಲ್ವೇ ಪ್ರೊಟೆಕ್ಷನ್ ಫೋರ್ಸ್, ರೈಲ್ವೇ ಮತ್ತು ಮಕ್ಕಳ ಹಕ್ಕುಗಳ ಸಂಘಟನೆಗಳ ಸಿಬ್ಬಂದಿಗಾಗಿ, ಸರ್ಕಾರಿ ರೈಲ್ವೆ ಪೋಲಿಸ್ (ಜಿಆರ್‌ಪಿ) ಮತ್ತು ಮಾನವ ಕಳ್ಳಸಾಗಣೆ ವಿರೋಧಿ ಎನ್‌ಜಿಒ ವಿಹಾನ್ ಆಯೋಜಿಸಿದ್ದ  ಕಾರ್ಯಾಗಾರದಲ್ಲಿ ಮಾತನಾಡಿದ ಅವರು, 2011ರ ಜನಗಣತಿ ಪ್ರಕಾರ ಸುಮಾರು 1 ಕೋಟಿ ಮಕ್ಕಳು ಬಾಲ ಕಾರ್ಮಿಕ ಪದ್ಧತಿಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಪ್ರತಿ ವರ್ಷ ಬಾಲಕಾರ್ಮಿಕ ಪದ್ಧತಿಯಲ್ಲಿ ಶೇ. 2.2 ರಷ್ಟು ಇಳಿಕೆಯಾಗಿದೆ ಎಂದು ಹೇಳಿದ್ದಾರೆ.

ಸಂಖ್ಯೆಗಳ ವಾಸ್ತವತೆಯು ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಗೋಚರಿಸುವುದಿಲ್ಲ, ಏಕೆಂದರೆ ಕಾರ್ಮಿಕರಿಗಾಗಿ ನಿಯೋಜಿಸಲಾದ ಮಕ್ಕಳ ಸಂಪೂರ್ಣ ಪ್ರಕ್ರಿಯೆಯು ಭೂಗತವಾಗಿ ಹೋಗಿದೆ. ಕೆಎಸ್‌ಆರ್ ಬೆಂಗಳೂರು ನಗರ, ಯಶವಂತಪುರ ಅಥವಾ ಕಂಟೋನ್ಮೆಂಟ್ ನಲ್ಲಿ ಅಂತಹ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯೆ ಸರಿತಾ ವಾಜ್ ಮಾತನಾಡಿ, ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಪೋಷಕರಿಗೆ ಉದ್ಯೋಗದಲ್ಲಿ ನಷ್ಟವಾಗಿದೆ, ಶಾಲೆಗಳನ್ನು ಮುಚ್ಚುವ ಮೂಲಕ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ದುಡಿಮೆಗಾಗಿ ಕಳ್ಳಸಾಗಣೆ ಮಾಡಲಾಗಿದೆ ಎಂದು ಹೇಳಿದರು.  ಕೋವಿಡ್ ಸಾಂಕ್ರಾಮಿಕದ ನಂತರ ಅವರನ್ನು ಮರಳಿ ಶಾಲೆಗೆ ಸೇರಿಸುವಲ್ಲಿ ಅತಿ ದೊಡ್ಡ ಸಮಸ್ಯೆ ಎದುರಿಸಬೇಕಾಕಾಗಿದೆ ಎಂದು ಅವರು ಹೇಳಿದರು.

ಬೆಂಗಳೂರು  ಪ್ರಮುಖ ಆರ್ಥಿಕ ಕೇಂದ್ರವಾಗಿರುವುದರಿಂದ, ದೇಶದ ವಿವಿಧ ಭಾಗಗಳಿಂದ ಮಕ್ಕಳನ್ನು ಇಲ್ಲಿನ ಕೈಗಾರಿಕೆಗಳಲ್ಲಿ ಕೆಲಸಗಳನ್ನು ಮಾಡಲು ಕಳುಹಿಸಲಾಗುತ್ತಿದೆ ಎಂದು ಕರ್ನಾಟಕದಲ್ಲಿ ರೈಲ್ವೇಯ ಎಡಿಜಿಪಿ ಭಾಸ್ಕರ್ ರಾವ್ ಬಾಲ ಕಾರ್ಮಿಕ ಪದ್ಧತಿಯ ವ್ಯಾಪಕತೆ ಬಗ್ಗೆ ವಿವರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com