ಮಂಗಳೂರು: ಹೊಯ್ಗೆ ಬಜಾರ್‌ ಸಮುದ್ರ ದಡದಲ್ಲಿ ಅಪರಿಚಿತ ಯುವತಿಯ ಮೃತದೇಹ ಪತ್ತೆ

ನಗರದ ಹೊಯ್ಗೆ ಬಜಾರ್‌ನ ಸಮುದ್ರದ ದಡದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಅಪರಿಚಿತ ಯುವತಿಯ ಮೃತದೇಹ ಭಾನುವಾರ ಬೆಳಗ್ಗೆ ಪತ್ತೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಮಂಗಳೂರು: ನಗರದ ಹೊಯ್ಗೆ ಬಜಾರ್‌ನ ಸಮುದ್ರದ ದಡದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಅಪರಿಚಿತ ಯುವತಿಯ ಮೃತದೇಹ ಭಾನುವಾರ ಬೆಳಗ್ಗೆ ಪತ್ತೆಯಾಗಿದೆ.

ಮೃತ ಯುವತಿಯು ಸುಮಾರು 5 ಅಡಿ ಎತ್ತರವಿದ್ದು, ಕಪ್ಪು ಬಣ್ಣದ ಟೀ-ಶರ್ಟ್, ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ.‌ ಒಂದು ಕೈಯಲ್ಲಿ ಕೆಂಪು ದಾರ ಮತ್ತು ಕಪ್ಪು ಬಳೆ ಹಾಕಿಕೊಂಡಿದ್ದು, ಉದ್ದ ಕೂದಲು ಹೊಂದಿದ್ದಾರೆಂದು ತಿಳಿದುಬಂದಿದೆ.

ಮೃತದೇಹದ‌‌ ಮೇಲೆ ಯಾವುದೇ ಗಾಯಗೊಂಡ ಕಲೆಗಳು ಮೇಲ್ನೋಟಕ್ಕೆ ಕಂಡು ಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದು, ಈ ಸಂಬಂಧ ಮಂಗಳೂರು ದಕ್ಷಿಣ  ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com