ಶಾಲೆ-ಕಾಲೇಜು ಬಂದ್ ಸಾಧ್ಯವಿಲ್ಲ, ಹಸಿರು ಪಟ್ಟಿ ಧರಿಸಿ ರೈತರಿಗೆ ನೈತಿಕ ಬೆಂಬಲ ನೀಡುತ್ತೇವೆ: ಖಾಸಗಿ ಶಾಲಾ-ಕಾಲೇಜುಗಳ ಒಕ್ಕೂಟ

ಒಂದು ವರ್ಷದ ಬಳಿಕ ಮಕ್ಕಳು ಶಾಲೆ ಮುಖ ನೋಡುತ್ತಿವೆ. ಹೀಗಾಗಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲಾ ಕಾಲೇಜುಗಳನ್ನು ಬಂದ್ ಮಾಡಲು ಸಾಧ್ಯವಿಲ್ಲ. ಹಸಿರು ಬಟ್ಟೆ ಅಥವಾ ಹಸಿರು ಪಟ್ಟಿಯನ್ನು ಧರಿಸಿ ಈ ಮೂಲಕ ಭಾರತ್ ಬಂದ್​​ಗೆ ನೈತಿಕ ಬೆಂಬಲ ಸೂಚಿಸಲಾಗುವುದು ಖಾಸಗಿ ಶಾಲಾ-ಕಾಲೇಜುಗಳ ಒಕ್ಕೂಟ ಶನಿವಾರ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಒಂದು ವರ್ಷದ ಬಳಿಕ ಮಕ್ಕಳು ಶಾಲೆ ಮುಖ ನೋಡುತ್ತಿವೆ. ಹೀಗಾಗಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲಾ ಕಾಲೇಜುಗಳನ್ನು ಬಂದ್ ಮಾಡಲು ಸಾಧ್ಯವಿಲ್ಲ. ಹಸಿರು ಬಟ್ಟೆ ಅಥವಾ ಹಸಿರು ಪಟ್ಟಿಯನ್ನು ಧರಿಸಿ ಈ ಮೂಲಕ ಭಾರತ್ ಬಂದ್​​ಗೆ ನೈತಿಕ ಬೆಂಬಲ ಸೂಚಿಸಲಾಗುವುದು ಖಾಸಗಿ ಶಾಲಾ-ಕಾಲೇಜುಗಳ ಒಕ್ಕೂಟ ಶನಿವಾರ ಹೇಳಿದೆ. 

ಭಾರತ್ ಬಂದ್ ಕುರಿತು ಹೇಳಿಕೆ ನೀಡಿರುವ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಅವರು, ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಸೆ.27ರಂದು ಭಾರತ್ ಬಂದ್‌ಗೆ ಕರೆ ನೀಡಿವೆ.‌ ಈ ಹಿನ್ನೆಲೆಯಲ್ಲಿ ಖಾಸಗಿ ಶಾಲಾ ಸಂಘಟನೆಗಳು ಬಂದ್​​ಗೆ ನೈತಿಕ ಬೆಂಬಲವಷ್ಟೇ ನೀಡಲು ತೀರ್ಮಾನಿಸಿವೆ ಎಂದು ಹೇಳಿದ್ದಾರೆ. 

ಆ ದಿನದಂದು ಶಾಲಾ-ಕಾಲೇಜುಗಳನ್ನ ಮುಚ್ಚುವುದಿಲ್ಲ.‌ ಕೋವಿಡ್‌ನಿಂದಾಗಿ ಈಗಷ್ಟೇ ಶಾಲಾ-ಕಾಲೇಜು ಆರಂಭವಾಗಿವೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆಗಳನ್ನ ಬಂದ್ ಮಾಡಲು ಆಗುವುದಿಲ್ಲ. ಹಸಿರು ಬಟ್ಟೆ ಅಥವಾ ಹಸಿರು ಪಟ್ಟಿಯನ್ನು ಧರಿಸಿ ಈ ಮೂಲಕ ಭಾರತ್ ಬಂದ್​​ಗೆ ನೈತಿಕ ಬೆಂಬಲ ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ. 

ರೂಪ್ಸಾ ಬಣದ ಸದಸ್ಯರು ಕೂಡ ರೈತರಿಗೆ ನೈತಿಕ ಬೆಂಬಲ ನೀಡುತ್ತೇವೆಯೇ ವಿನಃ ಶಾಲೆಗಳನ್ನ ಬಂದ್ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಸದ್ಯ ತರಗತಿ ನಡೆಯುತ್ತಿರುವುದೇ 4-5 ದಿನ. ಈ ಮಧ್ಯೆ ಬಂದ್ ಅಂದರೆ ವಿದ್ಯಾರ್ಥಿಗಳ ಓದಿಗೆ ಕಷ್ಟವಾಗಲಿದೆ ಎಂದು ಹಾಲನೂರು ಎಸ್ ಲೇಪಾಕ್ಷಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com