ಕೇವಲ 5 ದಿನಗಳಲ್ಲಿ 231 ಕೇಸ್ ದಾಖಲಿಸಿ, 58 ಸಾವಿರ ರೂ. ದಂಡ ಸಂಗ್ರಹಿಸಿದ ಬಿಎಂಆರ್ ಸಿಎಲ್! ಯಾಕೆ ಗೊತ್ತಾ?

ಮೆಟ್ರೋ ರೈಲುಗಳಲ್ಲಿ ಸರಿಯಾಗಿ ಮಾಸ್ಕ್ ಧರಿಸುವಿಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಬಗ್ಗೆ ಎರಡು ವಾರಗಳ ಅರಿವು ಮೂಡಿಸುವ ಕಾರ್ಯಕ್ರಮದ ನಂತರ, ನಿಯಮ ಉಲ್ಲಂಘಿಸುವವರ ವಿರುದ್ಧ ದೂರು ದಾಖಲಿಸಿಕೊಳ್ಳಲು ಬಿಎಂಆರ್ ಸಿಎಲ್ ಆರಂಭಿಸಿದೆ.
ಮೆಟ್ರೋ ರೈಲು
ಮೆಟ್ರೋ ರೈಲು

ಬೆಂಗಳೂರು: ಮೆಟ್ರೋ ರೈಲುಗಳಲ್ಲಿ ಸರಿಯಾಗಿ ಮಾಸ್ಕ್ ಧರಿಸುವಿಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಬಗ್ಗೆ ಎರಡು ವಾರಗಳ ಅರಿವು ಮೂಡಿಸುವ ಕಾರ್ಯಕ್ರಮದ ನಂತರ, ನಿಯಮ ಉಲ್ಲಂಘಿಸುವವರ ವಿರುದ್ಧ ದೂರು ದಾಖಲಿಸಿಕೊಳ್ಳಲು ಬಿಎಂಆರ್ ಸಿಎಲ್ ಆರಂಭಿಸಿದೆ.

ಕಳೆದ ಐದು ದಿನಗಳಲ್ಲಿ 231 ಪ್ರಯಾಣಿಕರ ವಿರುದ್ಧ ದೂರು ದಾಖಲಿಸಲಾಗಿದ್ದು, 57, ಸಾವಿರದ 750 ರೂ. ದಂಡ ವಸೂಲಿ ಮಾಡಲಾಗಿದೆ. ಕಾರ್ಯಾಚರಣೆ, ನಿರ್ವಹಣಾ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯನ್ನೊಳಗೊಂಡ ತಂಡಗಳಿಗೆ ನಿಯಮ ಉಲ್ಲಂಘಿಸುವವರ ವಿರುದ್ಧ ದೂರು ದಾಖಲಿಸುವ ಕೆಲಸ ನೀಡಲಾಗಿದೆ ಎಂದು ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಎ.ಎಸ್. ಶಂಕರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಮಾರ್ಚ್ 24ರಿಂದ ದೂರು ದಾಖಲಿಸಿಕೊಳ್ಳುವ ಕೆಲಸ ಆರಂಭಿಸಲಾಗಿದೆ. ಆರಂಭದಲ್ಲಿ  ಹೆಚ್ಚಾಗಿ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದೇವೆ ಮತ್ತು ಕೆಲವೇ ದೂರುಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಏಪ್ರಿಲ್ 4ರವರೆಗೂ ಕೇವಲ 9 ದೂರುಗಳನ್ನು ದಾಖಲಿಸಲಾಗಿತ್ತು. ಏಪ್ರಿಲ್ 5 ರ ನಂತರ ಕಠಿಣ ಕ್ರಮಕ್ಕೆ ನಿರ್ಧರಿಸಿ, ಸ್ಕ್ವಾಡ್ ಗಳನ್ನು ಇರಿಸಲಾಯಿತು. ಯಾವುದೇ ನಿಯಮ ಉಲ್ಲಂಘನೆಗೆ 250 ರೂ. ದಂಡ ವಿಧಿಸಲಾಗುತ್ತಿದೆ. ಏಪ್ರಿಲ್ 9 ರಂದು ಅತಿ ಹೆಚ್ಚು 88 ಪ್ರಕರಣಗಳು ದಾಖಲಾಗಿದ್ದು, 22 ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ರೈಲಿನ ಒಳಗಡೆ ಕಣ್ಗಾವಲು ಇರುವುದರಿಂದ ವಾದಿಸುವ ಬಗ್ಗೆ ಪ್ರಯಾಣಿಕರಿಗೆ ಗೊತ್ತಿದೆ ಎಂದು ಕೆಲ ಪ್ರಯಾಣಿಕರಿಗೆ ದಂಡ ವಿಧಿಸಿದಾಗ ರೈಲಿನ ಒಳಗಡೆಯಿದ್ದ ವಕೀಲ ಕಾಂತರಾಜ್ ತವಾನೆ ಅವರು ಹೇಳಿದ್ದಾರೆ. ದಂಡ ಕೇಳುವ ಮೊದಲು ಪ್ರತಿಯೊಬ್ಬ ವ್ಯಕ್ತಿಯ ಫೋಟೋ ಕ್ಲಿಕ್ ಮಾಡಲಾಗುತ್ತದೆ. ನನ್ನ ಹಿಂದೆ ವ್ಯಕ್ತಿ ದಂಡ ಪಾವತಿಗೆ ನಿರಾಕರಿಸಿದಾಗ ಆತನನ್ನು ರೈಲಿನಿಂದ ಕೆಳಗಿಳಿಯಲು ಹೇಳಿ ಕರೆದೊಯ್ಯಲಾಯಿತು ಎಂದು ಅವರು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com