ಕೋವಿಡ್-19 ಸಮಸ್ಯೆಗಳನ್ನು ಸರಿಪಡಿಸುವುದಕ್ಕೆ ಗಡುವು ವಿಧಿಸಿದ ಕರ್ನಾಟಕ ಸರ್ಕಾರ

ರಾಜ್ಯದಲ್ಲಿ ಕೋವಿಡ್-19 ಸೋಂಕು ಹೆಚ್ಚು ವ್ಯಾಪಿಸುತ್ತಿದ್ದು, ರೆಮ್ಡಿಸಿವಿರ್, ಲಸಿಕೆಗಳು, ಆಕ್ಸಿಜನ್ ಬೆಡ್ ಲಭ್ಯತೆಯಿಂದ ಮೊದಲುಗೊಂಡು 108 ಸೇವೆ ಹಾಗೂ 1912 ಸೇರಿದಂತೆ ಹಲವು ಸಮಸ್ಯೆಗಳಿವೆ. 
ಕೋವಿಡ್-19 ಸಮಸ್ಯೆಗಳನ್ನು ಸರಿಪಡಿಸುವುದಕ್ಕೆ ಗಡುವು ವಿಧಿಸಿದ ಕರ್ನಾಟಕ ಸರ್ಕಾರ
ಕೋವಿಡ್-19 ಸಮಸ್ಯೆಗಳನ್ನು ಸರಿಪಡಿಸುವುದಕ್ಕೆ ಗಡುವು ವಿಧಿಸಿದ ಕರ್ನಾಟಕ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕು ಹೆಚ್ಚು ವ್ಯಾಪಿಸುತ್ತಿದ್ದು, ರೆಮ್ಡಿಸಿವಿರ್, ಲಸಿಕೆಗಳು, ಆಕ್ಸಿಜನ್ ಬೆಡ್ ಲಭ್ಯತೆಯಿಂದ ಮೊದಲುಗೊಂಡು 108 ಸೇವೆ ಹಾಗೂ 1912 ಸೇರಿದಂತೆ ಹಲವು ಸಮಸ್ಯೆಗಳಿವೆ. 

ಕೋವಿಡ್-19 ನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿದ್ದು, ಇವುಗಳನ್ನು ಬಗೆಹರಿಸುವುದಕ್ಕೆ ಆಡಳಿತ 36 ಗಂಟೆಗಳ ಗಡುವು ಹಾಕಿಕೊಂಡಿದೆ. 

36 ಗಂಟೆಗಳಲ್ಲಿ 108, 1912 ರಿಂದ ಸೂಕ್ತ ಪ್ರತಿಕ್ರಿಯೆ ಲಭ್ಯವಾಗಲಿದೆ, ಲಸಿಕೆಗಳು ಹಾಗೂ ರೆಮ್ಡಿಸಿವಿರ್ ಗಳು ಲಭ್ಯವಾಗಲಿದೆ ಹಾಗೂ ರೋಗಿಗಳಿಗೆ ಐಸಿಯು ಹಾಗೂ ಆಕ್ಸಿಜನ್ ಗಳು ಲಭ್ಯವಾಗಲಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ  ಮಾಹಿತಿ ನೀಡಿದ್ದಾರೆ. 

"ಸೌಲಭ್ಯಗಳ ಕೊರತೆ ಎದುರಾಗಿರುವುದು ಸರ್ಕಾರದ ವೈಫಲ್ಯಗಳನ್ನು ತೋರುತ್ತದೆ. ಒಂದು ಗಂಟೆಯಲ್ಲಿ ಸರಿಮಾಡಬಹುದಾಗಿರುವುದಕ್ಕೆ 36 ಗಂಟೆಗಳು ತೆಗೆದುಕೊಳ್ಳಲಾಗುತ್ತಿದೆ. ಕೊರೋನಾ ಪ್ರಕರಣಗಳು ಪ್ರತಿ ದಿನವೂ ದಾಖಲೆ ಬರೆಯುತ್ತಿದೆ. ಮೂಲಭೂತ ಸೇವೆಗಳಿಗೆ ಕರೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ವ್ಯವಸ್ಥೆ ಕುಸಿಯುತ್ತಿರುವುದರ ಸಂಕೇತವಾಗಿದೆ ಎಂದು ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

"ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವ ತಜ್ಞರು ಸರ್ಕಾರಕ್ಕೆ ಎರಡನೇ ಅಲೆಯ ಬಗ್ಗೆ ನಿರಂತರವಾಗಿ ಎಚ್ಚರಿಕೆ ನೀಡುತ್ತಿದ್ದರು. ಆದರೆ ಎರಡನೇ ಅಲೆಯನ್ನೂ ಗೆಲ್ಲುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸ ಅಧಿಕಾರಿಗಳು ಹಾಗೂ ಸರ್ಕಾರದಲ್ಲಿತ್ತು" ಎಂದು  ತಜ್ಞರು ಹೇಳಿದ್ದಾರೆ. 

"ಜನರ ಅಸಾಹಯಕತೆ ನೋಡಿದಲ್ಲಿ ಸರ್ಕಾರ ಹಿಂದಿನ ಘಟನೆಗಳಿಂದ ಏನನ್ನೂ ಕಲಿತಿಲ್ಲ ಎಂಬುದು ಸಾಬೀತಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com