ಮನಕಲಕುವ ಘಟನೆ: 4 ಲಕ್ಷ ಬಿಲ್ ಕಟ್ಟಲಾಗದೆ ಪತಿಯ ಮೃತದೇಹವನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋದ ಬೆಂಗಳೂರು ಮಹಿಳೆ

ಮೊದಲೇ ಕೊರೋನಾ ಹೊಡೆತಕ್ಕೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರು ಇದೀಗ ಕೊರೋನಾ ಚಿಕಿತ್ಸೆಯ ಬಿಲ್ ಕಟ್ಟಲು ಸಾಧ್ಯವಾಗದೇ ಅಸಹಾಯಕರಾಗುತ್ತಿದ್ದಾರೆ. ಅಂತೆಯೇ ಖಾಸಗಿ ಆಸ್ಪತ್ರೆಯ 4 ಲಕ್ಷ ರುಪಾಯಿ ಬಿಲ್ ಕಟ್ಟಲು ಸಾಧ್ಯವಾಗದೇ ಪತ್ನಿಯೊಬ್ಬಳು ಪತಿಯ ಮೃತದೇಹವನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮೊದಲೇ ಕೊರೋನಾ ಹೊಡೆತಕ್ಕೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರು ಇದೀಗ ಕೊರೋನಾ ಚಿಕಿತ್ಸೆಯ ಬಿಲ್ ಕಟ್ಟಲು ಸಾಧ್ಯವಾಗದೇ ಅಸಹಾಯಕರಾಗುತ್ತಿದ್ದಾರೆ. ಅಂತೆಯೇ ಖಾಸಗಿ ಆಸ್ಪತ್ರೆಯ 4 ಲಕ್ಷ ರುಪಾಯಿ ಬಿಲ್ ಕಟ್ಟಲು ಸಾಧ್ಯವಾಗದೇ ಪತ್ನಿಯೊಬ್ಬಳು ಪತಿಯ ಮೃತದೇಹವನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋಗಿದ್ದಾರೆ. 

ಕೊರೋನಾ ಪೀಡಿತ ಗಂಡನಿಗೆ ಚಿಕಿತ್ಸೆ ಕೊಡಿಸಿದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ವೇಳೆ ಆಸ್ಪತ್ರೆಯ ಬಿಲ್ ಮೊತ್ತ ಕೇಳಿದ ಪತ್ನಿಗೆ ಶಾಕ್ ಆಗಿದೆ. ನಾಲ್ಕು ಲಕ್ಷ ರುಪಾಯಿ ಕಟ್ಟುವಂತೆ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ಹಣವಿಲ್ಲದೆ ಅಸಹಾಯಕಳಾದ ಮಹಿಳೆ ನನ್ನ ಬಳಿ ಅಷ್ಟು ಹಣವಿಲ್ಲ. ಹೀಗಾಗಿ ಅಂತ್ಯ ಸಂಸ್ಕಾರ ನೀವೇ ಮಾಡಿ ಎಂದು ಮೃತದೇಹವನ್ನು ಆಸ್ಪತ್ರೆಯಲ್ಲೇ ಬಿಟ್ಟು ಬಂದಿದ್ದಾರೆ. 

ನನ್ನ ತಂದೆಗೆ ನಾಲ್ಕು ದಿನಗಳಿಂದ ತೀವ್ರ ಜ್ವರ, ಕೆಮ್ಮು ಕಾಣಿಸಿಕೊಂಡಿತ್ತು. ಹೀಗಾಗಿ ಕೊರೋನಾ ಪರೀಕ್ಷೆ ಮಾಡಿಸಿದೇವು. ವರದಿ ಪಾಸಿಟಿವ್ ಅಂತಾ ಬಂದಿತ್ತು. ಕೂಡಲೇ ನಾವು ಬಿಬಿಎಂಪಿಗೆ ಕರೆ ಮಾಡಿದೆವು. ಯಾವುದೇ ಪ್ರತಿಕ್ರಿಯೆ ಬರಲಿಲ್ಲ. 

ಹೀಗಾಗಿ ನಾವು ಮೊದಲಿಗೆ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಕರೆದುಕೊಂಡು ಹೋದೆವು ಅಲ್ಲಿ ಬೆಡ್ ಸಿಗಲಿಲ್ಲ. ಹೀಗಾಗಿ ನಂತರ ಕಣ್ವ ಆಸ್ಪತ್ರೆಗೆ ದಾಖಲಿಸಿದೆವು. ಅಲ್ಲಿ 50 ಸಾವಿರ ಮುಂಗಡ ಹಣ ಕಟ್ಟುವಂತೆ ಹೇಳಿದರು. ಆದರೆ ನಮ್ಮ ಬಳಿ 20 ಸಾವಿರ ರುಪಾಯಿ ಮಾತ್ರ ಇತ್ತು. ಅಷ್ಟನ್ನೇ ಪಾವತಿ ಮಾಡಿದೆವು. ಅಡ್ಮಿಟ್ ಮಾಡಿಕೊಂಡು ಆಸ್ಪತ್ರೆಯವರು ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಲಿಲ್ಲ. ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ ಎಂದು ಹೇಳುತ್ತಿದ್ದರು. 

ಈ ನಾವು ಆಸ್ಪತ್ರೆಗೆ ಹೋದಾಗ ನಿಮ್ಮ ತಂದೆ 30ರಷ್ಟು ಗುಣಮುಖರಾಗಿದ್ದಾರೆ ಎಂದು ಹೇಳಿದ ಎರಡು ದಿನಗಳಲ್ಲೇ ನಿಮ್ಮ ತಂದೆ ಸಾವನ್ನಪ್ಪಿದ್ದಾರೆ ಬಂದು ಮೃತದೇಹ ಕೊಂಡೊಯ್ಯುವಂತೆ ಹೇಳಿದ್ದರು ಎಂದು ಮೃತನ ಮಗಳು ಕಣ್ಣೀರು ಹಾಕಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com