ಬೆಂಗಳೂರು: ಜಪಾನ್ ತಂಡದಿಂದ ಕಾವೇರಿ 5ನೇ ಹಂತದ ಯೋಜನೆ ಪರಿಶೀಲನೆ

ಭಾರತದ ಮೂಲಸೌಕರ್ಯ ಯೋಜನೆಗಳಿಗೆ ಪ್ರಮುಖ ನಿಧಿಯಾಗಿರುವ ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ)ಯ ತಂಡವು ಮಹಾನಗರದ ಕುಡಿವ ನೀರಿನ ದಾಹ ತಣಿಸಲು ರೂಪಿಸಲಾಗಿರುವ ಕಾವೇರಿ 5ನೇ ಹಂತದ ಯೋಜನೆಯನ್ನು ಬುಧವಾರ ಪರಿಶೀಲನೆ ನಡೆಸಿತು. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಭಾರತದ ಮೂಲಸೌಕರ್ಯ ಯೋಜನೆಗಳಿಗೆ ಪ್ರಮುಖ ನಿಧಿಯಾಗಿರುವ ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ)ಯ ತಂಡವು ಮಹಾನಗರದ ಕುಡಿವ ನೀರಿನ ದಾಹ ತಣಿಸಲು ರೂಪಿಸಲಾಗಿರುವ ಕಾವೇರಿ 5ನೇ ಹಂತದ ಯೋಜನೆಯನ್ನು ಬುಧವಾರ ಪರಿಶೀಲನೆ ನಡೆಸಿತು. 

ರೂ.5,550 ಕೋಟಿ ವೆಚ್ಚದಲ್ಲಿ ಕಾವೇರಿ 5ನೇ ಹಂತದ ಯೋಜನೆಯನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್'ಬಿ) ರೂಪಿಸಿದೆ. ಈ ಯೋಜನೆಗೆ ಶೇ.85ರಷ್ಟು ಹಣಕಾಸು ನೆರವನ್ನು ಜೈಕಾ ನೀಡಿದೆ. 

ಇದರಂತೆ ನಿನ್ನೆ ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆಯ ನಿಯೋಗ ನಿನ್ನೆ ಬಿಡಬ್ಲ್ಚೂಎಸ್ಎಸ್'ಬಿ ಮುಖ್ಯ ಹಾಗೂ ಮುಖ್ಯ ಎಂಜಿನಿಯರ್ ಅವರನ್ನು ಕಾವೇರಿ ಭವನದಲ್ಲಿರುವ ಕಚೇರಿಯಲ್ಲಿ ಭೇಟಿ ಮಾಡಿದ್ದು, ಯೋಜನೆ ಕುರಿತು ಪರಿಶೀಲನೆ ನಡೆಸಿದರು. 

ಬಳಿಕ ಜಪಾನ್ ಹಾಗೂ ದೆಹಲಿಯಲ್ಲಿರುವ ಅಧಿಕಾರಿಗಳೊಂದಿಗೆ ಕಾನ್ಫರೆನ್ಸ್ ಕಾಲ್ ಮಾಡಿ ಮಾತನಾಡಿದ ಅವರು, ಯೋಜನೆಯ ಕುರಿತು ಇಲ್ಲಿಯವರೆಗೆ ನಡೆದಿರುವ ಪ್ರಗತಿ ಪರಿಶೀಲಿಸಲಾಗಿದ್ದು, ಕೆಲಸ ವೇಗಕ್ಕೆ ತೃಪ್ತಿ ವ್ಯಕ್ತಪಡಿಸಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಬಿಬಿಎಂಪಿ ವ್ಯಾಪ್ತಿಯಲ್ಲಿನ 245 ಚದರ ಕಿಲೋಮೀಟರ್ ನಲ್ಲಿ ಬ್ಯಾಟರಾಯನಪುರ, ಮಹದೇವಪುರ, ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ ಮತ್ತು ದಾಸರಹಳ್ಳಿಗಳಲ್ಲಿನ 110 ಗ್ರಾಮಗಳಿಗೆ ನೀರು ಪೂರೈಸುವ ಈ ಯೋಜನೆಯನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೈಗೆತ್ತಿಕೊಂಡಿದೆ. ಕಾವೇರಿ 5ನೇ ಹಂತದ ಯೋಜನೆಯ 1ನೇ ಘಟ್ಟದಲ್ಲಿ 500 ಎಂಎಲ್‌ಡಿ ಹಾಗೂ 2 ನೇ ಘಟ್ಟದಲ್ಲಿ 275 ಎಂಎಲ್‌ಡಿ ನೀರು ಸಿಗಲಿದೆ. 2023 ಯೋಜನೆಯ ಗಡುವು ಮುಗಿಯಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com