'ನಂದಿ ಬೆಟ್ಟ ರೋಪ್ ವೇ': ಯೋಜನೆ ಸಿದ್ಧ, ಅನುಮೋದನೆಗಾಗಿ ಕಾಯುತ್ತಿರುವ ಅಧಿಕಾರಿಗಳು

ಬಹು ನಿರೀಕ್ಷಿತ ನಂದಿ ಬೆಟ್ಟದ ರೋಪ್ ವೇ ಯೋಜನೆ ಅನುಮೋದನೆಗಾಗಿ ಅಧಿಕಾರಿಗಳು ಕಾಯುತ್ತಿದ್ದು, ನೂತನ ಪ್ರವಾಸೋಧ್ಯಮ ಸಚಿವರಿಂದ ಈ ಯೋಜನೆಗೆ ಅನುಮೋದನೆ ದೊರೆಯುವ ನಿರೀಕ್ಷೆ ಇದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಹು ನಿರೀಕ್ಷಿತ ನಂದಿ ಬೆಟ್ಟದ ರೋಪ್ ವೇ ಯೋಜನೆ ಅನುಮೋದನೆಗಾಗಿ ಅಧಿಕಾರಿಗಳು ಕಾಯುತ್ತಿದ್ದು, ನೂತನ ಪ್ರವಾಸೋಧ್ಯಮ ಸಚಿವರಿಂದ ಈ ಯೋಜನೆಗೆ ಅನುಮೋದನೆ ದೊರೆಯುವ ನಿರೀಕ್ಷೆ ಇದೆ.

ಹೌದು.. ಪ್ರವಾಸೋದ್ಯಮ ಸಚಿವರು ಬದಲಾದರೂ, ನಂದಿ ಬೆಟ್ಟ ಅಭಿವೃದ್ಧಿಪಡಿಸುವ ಯೋಜನೆ ಹಾಗೆಯೇ ತಟಸ್ಥವಾಗಿ ಉಳಿದಿದೆ. ಪ್ರವಾಸೋದ್ಯಮ ಇಲಾಖೆ ಮತ್ತು ಖಾಸಗಿ ಕಂಪನಿಗಳು ಈಗ ವರದಿಯನ್ನು ತಯಾರಿಸಲು ಮತ್ತು ಅಧಿಕೃತವಾಗಿ ಕೆಲಸ ಆರಂಭಿಸಲು ಅಂತಿಮ ಅನುಮೋದನೆ ಪಡೆಯಲು ಕೆಲಸ ಮಾಡುತ್ತಿದ್ದಾರೆ. 

ರಾಜ್ಯ ಸರ್ಕಾರದೊಂದಿಗೆ ನಂದಿ ಬೆಟ್ಟದಲ್ಲಿ ರೋಪ್‌ವೇ ನಿರ್ಮಿಸುವ ಕಂಪನಿ ಆರ್ಕಾನ್ಇನ್‌ಫ್ರಾ ಸಿದ್ಧಪಡಿಸಿದ ಪ್ರಾಥಮಿಕ ವರದಿಯ ಪ್ರಕಾರ, ರೋಪ್‌ ವೇ ಮೂರು ಕಿಲೋಮೀಟರ್ ಉದ್ದವಿರುತ್ತದೆ ಮತ್ತು 300 ಮೀಟರ್ ಎತ್ತರದಲ್ಲಿ ನಿಲ್ಲುತ್ತದೆ ಎಂದು ಹೇಳಿದೆ.

ಮಾಜಿ ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೀಶ್ವರ್ ಅವರು ಕಂಪನಿಯೊಂದಿಗೆ ಸಭೆಗಳನ್ನು ನಡೆಸಿದ್ದರು. ಶಿಮ್ಲಾದಲ್ಲಿ ಮೊದಲನೆ ನಿರ್ಮಾಣವಾಗಿದ್ದ ರೋಪ್ ವೇ ಒಳಗೊಂಡಂತೆ ದೇಶಾದ್ಯಂತ ನಿರ್ಮಾಣವಾಗಿರುವ ಹಲವು ರೋಪ್ ವೇಗಳನ್ನು ತಯಾರಿಸಿದ್ದರಿಂದ ಅವರಿಗೆ ಈ ಯೋಜನೆಯನ್ನು ನೀಡಲಾಗಿದೆ ಎಂದು ಹೇಳಿದ್ದರು.

ಆರ್ಕಾನ್ಇನ್‌ಫ್ರಾ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಬ್ರಿಜೇಂದರ್ ಲಾಲ್ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ನೊಂದಿಗೆ ಮಾತನಾಡಿ, 'ಇದು ಪರಿಸರ ಸ್ನೇಹಿ ಯೋಜನೆಯಾಗಿದ್ದು, ಅಲ್ಲಿ ಮರಗಳನ್ನು ಸಂಪೂರ್ಣವಾಗಿ ಕತ್ತರಿಸಲಾಗುವುದಿಲ್ಲ, ಆದರೆ ಅವುಗಳ ಹೆಚ್ಚುವರಿ ಭಾಗಗಳನ್ನು ಮಾತ್ರ ಕತ್ತರಿಸಲಾಗುತ್ತದೆ.

ಪ್ರತಿ 150-200 ಮೀಟರ್‌ಗಳಿಗೆ ರೋಪ್‌ವೇಗಾಗಿ ಗೋಪುರಗಳನ್ನು ನಿರ್ಮಿಸಲಾಗುವುದು. ನಾವು ಇದಕ್ಕಾಗಿ ರೂ 150 ಕೋಟಿ ಮೊತ್ತದ ಸಮಗ್ರ ರೋಪ್‌ವೇ ಯೋಜನೆಯನ್ನು ರೂಪಿಸಿದ್ದೇವೆ. ಇದು ಪಾರ್ಕಿಂಗ್ ಸ್ಥಳ ಅಭಿವೃದ್ಧಿ, ರೋಪ್‌ವೇ ವಾಹನಕ್ಕಾಗಿ ನಿಲ್ದಾಣದ ರಚನೆ, ಹೋಟೆಲ್‌ಗಳು ಮತ್ತು ಕೆಫೆಟೇರಿಯಾಗಳು ಒಳಗೊಂಡಿವೆ. ಅಂತಿಮ ಡಿಪಿಆರ್ ಅನ್ನು 25-30 ವರ್ಷಗಳ ಒಪ್ಪಂದಕ್ಕೆ ಸಿದ್ಧಪಡಿಸಲಾಗುತ್ತಿದೆ. ಮುಂದಿನ ತಿಂಗಳೊಳಗೆ, ನಾವು ಟೆಂಡರ್‌ಗಳನ್ನು ಸಹ ಘೋಷಿಸುತ್ತೇವೆ ಎಂದು ಲಾಲ್ ಹೇಳಿದರು.

ಮೂಲಗಳ ಪ್ರಕಾರ ನಂದಿ ಬೆಟ್ಟಗಳು, ಜೋಗ ಜಲಪಾತ, ಕೆಮ್ಮಣ್ಣುಗುಂಡಿ ಮತ್ತು ಚಾಮುಂಡಿ ಬೆಟ್ಟಗಳಲ್ಲಿ ಈ ರೋಪ್ ವೇ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. 
 
ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಯೊಬ್ಬರು, "ಪರಿಸರ, ಆರ್ಥಿಕ ಮತ್ತು ಧಾರ್ಮಿಕ ಅಂಶಗಳನ್ನು ಪರಿಗಣಿಸಿದ ನಂತರ, ನಂದಿ ಬೆಟ್ಟ ಬೆಂಗಳೂರಿಗೆ ಸಮೀಪದಲ್ಲಿರುವುದರಿಂದ ಮೊದಲಿಗೆ ಇದನ್ನು ಆಯ್ಕೆ ಮಾಡಲಾಗಿದೆ. ಇದನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಕಾರ್ಯಗತಗೊಳಿಸಲಾಗುತ್ತದೆ. ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುವುದರ ಜೊತೆಗೆ, ಪ್ರವಾಸಿಗರು ನಂದಿ ಬೆಟ್ಟಗಳು ಮೇಲ್ಭಾಗದಿಂದ ಹೇಗೆ ಕಾಣುತ್ತದೆ ಎಂಬುದನ್ನು ನೋಡಬಹುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com