ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಪ್ಯಾರಿಸ್ ಒಪ್ಪಂದವನ್ನು ಗೌರವಿಸಬೇಕು: ವಿಜ್ಞಾನಿ ಅಭಿಮತ

ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಅಂತರ್ ಸರ್ಕಾರ ಸಮಿತಿ (ಐಪಿಸಿಸಿ) ಸೋಮವಾರ ತನ್ನ ಆರನೇ ವರದಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಜಾಗತಿಕ ಮೇಲ್ಮೈ ಉಷ್ಣಾಂಶ, ಮಾನವ ಪ್ರಭಾವದಿಂದ ಹವಾಮಾನ ವ್ಯವಸ್ಥೆಯಲ್ಲಾಗುತ್ತಿರುವ ಬದಲಾವಣೆ ಬಗ್ಗೆ ವಿಜ್ಞಾನಿಗಳು ಖಚಿತಪಡಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:  ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಅಂತರ್ ಸರ್ಕಾರ ಸಮಿತಿ (ಐಪಿಸಿಸಿ) ಸೋಮವಾರ ತನ್ನ ಆರನೇ ವರದಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಜಾಗತಿಕ ಮೇಲ್ಮೈ ಉಷ್ಣಾಂಶ, ಮಾನವ ಪ್ರಭಾವದಿಂದ ಹವಾಮಾನ ವ್ಯವಸ್ಥೆಯಲ್ಲಾಗುತ್ತಿರುವ ಬದಲಾವಣೆ ಬಗ್ಗೆ ವಿಜ್ಞಾನಿಗಳು ಖಚಿತಪಡಿಸಿದ್ದಾರೆ. ಇದು ಇದುವರೆಗೆ ನಡೆಸಲಾದ ಹವಾಮಾನ ವಿಜ್ಞಾನದ ಅತ್ಯಂತ ವಿವರವಾದ ವಿಮರ್ಶೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಜನರಲ್ ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ. 

ಐಪಿಸಿಸಿಯ 195 ಸದಸ್ಯ ರಾಷ್ಟ್ರಗಳಲ್ಲಿ ಭಾರತ ಕೂಡಾ ಒಂದಾಗಿದೆ. ಈ ವರದಿಯೂ ಅಚ್ಚರಿಯೇನಲ್ಲ ಎಂದು ಭೂ ವಿಜ್ಞಾನ ಸಚಿವಾಲಯದ ಖ್ಯಾತ ವಿಜ್ಞಾನಿ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (ಎನ್ಐಎಎಸ್) ನಿರ್ದೇಶಕ ಡಾ. ಶೈಲೇಶ್ ನಾಯಕ್ ಎಂದು ಒತ್ತಿ ಹೇಳಿದ್ದಾರೆ.

ಜಗತ್ತಿನಾದ್ಯಂತ ಉಷ್ಣಾಂಶ ಏರಿಕೆಯನ್ನು ನಾವು ನೋಡುತ್ತಿದ್ದು, ಮಹಾ ದುರಂತದ ಕಡೆಗೆ ಸಾಗುತ್ತಿದ್ದೇವೆ. ದುರಾದೃಷ್ಟವಶಾತ್, ಹವಾಮಾನ ಬದಲಾವಣೆ ತೊಂದರೆಯನ್ನು ಅಭಿವೃದ್ಧಿ ಹೊಂದಿದ್ದ ರಾಷ್ಟ್ರಗಳು ವಿವರಿಸುತ್ತಿಲ್ಲ, ಕ್ಯೂಟೊ ಶಿಷ್ಟಾಚಾರದಿಂದ ಪ್ಯಾರಿಸ್ ಒಪ್ಪಂದ, ಈ ವರ್ಷ ಗ್ಲಾಸ್ಗೋದಲ್ಲಿ ನಡೆದ COP26 ಸಭೆಯವರೆಗೂ ಗುರಿ ಉದ್ದೇಶಗಳಿಗೆ ಬದ್ಧವಾಗಿಲ್ಲ, ಇಂತಹ ಪದ್ಧತಿಯಿಂದ ಸಭೆಯಲ್ಲಿ ಗಣನೀಯವಾದ ಯಾವುದೇ ಪ್ರತಿಫಲ  ಬರಲ್ಲ ಎಂದು ಅವರು ಹೇಳಿದ್ದಾರೆ.

ಪ್ರತಿಯೊಂದು ದೇಶವೂ ಇಕ್ವಿಟಿಯನ್ನು ಆಧರಿಸಿದ ಜವಾಬ್ದಾರಿಯನ್ನು ಹೊಂದಿದೆ. ಪ್ಯಾರಿಸ್ ಒಪ್ಪಂದದಲ್ಲಿ ಹವಾಮಾನ ಬದಲಾವಣೆಗೆ ಅಭಿವೃದ್ಧಿ ಹೊಂದಿದ ದೇಶಗಳು ಒಪ್ಪಿಕೊಂಡಿರುವ $ 100 ಬಿಲಿಯನ್ ಹೂಡಿಕೆ ಎಲ್ಲಿದೆ? ಎಂದು ಪ್ರಶ್ನಿಸಿದ ಅವರು, ಹವಾಮಾನ ಬದಲಾವಣೆಗಾಗಿ ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವಲ್ಲಿ ವೆಚ್ಚವಾಗುತ್ತಿದೆ. ಯಾರೂ ಕೂಡಾ ಪ್ಯಾರಿಸ್ ಒಪ್ಪಂದ ನಂತರ ಅದರ ಬಗ್ಗೆ ಮಾತನಾಡುತ್ತಿಲ್ಲ, ಗುರಿಗಳ ಸ್ಥಳಾಂತರದಿಂದ ಯಾವುದೇ ಪ್ರಯೋಜನವಾಗಲ್ಲ, ಪ್ಯಾರಿಸ್ ಒಪ್ಪಂದ ಮತ್ತು ನವೀಕರಿಸಬಹುದಾದ ಇಂಧನಕ್ಕೆ ಅದರ ಬದ್ಧತೆಯನ್ನು ಗೌರವಿಸುವಲ್ಲಿ ಭಾರತವು ಯುಎಸ್, ಯುಕೆ ಮತ್ತು ಇತರ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಉತ್ತಮವಾಗಿದೆ ಎಂದರು. 

ಜಾಗತಿಕ ತಾಪಮಾನದಲ್ಲಿ ಮೂರು ಅಂಶಗಳಿವೆ ಎಂದು ಅವರು ಹೇಳಿದ ಎನ್ ಐಎಎಸ್ ನಿರ್ದೇಶಕರು, ಹವಾಮಾನ ಬದಲಾವಣೆಯು ಹೆಚ್ಚಾಗಿದೆ ಎಂಬ ಅರಿವಿದೆ. ಅದು ಜೀವನ ಮತ್ತು ಜೀವನೋಪಾಯದ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರುತ್ತದೆ. ಎಲ್ಲಾ ಪಾಲುದಾರರಿಂದ ಜಾಗತಿಕ ಪ್ರತಿಕ್ರಿಯೆ ಇರಬೇಕು; ಇದು ಕಾಣೆಯಾಗಿದೆ.  ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ಬಲಿಪಶುಗಳನ್ನಾಗಿ ಮಾಡಲು ಸಾಧ್ಯವಿಲ್ಲ. ಅವರಿಗೆ ಥರ್ಮಲ್ ವಿದ್ಯುತ್ ಕೇಂದ್ರಗಳನ್ನು ಮುಚ್ಚಲು ಹೇಳಲಾಗುವುದಿಲ್ಲ. ಇದು ಕಾರ್ಯಸಾಧ್ಯವಲ್ಲ. ಒಂದು ದೇಶದ ಸರ್ಕಾರವು ಹವಾಮಾನ ಬದಲಾವಣೆಯ ಜ್ಞಾನ ಮತ್ತು ಮಾನವ ಅಗತ್ಯಗಳ ನಡುವೆ ಸಮತೋಲನವನ್ನು ಹೊಂದಿರಬೇಕು. ಭಾರತವು ತನ್ನ ಗ್ರಾಮಗಳನ್ನು ವಿದ್ಯುದ್ದೀಕರಿಸಲು ಉಷ್ಣ ಶಕ್ತಿಯ ಅಗತ್ಯವಿದೆ ಎಂದು ಅವರು ಹೇಳಿದರು.

ಕಳೆದ 150 ವರ್ಷಗಳಲ್ಲಿ ಹಸಿರುಮನೆ ಅನಿಲಗಳು ಮತ್ತಿತರ ಕಾರಣಗಳಿಂದ ಜಾಗತಿಕ ಜಾಗತಿಕ ತಾಪಮಾನ 1.1 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಾಗಿದೆ.  ಮುಂದಿನ 20 ವರ್ಷಗಳಲ್ಲಿ ಇದು 1.5° C ಮುಟ್ಟುವ ನಿರೀಕ್ಷೆಯಿದೆ. ಐತಿಹಾಸಿಕ, ಪ್ರಸ್ತುತ ಮತ್ತು ಭವಿಷ್ಯದ ಸನ್ನಿವೇಶದಲ್ಲಿ ಇಂಧನ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು ಮತ್ತು ಸಮಾನತೆಯನ್ನು ಖಾತ್ರಿಪಡಿಸಿಕೊಳ್ಳುವುದು ಎಲ್ಲಾ ದೇಶಗಳ ಜವಾಬ್ದಾರಿಯಾಗಿದೆ ಎಂದು ಡಾ ನಾಯಕ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com